

ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೋರೇಷನ್ ಲಿಮಿಟೆಡ್ ಕರ್ನಾಟಕ ರಾಜ್ಯಾದ್ಯಂತ ಹೊಂದಿರುವ ಗಣಿ/ ಕ್ವಾರಿಗಳಲ್ಲಿ ಕಾರ್ಯನಿರ್ವಹಿಸಲು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳುತ್ತಿದೆ. ವೃತ್ತಿ ಅನುಭವ ಇರುವ ಹಾಗೂ ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ತಿಳಿಸಿದೆ.
ಹುದ್ದೆ ವಿವರ
* ಗಣಿ ಮುಂದಾಳು (ಮೈನ್ ಫೋರ್ಮನ್) - 8
* ಮೈನ್ ಮೇಟ್ - 4
* ಬ್ಲಾಸ್ಟರ್ - 4
ವಿದ್ಯಾರ್ಹತೆ: ಎಸ್ಸೆಸ್ಸೆಲ್ಸಿ, ಮೈನಿಂಗ್ ಇಂಜಿನಿಯರಿಂಗ್ನಲ್ಲಿ ಡಿಪ್ಲೊಮಾ, ಮೈನ್ ಫೋರ್ಮನ್ ಪ್ರಮಾಣಪತ್ರ, ಬ್ಲಾಸ್ಟರ್ ಹುದ್ದೆ ಅಪೇತರು ಓದಲು ಬರೆಯಲು ತಿಳಿದಿರಬೇಕು ಹಾಗೂ ಬ್ಲಾಸ್ಟರ್ ಪ್ರಮಾಣಪತ್ರ ಹೊಂದಿರಬೇಕು.
ವಯೋಮಿತಿ: ಕನಿಷ್ಠ 23 ವರ್ಷ, ಗರಿಷ್ಠ 45 ವರ್ಷ ನಿಗದಿಪಡಿಸಲಾಗಿದೆ.
ವೇತನ: ಗಣಿ ಮುಂದಾಳು ಹುದ್ದೆಗೆ ಮಾಸಿಕ 32,000 ರೂ. ವೇತನ, ಮೈನ್ಮೇಟ್ಗೆ ಮಾಸಿಕ 25,000 ರೂ., ಬ್ಲಾಸ್ಟರ್ ಹುದ್ದೆಗೆ ಮಾಸಿಕ 20,000 ರೂ. ವೇತನ ನಿಗದಿಪಡಿಸಲಾಗಿದೆ.
ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳ ಶೈಕ್ಷಣಿಕ ಅಂಕ, ವೃತ್ತಿ ಅನುಭವ, ಕಲ್ಯಾಣ ಕರ್ನಾಟಕ ಹಾಗೂ ಸಂದರ್ಶನದಲ್ಲಿ ಪಾಲ್ಗೊಳ್ಳುವಿಕೆ ಆಧರಿಸಿ ಆಯ್ಕೆ ಮಾಡಲಾಗುವುದು.
ಸೂಚನೆ: ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ಯಲ್ಲಿ ಯಾವ ಹುದ್ದೆಗೆ ಎಂದು ನಮೂದಿಸಬೇಕು.ಪ್ರತಿ ಹುದ್ದೆಗೂ ಪ್ರತ್ಯೇಕ ಅಧಿಸೂಚನೆ ಹಾಗೂ ಅರ್ಜಿ ನಮೂನೆ ನೀಡಲಾಗಿದೆ. ನೇರ ಸಂದರ್ಶನದ ದಿನಾಂಕಕ್ಕಿಂತ ಮುಂಚಿತವಾಗಿ ಅಂಚೆ ಮೂಲಕ ಕಳುಹಿಸುವ ಅಥವಾ ಖುದ್ದಾಗಿ ಸಲ್ಲಿಸುವ ಅರ್ಜಿ ಗಳನ್ನು ಪರಿಗಣಿಸುವುದಿಲ್ಲ ಎಂದು ತಿಳಿಸಲಾಗಿದೆ.
ಸಂದರ್ಶನ ನಡೆಯುವ ದಿನಾಂಕ: ಗಣಿ ಮುಂದಾಳು ಹುದ್ದೆಗೆ ಜು.2, ಮತ್ತು ಉಳಿದ ಹುದ್ದೆಗೆ ಜು.3ರ ಬೆಳಗ್ಗೆ 11.30 ರಿಂದ ಸಂದರ್ಶನ ನಡೆಯಲಿದೆ.
ಅರ್ಜಿ ಸಲ್ಲಿಸುವ ವಿಳಾಸ: ಉಪ ಪ್ರಧಾನ ವ್ಯವಸ್ಥಾಪಕರು (ಉತ್ಪಾದನೆ), ಕಬ್ಬಿಣ ಅದಿರು ವಿಭಾಗೀಯ ಕಚೇರಿ, ವೈಷ್ಣವಿ ಫಾರ್ಮ್ಸ್, ದೌಲತ್ಪುರ ರಸ್ತೆ, ಸಂಡೂರು - 583119
ಅಧಿಸೂಚನೆಗೆ: https://bit.ly/2T29LTM
ಮಾಹಿತಿಗೆ: https://ksmc.karnataka.gov.in/