

ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗಳಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿರುವ ಹುದ್ದೆಗಳು 6 ತಿಂಗಳ ಮಟ್ಟಿಗೆ ಅಥವಾ ಕೋವಿಡ್ ಪರಿಸ್ಥಿತಿ ಸುಧಾರಿಸುವವರೆಗೆ (ಯಾವುದೋ ಮೊದಲೋ ಅಲ್ಲಿಯವರೆಗೆ) ಕಾರ್ಯಾವಧಿಯನ್ನು ಹೊಂದಿವೆ. ಅಭ್ಯರ್ಥಿಗಳನ್ನು ನೇರ ಸಂದರ್ಶನಕ್ಕೆ ಆಹ್ವಾನಿಸಲಾಗಿದೆ.
ಹುದ್ದೆ ವಿವರ
* ತಜ್ಞ ವೈದ್ಯರು - 6
* ವೈದ್ಯರು - 12
* ಶುಶ್ರೂಷಕರು - 18
* ಐಸಿಯು ಟೆಕ್ನೀಷಿಯನ್ - 1
* ಗ್ರೂಪ್ ಡಿ - 6
* ಮೈಂಟೆನೆನ್ಸ್ ಇಂಜಿನಿಯರ್ - 1
* ಬಯೋ ಮೆಡಿಕಲ್ ಇಂಜಿನಿಯರ್ - 1
ಶೈಕ್ಷಣಿಕ ಅರ್ಹತೆ: ಎಸ್ಸೆಸ್ಸೆಲ್ಸಿ, ಬಯೋ ಮೆಕ್ಯಾನಿಕಲ್ ಇಂಜಿನಿಯರಿಂಗ್ನಲ್ಲಿ ಬಿಇ/ ಬಯೋ ಮೆಡಿಕಲ್ ಇಂಜಿನಿಯರಿಂಗ್, ಮೆಕ್ಯಾನಿಕಲ್/ ಎಲೆಕ್ಟ್ರಿಕಲ್/ ಎಲೆಕ್ಟ್ರಾನಿಕ್ಸ್, ಅನಸ್ತೇಷಿಯಾದಲ್ಲಿ ಡಿಪ್ಲೊಮಾ, ನಸಿರ್ಂಗ್ನಲ್ಲಿ ಬಿಎಸ್ಸಿ/ಜಿಎನ್ಎಂ ಟ್ರೇನಿಂಗ್, ಎಂಡಿ ಜನರಲ್ ಮೆಡಿಸನ್, ಎಂಬಿಬಿಎಸ್, ಡಿಎಂ/ಡಿಎನ್ಬಿ ಮಾಡಿರುವ ಅಭ್ಯರ್ಥಿಗಳು ಅರ್ಹರು.
ವೇತನ: ತಜ್ಞ ವೈದ್ಯರಿಗೆ ಮಾಸಿಕ 1,20,000 ರೂ., ವೈದ್ಯರಿಗೆ ಮಾಸಿಕ 60,000 ರೂ., ಶುಶ್ರೂಷಕ ಹಾಗೂ ಐಸಿಯು ಟೆಕ್ನಿಷಿಯನ್ಗೆ ಮಾಸಿಕ 25,000 ರೂ., ಗ್ರೂಪ್ ಡಿ ಹುದ್ದೆಗೆ ಮಾಸಿಕ 15,000 ರೂ., ಇಂಜಿನಿಯರ್ ಹುದ್ದೆಗಳಿಗೆ ಮಾಸಿಕ 30,000 ರೂ. ವೇತನ ನಿಗದಿಪಡಿಸಲಾಗಿದೆ.
ಸೂಚನೆ: ಕೋವಿಡ್ 19 ನಿಮಿತ್ತ ಕರ್ತವ್ಯಕ್ಕೆ ನೇಮಕಗೊಳ್ಳುವ ಸಿಬ್ಬಂದಿ ಸರ್ಕಾರದ ಆರೋಗ್ಯ ವಿಮೆಗೆ ಒಳಪಡುತ್ತಾರೆ ಹಾಗೂ ಇವರಿಗೆ ಕೋವಿಡ್ ಲಸಿಕೆ ನೀಡಲಾಗುವುದು. ಮೇಲಿನ ಹುದ್ದೆಗಳ ಗೌರವ ವೇತನವು ಸಾಮಾನ್ಯ ದರದಲ್ಲಿ ನಮೂದಿಸಿದ್ದು, ನೇಮಕಾತಿ ಸಂದರ್ಭದಲ್ಲಿ ನೆಗೋಷಿಯೆಷನ್ ನಡೆಸುವ ನಿಬಂಧನೆಗೆ ಒಳಪಟ್ಟಿರುತ್ತದೆ. ಸಂದರ್ಶನಕ್ಕೆ ಹಾಜರಾಗುವಾಗ ಅಭ್ಯರ್ಥಿಗಳು ಅಗತ್ಯ ಶೈಕ್ಷಣಿಕ ಹಾಗೂ ವೃತ್ತಿ ಅನುಭವದ ದಾಖಲೆಗಳನ್ನು ಮತ್ತು ಇದರ 2 ಜೆರಾಕ್ಸ್ ಪತ್ರಿಗಳನ್ನು, ಭಾವಚಿತ್ರ ತರಲು ಸೂಚಿಸಲಾಗಿದೆ.
ಸಂದರ್ಶನ ನಡೆಯುವ ದಿನಾಂಕ : 2021ರ ಮೇ 24 ರಿಂದ 28ರ ವರೆಗೆ ಬೆಳಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆ ವರೆಗೆ. (ರಜಾದಿನ ಹೊರತುಪಡಿಸಿ)
ಸಂದರ್ಶನ ನಡೆಯುವ ಸ್ಥಳ: ಜಿಲ್ಲಾ ಶಸ್ತ್ರಚಿಕಿತ್ಸಕರ ಕೊಠಡಿ, ಜಿಲ್ಲಾ ಆಸ್ಪತ್ರೆ, ಚಿಕ್ಕಬಳ್ಳಾಪುರ
ಅಧಿಸೂಚನೆಗೆ: https://bit.ly/3fyzpqE
ಮಾಹಿತಿಗೆ: 08156-272388 ಅಥವಾ ಇಮೇಲ್: dscbpur@gmail.com