ಟೈಲರ್ ರುಂಡ ಕಡಿದು ತುಂಬಾ ಒಳ್ಳೆಯ ಕೆಲ್ಸ ಮಾಡಿದ್ದೀರಿ ಸಹೋದರರೇ... ​ ಭೇಷ್​ ಎಂದು ಪೋಸ್ಟ್​​: ಅರೆಸ್ಟ್​​

udaipur
Published on

ಲಖನೌ: ರಾಜಸ್ಥಾನದ ಉದಯಪುರದಲ್ಲಿ ಟೈಲರ್​ ಕನ್ಹಯ್ಯಲಾಲ್​ ಅವರ ರುಂಡ ಕಡಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ದೇಶಾದ್ಯಂತ ಭಾರಿ ಸಂಚನ ಸೃಷ್ಟಿಸಿದೆ.

ಕೆಲ ಮುಸ್ಲಿಂ ಸಂಘಟನೆಗಳು ಸೇರಿದಂತೆ ಹಲವರು ಇದರ ವಿರುದ್ಧ ಪ್ರತಿಭಟನೆ ನಡೆಸುತ್ತಿರುವಾಗಲೇ ನಿನ್ನೆಯಷ್ಟೇ ರಾಷ್ಟ್ರೀಯ ಕಿಸಾನ್​ ಸಂಘದ ಉಚ್ಚಾಟಿತ ಅಧ್ಯಕ್ಷ ರಾಕೇಶ್​ ಟಿಕಾಯತ್​ ಈ ಘಟನೆಯನ್ನು ಸಣ್ಣ ವಿಷಯ ಎಂದು ಕರೆದು ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಇದೀಗ ಟೈಲರ್​ ಬರ್ಬರ ಹತ್ಯೆ ವಿಡಿಯೋ ಅನ್ನು ಶೇರ್​ ಮಾಡಿಕೊಂಡಿರುವ ಉತ್ತರ ಪ್ರದೇಶದ ಯೂಸುಫ್ ಖಾನ್ ಎಂಬಾತ ತುಂಬಾ ಒಳ್ಳೆಯ ಕಾರ್ಯ ಮಾಡಿರುವಿರಿ ಸಹೋದರರೆ, ನಿಮಗೆ ಒಳ್ಳೆಯದಾಗಲಿ ಎಂದು ಕಮೆಂಟ್​ ಹಾಕಿದ್ದಾನರೆ.

ಈ ಛಪ್ರೌಲಿ ನಿವಾಸಿ ಎಂದು ಗುರುತಿಸಲಾಗಿದ್ದು, ನೋಯ್ಡಾ ಪೊಲೀಸರು ಬಂಧಿಸಿದ್ದಾರೆ. ಟೈಲರ್​ ರುಂಡವನ್ನು ಕಡಿದ ವಿಡಿಯೋ ಮಾಡಿ, ಈ ಕ್ರೂರಿಗಳು ಅದನ್ನು ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಅದರ ವಿಡಿಯೋ ಕೂಡ ಜಾಲತಾಣದಲ್ಲಿ ವೈರಲ್​ ಆಗಿತ್ತು. ಆದರೆ ಅದನ್ನು ಈಗ ಜಾಲತಾಣದಿಂದ ತೆಗೆಯಲಾಗಿದೆ. ಆದರೆ ಅದು ಡಿಲೀಟ್​ ಆಗುವ ಮುನ್ನ ಯೂಸುಫ್​ ಖಾನ್​ ಅದನ್ನು ಶೇರ್​ ಮಾಡಿಕೊಂಡು ಈ ಕೃತ್ಯ ಎಸಗಿದ ಪಾಪಿಗಳನ್ನು ಹಾಡಿ ಹೊಗಳಿದ್ದಾನೆ.

ಇದನ್ನು ನೋಡಿದ್ದ ಗ್ರಾಮದ ನಿವಾಸಿಯೊಬ್ಬರು ದೂರು ನೀಡಿದ್ದರು. ಇದರ ಆಧಾರದ ಮೇಲೆ ಆರೋಪಿಯನ್ನು ಬಂಧಿಸಲಾಗಿದೆ. ವೀಡಿಯೋ ಕುರಿತು ಕಾಮೆಂಟ್ ಮಾಡಲು ಬಳಸಿದ್ದ ಮೊಬೈಲ್ ಫೋನ್ ಕೂಡ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net