ಹಾಸನ ವೈದ್ಯಕೀಯ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ: 2.18 ಲಕ್ಷ ರೂ.ವರೆಗೆ ಸಂಬಳ

udyoga-hassan
Published on

ರಾಜ್ಯ ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುವ ಹಾಸನದಲ್ಲಿರುವ ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ (ಎಚ್​ಐಎಂಎಸ್) ಬೋಧಕ ಹಾಗೂ ಬೋಧಕೇತರ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಬಹುಶಿಸ್ತೀಯ ಸಂಶೋಧನಾ ಘಟಕದಲ್ಲಿ (ಮಲ್ಟಿಡಿಸಿಪ್ಲಿನರಿ ರಿಸರ್ಚ್ ಸೆಂಟರ್) ಬೋಧಕೇತರ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಹುದ್ದೆಗಳಲ್ಲಿ ಮೀಸಲಾತಿ ನಿಗದಿಯಾಗಿದೆ.

ಬೋಧಕ ಹುದ್ದೆಗಳು- 24

* ಪ್ರೊಫೆಸರ್- 2

* ಅಸೋಸಿಯೇಟ್ ಪ್ರೊಫೆಸರ್ - 1

* ಅಸಿಸ್ಟೆಂಟ್ ಪ್ರೊಫೆಸರ್ - 21

ಬೋಧಕ ಹುದ್ದೆಗಳ ವಿಭಾಗ: ರೋಗಶಾಸ್ತ್ರ-1, ಜನರಲ್ ಮೆಡಿಸನ್-7, ಡರ್ಮಟಾಲಜಿ-1, ಜನರಲ್ ಸರ್ಜರಿ-2, ಪೀಡಿಯಾಟ್ರಿಕ್ಸ್-1, ಆಥೋಪೆಡಿಕ್ಸ್-4, ಅರಿವಳಿಕೆ-4, ರೇಡಿಯಾಲಜಿ-3, ರೇಡಿಯೋಥೆರಪಿ-1 ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ.

ಶೈಕ್ಷಣಿಕ ಅರ್ಹತೆ: ಬೋಧನಾ ವಿಷಯದಲ್ಲಿ ಎಂಡಿ/ ಎಂಎಸ್ ಮಾಡಿರಬೇಕು. ಹುದ್ದೆಗೆ ಅನುಗುಣವಾಗಿ ಬೋಧನಾ, ಸಂಶೋಧನಾ ಅನುಭವ ಹೊಂದಿರಬೇಕು. ಮೆಡಿಕಲ್ ಎಜುಕೇಷನ್ ಟೆಕ್ನಾಲಜಿಯಲ್ಲಿ ಬೇಸಿಕ್ ಕೋರ್ಸ್ ಮಾಡಿರಬೇಕು.

ವಯೋಮಿತಿ: ಗರಿಷ್ಠ 38- 50 ವರ್ಷ ವಯೋಮಿತಿ ನಿಗದಿಯಾಗಿದ್ದು, ಮೀಸಲಾತಿ ಅಭ್ಯರ್ಥಿಗಳಿಗೆ ವಯೋಸಡಿಲಿಕೆ ಇದೆ.

ಬೋಧಕೇತರ ಹುದ್ದೆಗಳು - 5

* ರಿಸರ್ಚ್ ಸೈಂಟಿಸ್ಟ್-ಐಐ - 1

* ರಿಸರ್ಚ್ ಸೈಂಟಿಸ್ಟ್-ಐ - 1

* ಲ್ಯಾಬ್ ಟೆಕ್ನಿಷಿಯನ್ - 2

* ಡಾಟಾ ಎಂಟ್ರಿ ಆಪರೇಟರ್/ ಲ್ಯಾಬ್ ಅಸಿಸ್ಟೆಂಟ್ - 1

ಅರ್ಹತೆಗಳೇನು: ರಾಜ್ಯ ಸರ್ಕಾರದ ನಿಯಮದಂತೆ ಮೀಸಲಾತಿ ಇರುತ್ತದೆ. ಸಿ ಆಂಡ್ ಆರ್ ನಿಯಮದ ಪ್ರಕಾರ ಶೈಕ್ಷಣಿಕ ಅರ್ಹತೆ, ವಯೋಮಿತಿ ನಿಗದಿಪಡಿಸಲಾಗಿದೆ. ಗರಿಷ್ಠ 35-42 ವರ್ಷ ವಯೋಮಿತಿ ನಿಗದಿಯಾಗಿದೆ.

ಸೂಚನೆ: ಆಸಕ್ತ ಅಭ್ಯರ್ಥಿಗಳು ನವೆಂಬರ್ 15ರ ಸಂಜೆ 5 ಗಂಟೆ ಒಳಗಾಗಿ ಅರ್ಜಿ ಸಲ್ಲಿಸಬೇಕಿದ್ದು, ಅರ್ಜಿ ಜತೆ 2,500 ರೂ.ನ ಡಿಡಿಯನ್ನು The Director, HIMS, Hassa ಹೆಸರಲ್ಲಿ ಪಡೆದು ಸಲ್ಲಿಸಬೇಕು. 17.11.2021ರ ಬೆಳಗ್ಗೆ 9.30ರ ಒಳಗೆ ಸಂದರ್ಶನಕ್ಕೆ ನೋಂದಣಿ ಮಾಡಿಕೊಳ್ಳಬೇಕು.

ಆಯ್ಕೆ ಪ್ರಕ್ರಿಯೆ: ಬೋಧಕ ಹುದ್ದೆಗೆ ಅಭ್ಯರ್ಥಿಗಳ ಶೈಕ್ಷಣಿಕ ಅಂಕ, ಪಬ್ಲಿಕೇಷನ್ ಸಂಖ್ಯೆ, ವೃತ್ತಿ ಅನುಭವ ಆಧರಿಸಿ ಶಾರ್ಟ್​ಲಿಸ್ಟ್ ಮಾಡಲಾಗುವುದು. ಬೋಧಕೇತರ ಹುದ್ದೆಗಳಿಗೆ ಶೈಕ್ಷಣಿಕ ಅಂಕ, ವೃತ್ತಿ ಅನುಭವ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ, ಎನ್​ಸಿಸಿ ಹಾಗೂ ಪಠ್ಯೇತರ ಚಟುವಟಿಕೆ ಆಧರಿಸಿ ಶಾರ್ಟ್​ಲಿಸ್ಟ್ ಮಾಡಲಾಗುವುದು.

ವೇತನ: ಬೋಧಕ ಹುದ್ದೆಗಳಿಗೆ ಮಾಸಿಕ 79,800 - 2,18,200 ರೂ. ಹಾಗೂ ಬೋಧಕೇತರ ಹುದ್ದೆಗಳಿಗೆ ಮಾಸಿಕ 20,000-67,000 ರೂ. ವೇತನ ನಿಗದಿಪಡಿಸಲಾಗಿದೆ.

ಅರ್ಜಿ ಸಲ್ಲಿಕೆ ಕೊನೇ ದಿನ: 15.11.2021

ಅರ್ಜಿ ಸಲ್ಲಿಕೆ ವಿಳಾಸ: hief Administrative Officer, HIMS, Hassan573201

ಸಂದರ್ಶನ ನಡೆಯುವ ದಿನಾಂಕ: 17.11.2021

ಅಧಿಸೂಚನೆಗೆ: https://bit.ly/2ZL59ob

ಮಾಹಿತಿಗೆ: http://himshassan.karnataka.gov.in

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net