More

  ಹೇಮಾವತಿ ಎಕ್ಸ್‌ಪ್ರೆಸ್‌ ಕೆನಾಲ್‌: ಶಾಸಕ ಶ್ರೀನಿವಾಸ್ ವಿರುದ್ಧ ಹರಿಹಾಯ್ದ ತುರುವೇಕೆರೆ ಶಾಸಕ ಎಂ.ಟಿ.ಕೃಷ್ಣಪ್ಪ..!

  ತುಮಕೂರು: ತುರುವೇಕೆರೆ ಶಾಸಕ ಎಂ.ಟಿ. ಕೃಷ್ಣಪ್ಪ ಹಾಗೂ ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ನಡುವೆ ಗಂಡಸ್ತನದ ಫೈಟ್ ಮುಂದುವರೆದಿದೆ.

  ಇದನ್ನೂ ಓದಿ: IPL 2024: ರೋಚಕ ಪಂದ್ಯದಲ್ಲಿ ಗೆದ್ದು ಪ್ಲೇಆಫ್​ಗೇರಿದ ಬೆಂಗಳೂರು, ಇದು ಆರ್​ಸಿಬಿಯ ಹೊಸ ಅಧ್ಯಾಯ!

  ನಿನ್ನೆಯಷ್ಟೇ ಕೃಷ್ಣಪ್ಪಗೆ ಸವಾಲು ಹಾಕಿದ್ದ ವಾಸುಗೆ ತಿರುಗೇಟು ಕೊಟ್ಟಿದ್ದು, ನಾನು 25 ವರ್ಷಗಳಿಂದ ಶಾಸಕನಾಗಿ ಕೆಲಸ ಮಾಡಿದ್ದೇನೆ. ವಾಸು ಯಾವತ್ತು ಹೋರಾಟಕ್ಕೆ ಬಂದಿದ್ದಾರೆ ಅನ್ನೋದು ನನಗೆ ನೆನಪಿಲ್ಲ ಎಂದು ಟೀಕಿಸಿದರು.

  ನೀರು, ಚಾನೆಲ್ ಬಗ್ಗೆ ನಮ್ಮ ಹೋರಾಟ ನಿರಂತರವಾಗಿದೆ ಅದು ಜನರಿಗೆ ಗೊತ್ತಿದೆ. ನಿಜವಾಗಿಯೂ ಅವರಿಗೆ ಗುಬ್ಬಿ ಕ್ಷೇತ್ರದ ಬಗ್ಗೆ ಕಾಳಜಿ ಇದ್ದಿದ್ರೆ ಈ ಹೋರಾಟಕ್ಕೆ ಬರಬೇಕಿತ್ತು. ಕಳ್ಳಾಟ ಮಾಡುವ ಅವಶ್ಯಕತೆ ಇರಲಿಲ್ಲ. ರೈತರ ಹಿತ ಕಾಪಾಡುವುದರಲ್ಲಿ ಅವರಿಗೆ ಕಾಳಜಿ ಇಲ್ಲ. ಹಾಗಾಗಿ ಲಘುವಾಗಿ ಮಾತನಾಡ್ತಾನೆ. ಅವರಿಗೆ ನಾನು ಈ ಮೂಲಕ ಹೇಳ್ತಿನಿ. ತಾಕತ್ತಿದ್ರೆ ಯಾವಾಗ ಬರ್ಬೇಕು ಹೇಳು ಗುಬ್ಬಿಗೆ ನಾನೇ ಬರ್ತೀನಿ ಅವತ್ತು ನೀನು ಕರೆ ಕೊಡು, ನಾನು ಬರ್ತೀನಿ. ಯಾರ್ ತಾಕತ್ತು ಏನು ಅನ್ನೋದನ್ನ ತೋರಿಸ್ತೀನಿ ಎಂದು ವಾಗ್ದಾಳಿ ನಡೆಸಿದರು.

  ಗುಳ್ಳೆನರಿ ಕೆಲಸವನ್ನು ನಾನು ಯಾವತ್ತೂ ಮಾಡಲ್ಲ. ನಾನು ಹೋರಾಟಗಾರ. ಈ ಗುಳ್ಳೆನರಿ ಕೆಲಸ ನಿನಗೆ ಬಿಟ್ಟಿದ್ದು. ನೀನು ನನ್ ಬಗ್ಗೆ ಏನೂ ಹರ್ಕೊಳ್ಳೋಕೆ ಆಗಲ್ಲ ಗೊತ್ತಾ. ಮೊದಲು ಸರಿಯಾಗಿ ಮಾತನಾಡೋದನ್ನ ಕಲಿಯಲೇ ವಾಸ ಎಂದು ಏಕವಚನದಲ್ಲೇ ತಿರುಗೇಟು ನೀಡಿದರು.

  ಚಿನ್ನಸ್ವಾಮಿಯಲ್ಲಿ ಆರ್​ಸಿಬಿ-ಸಿಎಸ್​ಕೆ ಪಂದ್ಯ ವೀಕ್ಷಿಸಿದ ಸಿಎಂ ಸಿದ್ಧರಾಮಯ್ಯ, ನಟ ಶಿವರಾಜ್​ಕುಮಾರ್

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts