

ಗಿಡ-ಮರಗಳಲ್ಲಿ ಹಣ್ಣು, ಹೂವು ಬಿಡುವುದು ಎಲ್ಲರಿಗೂ ತಿಳಿದದ್ದೇ. ಆದರೆ ಇಲ್ಲೊಂದು ಮರದಲ್ಲಿ ಹಣ್ಣಿನ ಬದಲು ಕಣ್ಣು ಬಿಟ್ಟಿದೆ.
ಐಎಫ್‌ಎಸ್ ಅಧಿಕಾರಿ ಸುಸಾಂತ್ ನಂದ ಅವರು ಟ್ವಿಟ್ಟರ್ ಈ ಫೋಟೋ ಹಾಕಿದ್ದಾರೆ. ಇದನ್ನು ನೋಡಿದ ನೆಟ್ಟಿಗರು ಫುಲ್ ಶಾಕ್ ಆಗಿದ್ದಾರೆ.
ಇದೇನಿದು? ಮರದಲ್ಲಿ ಕಣ್ಣು ಬಿಟ್ಟಿದೆಯಲ್ಲ ಎಂದು ಹೌಹಾರಿ ಹೋಗಿದ್ದಾರೆ. ಈ ಫೋಟೋ ನೋಡುತ್ತಿದ್ದಂತೆಯೇ ಅರೆ ಇದೇನಿದು? ಎಲ್ಲಿದು ಎಂದೆಲ್ಲಾ ಪ್ರಶ್ನೆ ಮಾಡಿದ್ದಾರೆ.
ನಿಮಗೂ ಇಂಥದ್ದೇ ಪ್ರಶ್ನೆ ಬಂದಿರಲಿಕ್ಕೆ ಸಾಕು ಅಲ್ಲವೆ? ನೀವೂ ಹೌಹಾರಿ, ಅಚ್ಚರಿ ಪಟ್ಟು, ಮನಸ್ಸಿನೊಳಗೆ ನೂರೆಂಟು ಪ್ರಶ್ನೆಗಳನ್ನು ಕೇಳಿಕೊಳ್ಳುವ ಮೊದಲು, ತಲೆಯಲ್ಲಿ ಏನೇನೋ ಯೋಚನೆ ಮಾಡುವ ಮೊದಲು ಮೊದಲು ಈ ಫೋಟೋ ಅನ್ನು ಮತ್ತೊಮ್ಮೆ ದಿಟ್ಟಿಸಿ ನೋಡಿ. ಇನ್ನೂ ಹತ್ತಿರ ಹಿಡಿದು ನೋಡಿ...
ಹಾಂ... ಗೊತ್ತಾಯಿತಾ? ಇನ್ನೂ ಗೊತ್ತಾಗಿಲ್ಲವೆ? ಇದು ಮರ ಅಲ್ಲ ಕಣ್ರೀ... ಪೊಟರೆ ಹೊಕ್ಕಿ ಕುಳಿತ ಗೂಬೆಯೊಂದು ಬಿಟ್ಟ ಕಣ್ಣು.
ನಿಶಾಚರಿಯಾದ ಗೂಬೆ ಕಳ್ಳನಂತೆ ಒಂದು ಕಣ್ಣು ಪೊಟರೆಯಿಂದ ಹೊರಹಾಕಿ ಇಣುಕುತ್ತಿರುವ ಈ ಫೋಟೋ ಭಾರೀ ವೈರಲ್ ಆಗಿದೆ.
ಐಎಫ್‌ಎಸ್ ಅಧಿಕಾರಿ ಸುಸಾಂತ್ ನಂದ ಅವರು ಟ್ವಿಟ್ಟರ್ ನಲ್ಲಿ ಫೋಟೋ ಪೋಸ್ಟ್ ಮಾಡಿದ್ದು, ಸಾವಿರಾರು ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿಶೇಷವೆಂದರೆ, ಹೀಗೆ ಮರದ ಪೊಟರೆಯಲ್ಲಿ ಕಣ್ ಕಣ್ ಬಿಡುತ್ತಾ ಕುಳಿತ ಗೂಬೆಯ ವಿವಿಧ ಭಂಗಿಯ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ.