

ಹುಬ್ಬಳ್ಳಿಯಲ್ಲಿರುವ ಸೌತ್ ವೆಸ್ಟ್ರನ್ ರೈಲ್ವೇ ಪರ್ಸೋನೆಲ್ ಡಿಪಾರ್ಟ್‍ಮೆಂಟ್‍ನಿಂದ (ನೈರುತ್ಯ ರೈಲ್ವೆ) ಕ್ರೀಡಾಪಟುಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಅರ್ಹ 21 ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿ ಅಧಿಸೂಚನೆ ಹೊರಡಿಸಲಾಗಿದೆ.
ವಿವಿಧ ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದವರಿಗೆ ನೈರುತ್ಯ ರೈಲ್ವೆ ವಲಯದಲ್ಲಿ ಲೆವೆಲ್ 2/3 ದರ್ಜೆಯ ಉದ್ಯೋಗ ಒದಗಿಸಲಾಗುತ್ತಿದೆ. 2020-21ನೇ ಸಾಲಿನ ನೇಮಕಾತಿ ಇದಾಗಿದ್ದು, ಹುದ್ದೆಗಳಲ್ಲಿ ಮೀಸಲಾತಿ ಇಲ್ಲ. 21 ಹುದ್ದೆಗಳಲ್ಲಿ 2 ಮಹಿಳಾ ಅಭ್ಯರ್ಥಿಗಳಿಗೆ ಸ್ಥಾನ ಇದೆ.
ಯಾವ ಕ್ರೀಡಾಪಟುಗಳಿಗೆ ಅವಕಾಶ:
* ಅಥ್ಲೆಟಿಕ್ಸ್
- 400 ಮೀ. ಹರ್ಡಲ್ಸ್ - 1
- ಲಾಂಗ್ ಜಂಪ್ - 2
- 5000/10000 ಮೀ - 1
- 800/ 1500 ಮೀ. - 1
* ಬ್ಯಾಡ್ಮಿಂಟನ್
- ಸಿಂಗಲ್/ಡಬಲ್ - 2
* ಕ್ರಿಕೆಟ್
- ಆï ಸ್ಪಿನ್ನರ್ ವಿತ್ ಬ್ಯಾಟ್ಸ್‍ಮೆನ್ - 1
- ಮಿಡಲ್ ಆರ್ಡರ್ ಬ್ಯಾಟ್ಸ್‍ಮೆನ್ - 1
- ಮೀಡಿಯಂ ಪೇಸರ್ - 1
*ವೇಟ್‍ಲಿಫ್ಟಿಂಗ್
- 55 ಕೆಜಿ - 1
- 102 ಕೆಜಿ - 1
* ಟೇಬಲ್ ಟೆನಿಸ್
-ಸಿಂಗಲ್/ ಡಬಲ್ -1
* ಹಾಕಿ
- ಹಾಫ್ ಬ್ಯಾಕ್ - 2
- ಫುಲ್ ಬ್ಯಾಕ್ - 1
- ಫಾರ್ವಡ್ - 1
* ಸ್ವಿಮಿಂಗ್
- 50/100/200 ಮೀ. ಫ್ರೀಸ್ಟೈಲ್ - 1
- 50/100/200 ಮೀ. ಬ್ಯಾಕ್‍ಸ್ಟ್ರೋಕ್ - 1
* ಗಾಲ್ಫ್ - 2
ಶೈಕ್ಷಣಿಕ ಅರ್ಹತೆ:
ಎಸ್ಸೆಸ್ಸೆಲ್ಸಿ, ಪಿಯುಸಿ, ಐಟಿಐ, ಡಿಪ್ಲೋಮಾ ಜತೆ ಕ್ರೀಡಾ ಸಾಧನೆಗಳು ಅವಶ್ಯ.
ವಯೋಮಿತಿ:
1.1.2021ಕ್ಕೆ ಕನಿಷ್ಠ 18 ವರ್ಷ, ಗರಿಷ್ಠ 25 ವರ್ಷ.
ಅರ್ಜಿ ಶುಲ್ಕ:
ಎಸ್‍ಸಿ, ಎಸ್‍ಟಿ, ಮಾಜಿ ಸೈನಿಕ, ಅಂಗವಿಕಲ, ಮಹಿಳಾ, ಆರ್ಥಿಕವಾಗಿ ದುರ್ಬಲವಾಗಿರುವ ಅಭ್ಯರ್ಥಿಗಳಿಗೆ 250 ರೂ. ನಿಗದಿಪಡಿಸಿದ್ದು, ಇತರ ಅಭ್ಯರ್ಥಿಗಳಿಗೆ 500 ರೂ. ಭರಿಸಬೇಕು. ಟ್ರಯಲ್‍ಗೆ ಹಾಜರಾಗುವ ಅಭ್ಯರ್ಥಿಗಳಿಗೆ ಮೊತ್ತವನ್ನು ಹಿಂತಿರುಗಿಸಲಾಗುವುದು.
ಯಾವ ಸಾಧನೆ ಪರಿಗಣನೆ?
* ಕೆಟಗರಿ ಎ, ಬಿ, ಸಿ ಎಂದು ವಿಭಾಗ ಮಾಡಿದ್ದು, ಒಲಿಂಪಿಕ್ ಗೇಮ್, ವಲ್ರ್ಡ್ ಕಪ್, ವಲ್ರ್ಡ್ ಚಾಂಪಿಯನ್‍ಷಿಪ್, ಏಷಿಯನ್ ಗೇಮ್ಸ್, ಕಾಮನ್‍ವೆಲ್ತ್ ಗೇಮ್ಸ್, ಯೂಥ್ ಒಲಿಂಪಿಕ್ಸ್, ಡೇವಿಸ್ ಕಪ್, ಚಾಂಪಿಯನ್ಸ್ ಟ್ರೋಫಿ, ಥಾಮಸ್/ಊಬರ್ ಕಪ್, ಕಾಮನ್‍ವೆಲ್ತ್ ಚಾಂಪಿಯನ್‍ಷಿಪ್, ಏಷಿಯನ್ ಚಾಂಪಿಯನ್‍ಷಿಪ್/ ಏಷಿಯಾ ಕಪ್, ಸೌತ್ ಏಷಿಯಾ ಫೆಡರೇಷನ್ ಗೇಮ್ಸ್, ಯುಎಸ್‍ಐಸಿ (ವರ್ಲ್ಡ್ ರೈಲ್ವೆ) ಚಾಂಪಿಯನ್‍ಷಿಪ್, ವಲ್ರ್ಡ್ ಯನಿವರ್ಸಿಟಿ ಗೇಮ್ಸ್‍ಗಳಲ್ಲಿ ದೇಶವನ್ನು ಪ್ರತಿನಿಧಿಸಿರಬೇಕು. ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಕ್ರೀಡೆಗಳಲ್ಲಿ ಸಾಧನೆ ಮಾಡಿರಬೇಕು.
ಅರ್ಜಿ ಸಲ್ಲಿಸಲು ಕೊನೇ ದಿನ: 28.12.2020 ಅಧಿಸೂಚನೆಗೆ: https://bit.ly/37JgNAr ಮಾಹಿತಿಗೆ: http://www.rrchubli.in ಇನ್ನೂ ಹೆಚ್ಚಿನ ಉದ್ಯೋಗಗಳ ಮಾಹಿತಿಗೆ https://www.vijayavani.net/ ವಿಭಾಗದ ಅಂಕಣ ಕಾಲಂನಲ್ಲಿ ಉದ್ಯೋಗಮಿತ್ರ ಕ್ಲಿಕ್ಕಿಸಿ.