ವಿವಿಧ ಶೈಕ್ಷಣಿಕ ಅರ್ಹತೆಯವರಿಗೆ ಮಾನವ ಹಕ್ಕುಗಳ ಆಯೋಗದಿಂದ ಅರ್ಜಿ ಆಹ್ವಾನ

HSRC
Published on

ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆರಂಭದಲ್ಲಿ ಈ ನೇಮಕಾತಿಯು 6 ತಿಂಗಳ ಅವಧಿಗೆ ಅಥವಾ ನೇಮಕಾತಿ ಅದವರ ಸೇವೆಯು ತೃಪ್ತಿಕರವಾದಲ್ಲಿ ಅವಧಿಯನ್ನು ಮುಂದುವರಿಸಲಾಗುವುದು. ಈ ನೇಮಕಾತಿಗಳು ತಾತ್ಕಾಲಿಕವಾಗಿ ನಿಗಧಿತ ಅವಧಿಗೆ ಅಥವಾ ಸರ್ಕಾರದಿಂದ ನಿಯೋಜನೆ ಮೇರೆಗೆ ಭರ್ತಿಯಾಗುವವರೆಗೆ ಅಥವಾ ಸರ್ಕಾರದಿಂದ ಕ್ರಮಬದ್ಧ ನೇಮಕಾತಿ ನಡೆಯುವವರೆಗೆ ಅಥವಾ ಆಯೋಗದ ಮುಂದಿನ ಆದೇಶದವರೆಗೆ ಒಳಪಟ್ಟಿರುತ್ತದೆ. ಆಸಕ್ತ ಅಭ್ಯರ್ಥಿಗಳು ಇಮೇಲ್ ಅಥವಾ ಅಂಚೆ ಮೂಲಕ ಅರ್ಜಿ ಸಲ್ಲಿಸಬಹುದು.

 ಒಟ್ಟು ಹುದ್ದೆಗಳು: 10


ಹುದ್ದೆ ಸಂಖ್ಯೆ ವೇತನ ಮಾಸಿಕ ರೂ.ಗಳಲ್ಲಿ

* ಅಪರ ನಿಬಂಧಕ 1 51,550

* ಸಹಾಯಕ ನಿಬಂಧಕ 1 52,650

* ಕೋರ್ಟ್ ಅಧಿಕಾರಿ 1 43,100

* ತೀರ್ಪು ಬರಹಗಾರ 1 37,900

* ಕಾನೂನು ಸಹಾಯಕರು/ ಸಂಶೋಧನಾ ಸಹಾಯಕ 2 33,450

* ಶೀಘ್ರಲಿಪಿಗಾರ 2 27,650

* ಸಹಾಯಕ 1 30,350

* ವಾಹನ ಚಾಲಕ 1 21,400

ವಿದ್ಯಾರ್ಹತೆ: ಹುದ್ದೆಗಳಿಗೆ ಅನುಗುಣವಾಗಿ ಎಸ್ಸೆಸ್ಸೆಲ್ಸಿ/ ತತ್ಸಮಾನ ಶಿಕ್ಷಣ, ಕಂಪ್ಯೂಟರ್ ಸೈನ್ಸ್ ಪದವಿ, ಯಾವುದೇ ಪದವಿ, ಕಾನೂನು ಪದವಿ, ಎಲ್​ಎಲ್​ಎಂ ಅಧ್ಯಯನ ಮಾಡಿರಬೇಕು. ಕನ್ನಡ, ಇಂಗ್ಲಿಷ್ ಭಾಷಾ ಜ್ಞಾನ ಹಾಗೂ ಕಂಪ್ಯೂಟರ್ ಜ್ಞಾನ ಅವಶ್ಯ. ಶೀಘ್ರಲಿಪಿಗಾರ ಹುದ್ದೆಗೆ ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಸೀನಿಯರ್ ಗ್ರೇಡ್​ನಲ್ಲಿ ಶೀಘ್ರಲಿಪಿ ಹಾಗೂ ಬೆರಳಚ್ಚು ಪರೀಕ್ಷೆಯಲ್ಲಿ ಉತ್ತೀರ್ಣ.ವಾಹನ ಚಾಲಕ ಹುದ್ದೆಗೆ ಲಘು ವಾಹನ ಚಾಲನಾ ಪರವಾನಗಿ ಹೊಂದಿರಬೇಕು.

ವಯೋಮಿತಿ: 1.7.2021ಕ್ಕೆ ಅನ್ವಯವಾಗುವಂತೆ ಗರಷ್ಠ 62 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಕೊನೇ ದಿನ: 4.9.2021

ಅರ್ಜಿ ಸಲ್ಲಿಕೆ ವಿಳಾಸ: ಕಾರ್ಯದರ್ಶಿಗಳು, ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ, 5ನೇ ಹಂತ, ಬಹುಮಹಡಿ ಕಟ್ಟಡ, 3ನೇ ಮಹಡಿ, ಬೆಂಗಳೂರು - 560001

ಅರ್ಜಿ ಸಲ್ಲಿಕೆ ಮೇಲ್ ಐಡಿ: secretary-kshrc@karnataka.gov.in

ಅಧಿಸೂಚನೆಗೆ: https://bit.ly/3ywyMpX

ಮಾಹಿತಿಗೆ: http://kshrc.karnataka.gov.in

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net