ಕೇಂದ್ರ ಸರ್ಕಾರದ ಉದ್ಯೋಗ ಆಕಾಂಕ್ಷಿಗಳಾ? ಇಲ್ಲಿದೆ 152 ಹುದ್ದೆಗಳು- ₹2 ಲಕ್ಷಕ್ಕೂ ಅಧಿಕ ಸಂಬಳ

udyoga-cancer
Published on

ಕೋಲ್ಕತಾದಲ್ಲಿರುವ ಚಿತ್ತರಂಜನ್ ನ್ಯಾಷನಲ್ ಕ್ಯಾನ್ಸರ್ ಇನ್‍ಸ್ಟಿಟ್ಯೂಟ್ (ಸಿಎನ್‍ಸಿಐ) ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುತ್ತದೆ. ಪ್ರಸ್ತುತ ಸಂಸ್ಥೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು ಹುದ್ದೆಗಳು: 152

ಸಿಎನ್‍ಸಿಐ ಆಸ್ಪತ್ರೆ ಹಾಗೂ ಸಂಸ್ಥೆಯಲ್ಲಿ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಅಭ್ಯರ್ಥಿಗಳು ಆನ್‍ಲೈನ್‍ನಲ್ಲಿ ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ.

ಮೀಸಲಾತಿ:

152 ಹುದ್ದೆಗಳಲ್ಲಿ ಸಾಮಾನ್ಯವರ್ಗದ ಅಭ್ಯರ್ಥಿಗಳಿಗೆ 68 ಸ್ಥಾನ, ಎಸ್ಸಿಗೆ 28, ಎಸ್‍ಟಿಗೆ 9, ಇತರ ಹಿಂದುಳಿದ ವರ್ಗಕ್ಕೆ 37, ಆರ್ಥಿಕವಾಗಿ ದುರ್ಬಲವಾಗಿರು ಅಭ್ಯರ್ಥಿಗಳಿಗೆ 10 ಸ್ಥಾನಗಳನ್ನು ಮೀಸಲಿರಿಸಲಾಗಿದೆ. ಇದರಲ್ಲಿ ಬ್ಯಾಕ್‍ಲಾಗ್ ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೂ ಸ್ಥಾನ ಮೀಸಲಿಡಲಾಗಿದೆ.

ಹುದ್ದೆ ವಿವರ

* ಸ್ಟಾಫ್​ ನರ್ಸ್ - 106

ಆಂಕೋಲಜಿ ನರ್ಸಿಂಗ್‍ನಲ್ಲಿ ಜಿಎನ್‍ಎಂ ಪ್ಲಸ್ ಡಿಪ್ಲೋಮಾ ಅಥವಾ ಬಿಎಸ್ಸಿ ನರ್ಸಿಂಗ್ ಅಥವಾ ಜಿಎನ್‍ಎಂ ಪ್ಲಸ್‍ನಲ್ಲಿ 2 ವರ್ಷದ ವೃತ್ತಿ ಅನುಭವ ಹೊಂದಿರುವ 35 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಮೀಸಲಾತಿ ಅಭ್ಯರ್ಥಿಗಳಿಗೆ ವಯೋಸಡಿಲಿಕೆ ಇದೆ. ಅಭ್ಯರ್ಥಿಗಳು ಕಡ್ಡಾಯವಾಗಿ ಇಂಡಿಯನ್ ನರ್ಸಿಂಗ್ ಕೌನ್ಸಿಲ್/ ಸ್ಟೇಟ್ ನರ್ಸಿಂಗ್ ಕೌನ್ಸಿಲ್‍ನಲ್ಲಿ ನೋಂದಾಯಿತರಾಗಿರಬೇಕು. ನರ್ಸಿಂಗ್ ಹುದ್ದೆಗೆ ಮಾಸಿಕ 44,900 - 1,42,400 ರೂ. ಮೂಲ ವೇತನ ಹೊರತಾಗಿ ಕೋಲ್ಕತಾದಲ್ಲಿ ನೇಮಕ ಮಾಡಲಾಗುವ ಇದೇ ಸ್ಥಾನಮಾನದ ಕೇಂದ್ರ ಸರ್ಕಾರದ ಸಿಬ್ಬಂದಿಗೆ ನೀಡಲಾಗುವ ಸಾಮಾನ್ಯ ಭತ್ಯೆಗಳನ್ನು ನೀಡಲಾಗುವುದು.

* ಸ್ಪೆಷಲಿಸ್ಟ್ ಗ್ರೇಡ್ ಐ - 14

ಮೆಡಿಕಲ್ ಗ್ಯಾಸ್ಟ್ರೋಎಂಟರಾಲಜಿ, ನ್ಯೂಕ್ಲಿಯರ್ ಮೆಡಿಸಿನ್, ಸರ್ಜಿಕಲ್ ಆಂಕಾಲಜಿ ಸೇರಿ ವಿವಿಧ ವಿಭಾಗಗಳ ಸ್ಪೆಷಲಿಸ್ಟ್​ಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದ್ದು, 50 ವರ್ಷದೊಳಗಿನ (ಮೀಸಲಾತಿ ಅಭ್ಯರ್ಥಿಗಳಿಗೆ ವಯೋ ಸಡಿಲಿಕೆ ಇದೆ) ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅಧಿಸೂಚನೆಯಲ್ಲಿ ಸೂಚಿಸಲಾದ ವಿಷಯಗಳಲ್ಲಿ ತಜ್ಞರಾಗಿರಬೇಕು. ಮಾಸಿಕ 1,23,100- 2,15,900 ರೂ. ಭತ್ಯೆ ನೀಡಲಾಗುವುದು.

* ಸ್ಪೆಷಲಿಸ್ಟ್ ಗ್ರೇಡ್ ಐಐ - 32

ಸಂಸ್ಥೆಯ ಅವಶ್ಯಕತೆ ಅನುಸಾರ ಅಧಿಸೂಚನೆಯಲ್ಲಿ ತಿಳಿಸಲಾದ ವಿಷಯ ತಜ್ಞತೆ ಹೊಂದಿರುವ 45 ವರ್ಷದೊಳಗಿನ (ಮೀಸಲಾತಿ ಅಭ್ಯರ್ಥಿಗಳಿಗೆ ವಯೋ ಸಡಿಲಿಕೆ ಇದೆ)ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಮಾಸಿಕ 67,700- 2,08,700 ರೂ. ವೇತನ ನೀಡಲಾಗುವುದು.

ಅರ್ಜಿ ಶುಲ್ಕ: ಸಾಮಾನ್ಯವರ್ಗ, ಆರ್ಥಿಕವಾಗಿ ದುರ್ಬಲವಾಗಿರುವ ವರ್ಗ, ಇತರ ಹಿಂದುಳಿದ ವರ್ಗ ಅಭ್ಯರ್ಥಿಗಳಿಗೆ 1000 ರೂ., ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ 500 ರೂ. ಶುಲ್ಕ ನಿಗದಿಯಾಗಿದ್ದು, ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇದೆ.

ಅರ್ಜಿ ಸಲ್ಲಿಸಲು ಕೊನೇ ದಿನ: 18.3.2021

ಅಧಿಸೂಚನೆಗೆ: https://bit.ly/3q9qtLs

ಮಾಹಿತಿಗೆ: http://www.cnci.ac.in

ಹೆಚ್ಚಿನ ಉದ್ಯೋಗ ಸುದ್ದಿಗೆ ಕ್ಲಿಕ್ಕಿಸಿ:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net