ಕಲ್ಲಿದ್ದಲು ಸಂಸ್ಥೆಯಲ್ಲಿ ಮ್ಯಾನೇಜಿಂಗ್​ ಟ್ರೇನಿ ಹುದ್ದೆ- 588 ಪೋಸ್ಟ್‌, 1.60 ಲಕ್ಷ ರೂ.ವರೆಗೆ ಸಂಬಳ

coal india
Published on

ಕಲ್ಲಿದ್ದಲು ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುವ ಕೋಲ್​ ಇಂಡಿಯಾ ಲಿಮಿಟೆಡ್​ ಮಹಾರತ್ನ ಮಾನ್ಯತೆಯ ಸಾರ್ವಜನಿಕ ವಲಯದ ಉದ್ದಿಮೆಯಾಗಿದೆ. ಕೋಲ್ಕತ್ತಾದಲ್ಲಿ ವಿಶ್ವದ ಅತಿದೊಡ್ಡ ಕಲ್ಲಿದ್ದಲು ಉತ್ಪಾದಿಸುವ ಸಂಸ್ಥೆ ಎನಿಸಿಕೊಳ್ಳುವ ಮೂಲಕ ಅತಿದೊಡ್ಡ ಕಾಪೋರ್ರೇಟ್​ ಸಂಸ್ಥೆಯಾಗಿದೆ.

ಪ್ರಸ್ತುತ ಸಂಸ್ಥೆಯು ಮ್ಯಾನೇಜ್​ಮೆಂಟ್​ ಟ್ರೇನಿ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದಅರ್ಜಿಆಹ್ವಾನಿಸಿದೆ. 2021ರಲ್ಲಿ ಗೇಟ್​ (ಜಿಎಟಿಇ) ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಮಾತ್ರ ಅರ್ಜಿಸಲ್ಲಿಸಲು ಅರ್ಹರಾಗಿರುತ್ತಾರೆ. ಆಯ್ಕೆಯಾದ ಅಭ್ಯರ್ಥಿಗಳು ಸಂಸ್ಥೆಯಲ್ಲಿ ಕನಿಷ್ಠ 60 ವಾರ ಕಾರ್ಯನಿರ್ವಹಿಸುವುದಾಗಿ 3ಲಕ್ಷ ರೂ.+ ಜಿಎಸ್​ಟಿ ಮೊತ್ತ ಸೇರಿ ಸೇವಾಬಾಂಡ್​ ನೀಡಬೇಕು.
ಒಟ್ಟು ಹುದ್ದೆಗಳು: 588

ಹುದ್ದೆ ವಿವರ
- ಮ್ಯಾನೇಜಿಂಗ್​ ಟ್ರೇನಿ
* ಮೈನಿಂಗ್​ - 253
* ಎಲೆಕ್ಟ್ರಿಕಲ್​ - 117
* ಮೆಕಾನಿಕಲ್​ - 134
* ಸಿವಿಲ್​ - 57
* ಇಂಡಸ್ಟ್ರಿಯಲ್​ ಇಂಜಿನಿಯರಿಂಗ್​ - 15
* ಜಿಯಾಲಜಿ - 12

ವಿದ್ಯಾರ್ಹತೆ: ಮೈನಿಂಗ್​, ಎಲೆಕ್ಟ್ರಿಕಲ್​/ ಎಲೆಕ್ಟ್ರಿಕಲ್​ ಆ್ಯಂಡ್​ ಎಲೆಕ್ಟ್ರಾನಿಕ್ಸ್​/ ಎಲೆಕ್ಟ್ರಾನಿಕ್ಸ್​ ಆ್ಯಂಡ್​ ಇಂಜಿನಿಯರಿಂಗ್​, ಮೆಕಾನಿಕಲ್​, ಸಿವಿಲ್​, ಇಂಡಸ್ಟ್ರಿಯಲ್​ ಇಂಜಿನಿಯರಿಂಗ್​ನಲ್ಲಿ ಬಿಇ/ ಬಿ.ಟೆಕ್​/ ಬಿಎಸ್ಸಿ ಪದವಿ, ಜಿಯಾಲಜಿಯಲ್ಲಿ ಎಂಎಸ್ಸಿ/ ಎಂ.ಟೆಕ್​ ಪದವಿ ಪಡೆದಿದ್ದು, ಕನಿಷ್ಠ ಶೇ.60 (ಮೀಸಲಾತಿ ಕೋರುವ ಅಭ್ಯರ್ಥಿಗಳು ಶೇ.55) ಅಂಕ ಪಡೆದಿರಬೇಕು. 2020-21ರ ಶೈಕ್ಷಣಿಕ ವರ್ಷದಲ್ಲಿ ಪದವಿ ಪಡೆದ ಅಭ್ಯರ್ಥಿಗಳಿಗೆ ಮಾತ್ರ ಅವಕಾಶ.

ವಯೋಮಿತಿ: 4.8.2021ಕ್ಕೆ ಅನ್ವಯವಾಗುವಂತೆ ಗರಿಷ್ಠ 30 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಮೀಸಲಾತಿ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮದನ್ವಯ ವಯೋಸಡಿಲಿಕೆ ಇದೆ.

ಆಯ್ಕೆ ಪ್ರಕ್ರಿಯೆ: ಗೇಟ್​-2021ರ ಅಂಕ (2020 ಹಾಗೂ ಇದರ ಹಿಂದಿನ ಗೇಟ್​ ಪರೀಕ್ಷೆಯ ಅಂಕಗಳನ್ನು ಪರಿಗಣಿಸಲಾಗುವುದಿಲ್ಲ), ಮೀಸಲಾತಿಗಳನ್ನು ಆಧರಿಸಿ ಶಾರ್ಟ್​ಲಿಸ್ಟ್​ ಮಾಡಲಾದ ಅಭ್ಯರ್ಥಿಗಳನ್ನು 1:1.5 ಅನುಪಾತದ ಅನುಸಾರ ಅಂತಿಮ ಆಯ್ಕೆ ಪ್ರಕ್ರಿಯೆಗೆ ಆಹ್ವಾನಿಸಲಾಗುವುದು. ಅಂತಿಮ ಆಯ್ಕೆ ಪಟ್ಟಿಯನ್ನು ವೆಬ್​ಸೈಟ್​ನಲ್ಲಿ ಪ್ರಕಟಿಸಲಾಗುವುದು.

ಅರ್ಜಿ ಶುಲ್ಕ: ಎಸ್ಸಿ, ಎಸ್ಟಿ, ಅಂಗವಿಕಲ, ಕೋಲ್​ ಇಂಡಿಯಾ ಲಿಮಿಟೆಡ್​ನ ಸಿಬ್ಬಂದಿ ಹೊರತುಪಡಿಸಿ ಉಳಿದ ಅಭ್ಯರ್ಥಿಗಳು 1,180 ರೂ.ಅರ್ಜಿಶುಲ್ಕವನ್ನು ಆನ್​ಲೈನ್​ ಮೂಲಕ ಪಾವತಿಸಬೇಕು.

ವೇತನ: ಮ್ಯಾನೇಜಿಂಗ್​ ಟ್ರೇನಿ ಹುದ್ದೆಯು ಇ-2 ಗ್ರೇಡ್​ನಲ್ಲಿರಲಿದ್ದು, ಮಾಸಿಕ 50,000-1,60,000 ರೂ. ವೇತನ ಜತೆ ಡಿಎ, ಮನೆ ಬಾಡಿಗೆ ಭತ್ಯೆ, ಪಿಆರ್​ಪಿ, ವೈದ್ಯಕಿಯ ಸೌಲಭ್ಯ, ಗ್ರಾಚುಟಿ, ಸಿಎಂಪಿಎ್​, ಸಿಎಂಪಿಎಸ್​, ಸಿಐಎಲ್​ ಪೆನ್ಷನ್​ಗಳನ್ನೂ ನೀಡಲಾಗುವುದು.

ಮೀಸಲಾತಿ: ಸಾಮಾನ್ಯವರ್ಗದ ಅಭ್ಯರ್ಥಿಗೆ 234 ಸ್ಥಾನ, ಆಥಿರ್ಕವಾಗಿ ದುರ್ಬಲವಾಗಿರುವ ಅಭ್ಯರ್ಥಿಗೆ 76, ಎಸ್ಸಿಗೆ 84, ಎಸ್ಟಿಗೆ 39, ಇತರ ಹಿಂದುಳಿದ ವರ್ಗದ ಅಭ್ಯರ್ಥಿಗೆ 155 ಸ್ಥಾನ ಮೀಸಲಿರಿಸಿದ್ದು, ಅಂಗವಿಕಲ ಅಭ್ಯರ್ಥಿಗಳಿಗೆ 27 ಸ್ಥಾನ ಕಾಯ್ದಿರಿಸಲಾಗಿದೆ.

ಅರ್ಜಿ ಸಲ್ಲಿಸಲು ಕೊನೇ ದಿನ: 9.9.2021
ಅಧಿಸೂಚನೆಗೆ: https://bit.ly/3fLPFFO

ಮಾಹಿತಿಗೆ: http://www.coalindia.in

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net