ಟೈಲರ್​ ರುಂಡ ಕಡಿದವನ ಬೈಕ್​​ ನಂಬರ್​ ಬಿಚ್ಚಿಟ್ಟ ಭಯಾನಕ ಕಥೆ! ಈ ಸಂಖ್ಯೆ ಪಡೆಯಲು ಲಕ್ಷ ಲಕ್ಷ ನೀಡಿದ್ದ...

udaipur1
Published on

ಉದಯಪುರ (ರಾಜಸ್ಥಾನ): ಹಿಂದೂದೇವರ ಬಗ್ಗೆ ಅವಹೇಳನಕಾರಿ ಮಾತನಾಡಿದ್ದನ್ನು ವಿರೋಧಿಸಿ ಪ್ರವಾದಿ ಮೊಹಮ್ಮದ್​ ಕುರಿತು ಮಾತನಾಡಿದ್ದ ಬಿಜೆಪಿ ಮುಖಂಡೆ ನೂಪುರ್​ ಶರ್ಮಾ ಪರ ಪೋಸ್ಟ್​ ಹಾಕಿದ್ದ ರಾಜಸ್ಥಾನದ ಉದಯಪುರದ ಟೈಲರ್​ ರುಂಡವನ್ನು ಕಡಿದಿರುವ ಘಟನೆ ದಿನಕ್ಕೊಂದು ಹೊಸ ತಿರುವು ಪಡೆದುಕೊಳ್ಳುತ್ತಿದೆ. ಈ ಕ್ರೂರಿಗಳಿಗೆ ಪಾಕಿಸ್ತಾನ ಹಾಗೂ ಐಸಿಸ್​ ಲಿಂಕ್​ ಇರುವುದು ಇದಾಗಲೇ ಮೇಲ್ನೋಟಕ್ಕೆ ಸಾಬೀತಾಗಿರುವ ಬೆನ್ನಲ್ಲೇ ಮತ್ತಷ್ಟು ಭಯಾನಕ ಕೃತ್ಯಗಳು ಹೊರಕ್ಕೆ ಬರುತ್ತಿವೆ.

ಟೈಲರ್​ ಕನ್ಹಯ್ಯಲಾಲ್​ ಅವರ ಕೊಲೆ ಮಾಡಿ, ಅದರ ವಿಡಿಯೋ ಜಾಲತಾಣದಲ್ಲಿ ಹರಿಬಿಟ್ಟು ಎಸ್ಕೇಪ್​ ಆಗುವಾಗ ಸಿಕ್ಕಿಬಿದ್ದಿರುವ ಪಾತಕಿಗಳಾದ ಗೌಸ್ ಮೊಹಮ್ಮದ್ ಮತ್ತು ರಿಯಾಜ್ ಅಖ್ತರಿಯ ಜಾಡು ಹಿಡಿದು ಹೋಗಿರುವ ಪೊಲೀಸರಿಗೆ ಅವರು ಬಳಸಿರುವ ಬೈಕ್​ ಮೇಲೆ ಈಗ ಕಣ್ಣುಬಿದ್ದಿದೆ. ಕನ್ಹಯ್ಯಲಾಲ್​ ಅವರ ಹತ್ಯೆ ಮಾಡಲು ಬಂದ ಸಂದರ್ಭದಲ್ಲಿ ಈ ಬೈಕ್​ಗಳನ್ನು ಬಳಸಲಾಗಿದೆ.

ಗೌಸ್​ ಮೊಹಮ್ಮದ್​ನಿಗೆ ಸೇರಿರುವ ಈ ಬೈಕ್​ ಸಂಖ್ಯೆ 2611. ಮೇಲ್ನೋಟಕ್ಕೆ ಈ ಸಂಖ್ಯೆಯಲ್ಲಿ ಏನು ವಿಶೇಷತೆ ಇದೆ ಎನ್ನಿಸಬಹುದು. ಆದರೆ ಇದರ ಆಳಕ್ಕೆ ಹೋದರೆ ಗೊತ್ತಾಗುವುದು ಭಾರಿ ಸಂಚು. 26/11 ಎಂದರೆ ಅದು ಮುಂಬೈ ತಾಜ್ ಹೋಟೆಲ್ ಮೇಲೆ 2013ರಲ್ಲಿ ನಡೆದ ಭೀಕರ ಭಯೋತ್ಪಾದನಾ ದಾಳಿ. ಇಡೀ ದೇಶವೇ ಬೆಚ್ಚಿಬಿದ್ದಿದ್ದ ಈ ದಾಳಿಗೂ ಈ ಬೈಕ್​ ಸಂಖ್ಯೆಗೂ ಏನಾದರೂ ಸಂಬಂಧ ಇದೆಯೇ ಎಂಬ ಬಗ್ಗೆ ತನಿಖಾಧಿಕಾರಿಗಳು ತನಿಖೆ ಶುರು ಮಾಡಿದ್ದಾರೆ. 175 ಮಂದಿಯನ್ನು ಬಲಿ ಪಡೆದಿದ್ದ ಈ ದಾಳಿಗೂ, ಟೈಲರ್​ ಹತ್ಯೆ ಆರೋಪಿಗಳಿಗೂ ಸಂಬಂಧ ಇದೆ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ.

ವಾಹನಗಳ ಮೇಲೆ ತಮ್ಮಿಷ್ಟದ ಫ್ಯಾನ್ಸಿ ನಂಬರ್, ಲಕ್ಕಿ ನಂಬರ್​​ ಪಡೆಯಲು ಸಾರಿಗೆ ಇಲಾಖೆಗೆ ಲಕ್ಷ ಲಕ್ಷಗಟ್ಟಲೆ ಹಣ ಕೊಡುವುದು ಮಾಮೂಲು. ಅದೇ ರೀತಿ ಗೌಸ್​ನ 2611 ನಂಬರ್​ ಬೆನ್ನಟ್ಟಿ ಹೋದಾಗಲೂ ಈ ಅಂಶ ಬೆಳಕಿಗೆ ಬಂದಿದೆ. ಈತ ಅತ್ಯಧಿಕ ಹಣವನ್ನು ನೀಡಿ ಈ ಸಂಖ್ಯೆಯನ್ನು ಪಡೆದುಕೊಂಡಿದ್ದ ಎನ್ನಲಾಗಿದೆ.

RJ 27 AS 2611 ರ ನೋಂದಣಿ ಸಂಖ್ಯೆ ಹೊಂದಿರುವ ಈ ಬೈಕ್​ಅನ್ನು ಈಗ ಉದಯಪುರದ ಧನ್ ಮಂಡಿ ಪೊಲೀಸ್ ಠಾಣೆಯಲ್ಲಿ ಇರಿಸಲಾಗಿದೆ. ಮುಂಬೈ ದಾಳಿಯ ದಿನಾಂಕದ ನಂಬರ್ ಪ್ಲೇಟ್​ಗೂ ಉದಯಪುರದ ಕೊಲೆ ಆರೋಪಿಗಳಿಗೂ ಲಿಂಕ್ ಇರುವ ಕುರಿತು ಪೊಲೀಸರು ಹೆಚ್ಚಿನ ತನಿಖೆಯನ್ನು ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net