ಗಡಿ ಭದ್ರತಾ ಪಡೆಯಲ್ಲಿ ಮೆಕಾನಿಕ್​ಗಳ ನೇಮಕಾತಿ: 65 ಹುದ್ದೆಗಳು ಖಾಲಿ

udyogamitra-BSF
Published on

ಗೃಹ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುವ ಗಡಿ ಭದ್ರತಾ ಪಡೆಯ (ಬಿಎಸ್​ಎಫ್‌) ವಿಮಾನ ಘಟಕದಲ್ಲಿ ಗ್ರೂಪ್​ ಸಿ (ನಾನ್​ ಗೆಜೆಟೆಡ್​- ನಾನ್​ ಮಿನಿಸ್ಟ್ರಿಯಲ್​) ಹುದ್ದೆಗಳಿಗೆ ಅರ್ಹ ಮಹಿಳಾ ಹಾಗೂ ಪುರುಷ ಅಭ್ಯರ್ಥಿಗಳಿಂದ ಆನ್​ಲೈನ್​ ಅರ್ಜಿ ಆಹ್ವಾನಿಸಲಾಗಿದೆ.

ಒಟ್ಟು ಹುದ್ದೆಗಳು: 65

ಹುದ್ದೆ ವಿವರ
* ಅಸಿಸ್ಟೆಂಟ್​ ಏರ್‌ಕ್ರಾಫ್ಟ್‌ ಮೆಕಾನಿಕ್​ (ಅಸಿಸ್ಟೆಂಟ್​ ಸಬ್​ ಇನ್​ಸ್ಪೆಕ್ಟರ್​ ದರ್ಜೆ) - 49 (ರೋಟರಿ ವಿಂಗ್​- 22, ಫಿಕ್ಸಡ್​ ವಿಂಗ್​-10, ಎಎಲ್​ಎಚ್​/ ಧ್ರುವ- 17)
* ಅಸಿಸ್ಟೆಂಟ್​ ರೇಡಿಯೋ ಮೆಕಾನಿಕ್​ (ಅಸಿಸ್ಟೆಂಟ್​ ಸಬ್​ ಇನ್​ಸ್ಪೆಕ್ಟರ್​ ದರ್ಜೆ) - 8 (ರೋಟರಿ ವಿಂಗ್​ - 3, ಫಿಕ್ಸಡ್​ ವಿಂಗ್​-1, ಎಎಲ್​ಎಚ್​/ಧ್ರುವ -4)
* ಸ್ಟೋರ್​ಮನ್​ ( ಕಾನ್​ಸ್ಟೆಬಲ್​ ದರ್ಜೆ) - 8

ಶೈಕ್ಷಣಿಕ ಅರ್ಹತೆ: ಮೆಟ್ರಿಕ್ಯುಲೇಷನ್​ನಲ್ಲಿ ವಿಜ್ಞಾನ ವಿಷಯದಲ್ಲಿ ಉತ್ತೀರ್ಣರಾಗಿರಬೇಕು. ಡೈರೆಕ್ಟೋರೇಟ್​ ಜನರಲ್​ ಆ್​ ಸಿವಿಲ್​ ಏವಿಯೇಷನ್​ನಿಂದ ಟೆಲಿಕಮ್ಯುನಿಕೇಷನ್​/ ಎಲೆಕ್ಟ್ರಾನಿಕ್​ ಇಂಜಿನಿಯರಿಂಗ್​ ಹಾಗೂ ಸಂಬಂಧಿತ ಟ್ರೇಡ್​ನಲ್ಲಿ 3 ವರ್ಷದ ಡಿಪ್ಲೊಮಾ ವ್ಯಾಸಂಗ ಮಾಡಿರಬೇಕು.

ವಯೋಮಿತಿ: ಅಸಿಸ್ಟೆಂಟ್​ ಮೆಕಾನಿಕ್​ಗೆ ಗರಿಷ್ಠ 28 ವರ್ಷ, ಕಾನ್​ಸ್ಟೆಬಲ್​ಗೆ ಗರಿಷ್ಠ 20 -25 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಮೀಸಲಾತಿ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮದನ್ವಯ ವಯೋ ಸಡಿಲಿಕೆ ಇದೆ.

ಎಲ್ಲೆಲ್ಲಿ ನೇಮಕಾತಿ?: ದೆಹಲಿ, ಗುವಾಹಟಿ, ಹಜಾರಿಬಾಗ್​, ಜೋಧ್​ಪುರ್​, ಜಲಂಧರ್​, ಬೆಂಗಳೂರುಗಳಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದೆ.

ಮೀಸಲಾತಿ: ಸಾಮಾನ್ಯವರ್ಗದ ಅಭ್ಯರ್ಥಿಗಳಿಗೆ 33 ಸ್ಥಾನ, ಆಥಿರ್ಕವಾಗಿ ದುರ್ಬಲವಾಗಿರುವ ಅಭ್ಯರ್ಥಿಗಳಿಗೆ 7, ಇತರ ಹಿಂದುಳಿದ ವರ್ಗಕ್ಕೆ 13, ಎಸ್​ಸಿ- 7, ಎಸ್​ಟಿ ಪ್ರವರ್ಗಕ್ಕೆ 5 ಸ್ಥಾನ ಮೀಸಲಿರಿಸಲಾಗಿದೆ. ಇದರಲ್ಲಿ ಮಾಜಿ ಸೈನಿಕರಿಗೆ 6 ಸ್ಥಾನ, ಮಹಿಳಾ ಅಭ್ಯರ್ಥಿಗೆ ಒಂದು ಸ್ಥಾನ ಕಾಯ್ದಿರಿಸಲಾಗಿದೆ.

ವೇತನ: 7ನೇ ವೇತನ ಶ್ರೇಣಿ ಅನ್ವಯ ಅಸಿಸ್ಟೆಂಟ್​ ಮೆಕಾನಿಕ್​ಗೆ ಮಾಸಿಕ 29,200-92,300 ರೂ. ವೇತನ ಇದೆ. ಕಾನ್​ಸ್ಟೆಬಲ್​ ಹುದ್ದೆಗೆ ಮಾಸಿಕ 21,700- 69,100 ರೂ. ವೇತನ ನಿಗದಿಪಡಿಸಲಾಗಿದೆ.

ದೈಹಿಕ ಅರ್ಹತೆ: ಮಹಿಳೆಯರಿಗೆ ಎತ್ತರ 150 ಸೆಂ. ಮೀಟರ್​, ಪುರುಷರಿಗೆ 165 ಸೆಂ.ಮೀ ಇರಬೇಕು. ಎದೆಯ ಸುತ್ತಳತೆ 76-85 ಸೆಂ.ಮೀ., ಎತ್ತರಕ್ಕೆ ಅನುಗುಣವಾಗಿ ತೂಕದ ಮಾನದಂಡ ನಿರ್ಧರಿಸಲಾಗುವುದು.

ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ದೈಹಿಕ ಪರೀಕ್ಷೆ, ವೈದ್ಯಕಿಯ ಪರೀಕ್ಷೆ, ದಾಖಲೆ ಪರಿಶೀಲನೆ ನಡೆಸಲಾಗುವುದು.

ಅರ್ಜಿಶುಲ್ಕ: ಎಸ್ಸಿ, ಎಸ್ಟಿ, ಮಹಿಳಾ, ಮಾಜಿ ಸೈನಿಕ, ಬಿಎಸ್​ಎಫ್‌ನ ಸಿಬ್ಬಂದಿ ಹೊರತುಪಡಿಸಿ ಉಳಿದ ಅಭ್ಯರ್ಥಿಗಳು 100 ರೂ. ಶುಲ್ಕ ಪಾವತಿಸಬೇಕು.

ಅರ್ಜಿ ಸಲ್ಲಿಸಲು ಕೊನೇ ದಿನ: 26.7.2021
ಅಧಿಸೂಚನೆಗೆ: https://bit.ly/2UJF7iK
ಮಾಹಿತಿಗೆ: http://www.bsf.gov.in

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net