

ಬೀದರ್ನಲ್ಲಿರುವ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕ ಹಾಗೂ ಸಹ ಪ್ರಾಧ್ಯಾಪಕ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳು ಬ್ಯಾಕ್ಲಾಗ್ ಹುದ್ದೆಗಳಾಗಿದ್ದು, ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅಭ್ಯರ್ಥಿಗಳಿಗೆ ಕಡ್ಡಾಯವಾಗಿ ಕನ್ನಡ ಓದಲು, ಬರೆಯಲು ತಿಳಿದಿರಬೇಕು. ಆಯ್ಕೆ ಪ್ರಕ್ರಿಯೆ ಹಾಗೂ ವಯೋಮಿತಿಯು ಯುಜಿಸಿ ಮಾನದಂಡದಂತೆ ಇರುತ್ತದೆ ಎಂದು ತಿಳಿಸಲಾಗಿದೆ.
ಒಟ್ಟು ಹುದ್ದೆಗಳು: 94
ಹುದ್ದೆ ವಿವರ
* ಪ್ರಾಧ್ಯಾಪಕ - 19
* ಸಹ ಪ್ರಾಧ್ಯಾಪಕ - 38
* ಸಹಾಯಕ ಪ್ರಾಧ್ಯಾಪಕ - 37
* ವೆಟರ್ನರಿ ಅಟಾನಮಿ ಆಂಡ್ ಹಿಸ್ಟೊಲಜಿ 3 (ವಿಭಾಗ ಸಹಾಯಕ ಪ್ರಾಧ್ಯಾಪಕ )
* ವೆಟರ್ನರಿ ಅಟಾನಮಿ 2 (ಸಹ ಪ್ರಾಧ್ಯಾಪಕ ) 1 (ಪ್ರಾಧ್ಯಾಪಕ)
* ಪಶುವೈದ್ಯಕೀಯ ಫಾರ್ವಕಾಲಜಿ ಮತ್ತು ಟಾಕ್ಸಿಕಾಲಜಿ 1 (ಪ್ರಾಧ್ಯಾಪಕ)
* ವೆಟರ್ನರಿ ಫಿಜಿಯೋಲಜಿ ಆಂಡ್ ಬಯೋಕೆಮಿಸ್ಟ್ರಿ 3 (ವಿಭಾಗ ಸಹಾಯಕ ಪ್ರಾಧ್ಯಾಪಕ); 2 (ಸಹ ಪ್ರಾಧ್ಯಾಪಕ) ; 2 (ಪ್ರಾಧ್ಯಾಪಕ)
* ಪಶುವೈದ್ಯಕೀಯ ಶರೀರಶಾಸ್ತ್ರ ಮತ್ತು ಜೀವರಸಾಯನಶಾಸ್ತ್ರ 2 (ಸಹ ಪ್ರಾಧ್ಯಾಪಕ)
* ಪಶುವೈದ್ಯ ಪರಾವಲಂಭಿಶಾಸ್ತ್ರ 1 (ಸಹ ಪ್ರಾಧ್ಯಾಪಕ); 1 (ಪ್ರಾಧ್ಯಾಪಕ)
* ವೆಟರ್ನರಿ ಮೈಕ್ರೋಬಯಾಲಜಿ 2 (ವಿಭಾಗ ಸಹಾಯಕ ಪ್ರಾಧ್ಯಾಪಕ); 1 (ಪ್ರಾಧ್ಯಾಪಕ)
* ವೆಟರ್ನರಿ ಪ್ಯಾಥೋಲಜಿ 1 (ವಿಭಾಗ ಸಹಾಯಕ ಪ್ರಾಧ್ಯಾಪಕ); 4 (ಸಹ ಪ್ರಾಧ್ಯಾಪಕ) ; 2 (ಪ್ರಾಧ್ಯಾಪಕ)
* ವೆಟರ್ನರಿ ಪಬ್ಲಿಕ್ ಹೆಲ್ತ್ 2 (ಸಹ ಪ್ರಾಧ್ಯಾಪಕ); 1 (ಪ್ರಾಧ್ಯಾಪಕ)
* ಅನಿಮಲ್ ನ್ಯೂಟ್ರಿಷಿಯನ್ 1 (ಸಹ ಪ್ರಾಧ್ಯಾಪಕ)
* ಪಶುವೈದ್ಯಕೀಯ ಶಸ್ತ್ರಚಿಕಿತ್ಸೆ ಮತ್ತು ವಿಕಿರಣಶಾಸ್ತ್ರ 1 (ವಿಭಾಗ ಸಹಾಯಕ ಪ್ರಾಧ್ಯಾಪಕ); 4 (ಸಹ ಪ್ರಾಧ್ಯಾಪಕ); 1 (ಪ್ರಾಧ್ಯಾಪಕ)
* ವೆಟರ್ನರಿ ಮೆಡಿಸನ್ 5 (ವಿಭಾಗ ಸಹಾಯಕ ಪ್ರಾಧ್ಯಾಪಕ); 4 (ಸಹ ಪ್ರಾಧ್ಯಾಪಕ) ; 1 (ಪ್ರಾಧ್ಯಾಪಕ)
* ಪ್ರಾಣಿ ಸಂತಾನೋತ್ಪತ್ತಿ, ಸ್ತ್ರೀರೋಗ ಮತ್ತು ಪ್ರಸೂತಿ 3 (ವಿಭಾಗ ಸಹಾಯಕ ಪ್ರಾಧ್ಯಾಪಕ); 4 (ಸಹ ಪ್ರಾಧ್ಯಾಪಕ) ; 1 (ಪ್ರಾಧ್ಯಾಪಕ)
* ಪಶುವೈದ್ಯಕೀಯ ಪ್ರಾಣಿ ಪೋಷಣೆ 1 (ವಿಭಾಗ ಸಹಾಯಕ ಪ್ರಾಧ್ಯಾಪಕ)
* ಅನಿಮಲ್ ಜೆನೆಟಿಕ್ಸ್ ಆಂಡ್ ಬ್ರಿಡಿಂಗ್ 3 (ವಿಭಾಗ ಸಹಾಯಕ ಪ್ರಾಧ್ಯಾಪಕ); 2 (ಸಹ ಪ್ರಾಧ್ಯಾಪಕ); 1 (ಪ್ರಾಧ್ಯಾಪಕ)
* ಲೈವ್ಸ್ಟಾಕ್ ಪ್ರೊಡಕ್ಷನ್ ಮ್ಯಾನೇಜ್ವೆುಂಟ್ 5 (ವಿಭಾಗ ಸಹಾಯಕ ಪ್ರಾಧ್ಯಾಪಕ); 4 (ಸಹ ಪ್ರಾಧ್ಯಾಪಕ); 2 (ಪ್ರಾಧ್ಯಾಪಕ)
* ಲೈವ್ ಸ್ಟಾಕ್ ಪ್ರೊಡಕ್ಷನ್ ಟೆಕ್ನಾಲಜಿ 1 (ಸಹ ಪ್ರಾಧ್ಯಾಪಕ); 2 (ಪ್ರಾಧ್ಯಾಪಕ)
* ವೆಟರ್ನರಿ ಆಂಡ್ ಅನಿಮಲ್ ಹಸ್ಬಂಡರಿ ಎಕ್ಸ್ಟೆನ್ಷನ್ 1 (ವಿಭಾಗ ಸಹಾಯಕ ಪ್ರಾಧ್ಯಾಪಕ); 2 (ಸಹ ಪ್ರಾಧ್ಯಾಪಕ)
* ಪಶುವೈದ್ಯಕೀಯ ಕ್ಲಿನಿಕಲ್ ಕಾಂಪ್ಲೆಕ್ಸ್ (ಬೋಧನೆ) 3 (ವಿಭಾಗ ಸಹಾಯಕ ಪ್ರಾಧ್ಯಾಪಕ); 2 (ಸಹ ಪ್ರಾಧ್ಯಾಪಕ); 1 (ಪ್ರಾಧ್ಯಾಪಕ)
* ಇನ್ಸ್ಟ್ರಕ್ಷನಲ್ ಲೈವ್ಸ್ಟಾಕ್ ಫಾಮ್ರ್ ಕಾಂಪ್ಲೆಕ್ಸ್ 2 (ವಿಭಾಗ ಸಹಾಯಕ ಪ್ರಾಧ್ಯಾಪಕ); 2 (ಸಹ ಪ್ರಾಧ್ಯಾಪಕ); 1 (ಪ್ರಾಧ್ಯಾಪಕ)
* ದೈಹಿಕ ಶಿಕ್ಷಣ (ವಿಭಾಗ ಸಹಾಯಕ ಪ್ರಾಧ್ಯಾಪಕ)
ಒಟ್ಟು ಹುದ್ದೆಗಳು 37 (ವಿಭಾಗ ಸಹಾಯಕ ಪ್ರಾಧ್ಯಾಪಕ); 38 (ಸಹ ಪ್ರಾಧ್ಯಾಪಕ); 19 (ಪ್ರಾಧ್ಯಾಪಕ)
ವಿದ್ಯಾರ್ಹತೆ: ವಿಭಾಗಕ್ಕೆ ಅನುಗುಣವಾಗಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕನಿಷ್ಠ ಶೇ.55 ಅಂಕ, ಪಿಎಚ್ಡಿ ಪದವಿ ಪಡೆದಿರಬೇಕು. ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ನೆಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
ಅರ್ಜಿ ಶುಲ್ಕ: ಅರ್ಜಿ ಸಲ್ಲಿಕೆ ಕೊನೇ ದಿನದ ಒಳಗಾಗಿ 500 ರೂ. ಅರ್ಜಿ ಶುಲ್ಕವನ್ನು ಡಿಡಿ ಮೂಲಕ ಪಾವತಿಸಲು ಸೂಚಿಸಲಾಗಿದೆ.
ವೇತನ: ಸಹಾಯಕ ಪ್ರಾಧ್ಯಾಪಕರಿಗೆ ಮಾಸಿಕ 57,700- 1,82,400 ರೂ., ಸಹ ಪ್ರಾಧ್ಯಾಪಕರಿಗೆ ಮಾಸಿಕ 1,31,400-2,17,100 ರೂ., ಪ್ರಾಧ್ಯಾಪಕರಿಗೆ ಮಾಸಿಕ 1,44,200-2,18,200 ರೂ. ವೇತನ ನಿಗದಿಪಡಿಸಲಾಗಿದೆ.
ಅರ್ಜಿ ಸಲ್ಲಿಸಲು ಕೊನೇ ದಿನ: 29.11.2021
ಅರ್ಜಿ ಸಲ್ಲಿಕೆ ವಿಳಾಸ: The Registrar, Karnataka Veterinary, Animal and Fisheries Sciences University, Nandinagar, P.B.NO-06, Bidar-585401
ಅಧಿಸೂಚನೆಗೆ: https://bit.ly/3GIHWEm
ಮಾಹಿತಿಗೆ: http://www.kvafsu.edu.in