More

    ರಾಜ್ಯ ಸರ್ಕಾರದ ಅಧೀನ ಸಂಸ್ಥೆ ಸಿಎಸ್‍ಜಿಯಲ್ಲಿ ವಿವಿಧ ಹುದ್ದೆಗಳಿಗೆ ಆಹ್ವಾನ

    ಕರ್ನಾಟಕ ಸರ್ಕಾರದ ಅಧೀನದಲ್ಲಿ ಕಾರ್ಯ ನಿರ್ವಹಿಸುವ ಸೆಂಟರ್ ಫಾರ್ ಸ್ಮಾರ್ಟ್ ಗೌವರ್ನೆನ್ಸ್​ (ಸಿಎಸ್‍ಜಿ) ಟೆಕ್ನಿಕಲ್ ಹುದ್ದೆಗೆ ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿ ಅಧಿಸೂಚನೆ ಹೊರಡಿಸಿದೆ.

    ಸಿಎಸ್‍ಜಿಯಲ್ಲಿ ಐಟಿ/ ಐಸಿಟಿ ವಿಭಾಗಳಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಎಲ್ಲ ಹುದ್ದೆಗಳ ನೇಮಕಾತಿಯ ಬೆಂಗಳೂರೇ ಆಗಿರಲಿದೆ. ಎಲ್ಲ ಹುದ್ದೆಗಳ ನೇಮಕಾತಿಯು 3 ವರ್ಷದ ಒಪ್ಪಂದದ ಆಧಾರದಲ್ಲಿ ಮಾಡಿಕೊಳ್ಳಲಾಗುತ್ತಿದ್ದು, ಅಭ್ಯರ್ಥಿಗಳ ಕಾರ್ಯಕ್ಷಮತೆ ತೃಪ್ತಿದಾಯಕವಾಗಿದ್ದಲ್ಲಿ ಅವಧಿ ವಿಸ್ತರಿಸಲಾಗುವುದು.

    ಹುದ್ದೆ, ಸಂಖ್ಯೆ ವಿವರ
    * ಪ್ರಾಜೆಕ್ಟ್ ಮ್ಯಾನೇಜರ್ – 2
    * ಪ್ರಾಜೆಕ್ಟ್ ಲೀಡ್ – 1
    * ಬಿಜಿನೆಸ್ ಅನಲಿಸ್ಟ್ – 1
    * ಸೀನಿಯರ್ ಸಾಫ್ಟ್​ವೇರ್ ಇಂಜಿನಿಯರ್ – 6
    * ಸಾಫ್ಟ್​ವೇರ್ ಇಂಜಿನಿಯರ್ – 36
    * ಟೆಸ್ಟ್ ಲೀಡ್ – 1
    * ಟೆಸ್ಟ್ ಇಂಜಿನಿಯರ್ – 3
    * ಆಪರೇಷನ್ಸ್ ಮ್ಯಾನೇಜರ್ – 2
    * ಡೇಟಾಬೇಸ್ ಡಿಸೈನರ್ – 1
    * ಸಿಸ್ಟಮ್ ಅಡ್ಮಿನಿಸ್ಟ್ರೇಟರ್ – 1
    * ಡೇಟಾಬೇಸ್ ಅಡ್ಮಿನಿಸ್ಟ್ರೇಟರ್ – 1

    ವಿದ್ಯಾರ್ಹತೆ:
    ಬಿಇ, ಬಿ.ಟೆಕ್, ಎಂಸಿಎ, ಎಂಬಿಎ, ಕಂಪ್ಯೂಟರ್ ಸೈನ್ಸ್/ ಕಂಪ್ಯೂಟರ್ ಅಪ್ಲಿಕೇಷನ್ಸ್‍ನಲ್ಲಿ ಸ್ನಾತಕೋತ್ತರ ಪದವಿ.

    ಆಯ್ಕೆ ಪ್ರಕ್ರಿಯೆ:
    ಕೆಲ ಹುದ್ದೆಗಳಿಗೆ ಲಿಖಿತ ಪರೀಕ್ಷೆ ನಡೆಸಿ ಸಂದರ್ಶನ ಮೂಲಕ ನೇಮಕ ಮಾಡಿಕೊಳ್ಳಲಾಗುವುದು. ಇನ್ನು ಕೆಲ ಹುದ್ದೆಗಳಿಗೆ ನೇರ ಸಂದರ್ಶನಕ್ಕೆ ಆಹ್ವಾನಿಸಿ, ದಾಖಲೆ ಪರಿಶೀಲನೆ ನಡೆಸಿ ನೇಮಕ ಮಾಡಿಕೊಳ್ಳಲಾಗುವುದು. ಆಯ್ಕೆಯಾದ ಅಭ್ಯರ್ಥಿಗಳಿಗೆ ಮೇಲ್ ಮುಖಾಂತರ ತಿಳಿಸಲಾಗುವುದು.

    ಇತರ ಅರ್ಹತೆಗಳು:
    ಹುದ್ದೆಗೆ ಅನುಗುಣವಾಗಿ ವೃತ್ತಿ ಅನುಭವ ಹೊಂದಿರಬೇಕು. ಕನ್ನಡ ಭಾಷೆಯಲ್ಲಿ ಬರೆಯಲು, ಓದಲು, ಮಾತನಾಡಲು ಬರಬೇಕು. ಟೀಮ್ ಮತ್ತು ರಿಸ್ಕ್ ಮ್ಯಾನೇಜ್‍ಮೆಂಟ್ ಬಗ್ಗೆ ಅರಿವಿರಬೇಕು. ಯೋಜನಾ ನಿರ್ವಹಣೆ ವಿಧಾನ ಮತ್ತು ತಂತ್ರಜ್ಞಾನದ ಬಗ್ಗೆ ತಿಳುವಳಿಕೆ ಇರಬೇಕು. ಉತ್ತಮ ಡಾಕ್ಯುಮೆಂಟೇಷನ್ ಮತ್ತು ಪ್ರಸ್ತುತಿ ಕೌಶಲ ಹೊಂದಿರಬೇಕು. ಸಾï್ಟವೇರ್ ಡೆವೆಲಪ್‍ಮೆಂಟ್ ಲೈï ಸೈಕಲ್ ಬಗ್ಗೆ ಉತ್ತಮ ಜ್ಞಾನ ಹೊಂದಿರಬೇಕು.

    ಅರ್ಜಿ ಸಲ್ಲಿಸಲು ಕೊನೇ ದಿನ: 30.12.2020
    ಅರ್ಜಿ ಸಲ್ಲಿಸುವ ಮೇಲ್ ಐಡಿ: [email protected]

    ಅಧಿಸೂಚನೆಗೆ ಇಲ್ಲಿ ಕ್ಲಿಕ್ಕಿಸಿ : https://bit.ly/2WdYsWQ

    ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ: https://csg.karnataka.gov.in/

    ಇನ್ನೂ ಹೆಚ್ಚಿನ ಉದ್ಯೋಗಗಳ ಮಾಹಿತಿಗೆ https://www.vijayavani.net/ ವಿಭಾಗದ ಅಂಕಣ ಕಾಲಂನಲ್ಲಿ ಉದ್ಯೋಗಮಿತ್ರ ಕ್ಲಿಕ್ಕಿಸಿ

    ಯುಪಿಎಸ್‍ಸಿಯಿಂದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ- ಇಲ್ಲಿದೆ ಫುಲ್​ ಡಿಟೇಲ್ಸ್​…

    ಎಸ್​ಎಸ್​ಎಲ್​ಸಿ, ಡಿಪ್ಲೋಮಾ, ಪದವೀಧರರಿಗೆ ಕೇಂದ್ರ ಸರ್ಕಾರದ 74 ಹುದ್ದೆಗಳಿಗೆ ಆಹ್ವಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts