ಟೈಟ್‌ ಬುರ್ಖಾ ಧರಿಸಿ ಒಂಟಿಯಾಗಿ ಹೋಗುತ್ತಿದ್ದಳೆಂದು ಯುವತಿಯನ್ನು ಗುಂಡಿಕ್ಕಿ ಕೊಂದರು!

taliban
ಸಾಂದರ್ಭಿಕ ಚಿತ್ರ
Published on

ಅಫ್ಘಾನಿಸ್ತಾನ್‌: ಅಫ್ಘಾನಿಸ್ತಾನದಲ್ಲಿ ತಾಲಿಬಾನ್‌ ಉಗ್ರರ ಉಪಟಳ ಹೆಚ್ಚುತ್ತಿರುವ ಬೆನ್ನಲ್ಲೇ ಬಿಗಿಯಾದ ಬಟ್ಟೆಗಳನ್ನು ಧರಿಸಿ ಒಂಟಿಯಾಗಿ ಹೋಗುತ್ತಿದ್ದ ಕಾರಣಕ್ಕೆ ಯುವತಿಯೊಬ್ಬಳನ್ನು ಗುಂಡಿಕ್ಕಿ ಕೊಲೆ ಮಾಡಲಾಗಿದೆ. ಉತ್ತರ ಬಾಲ್ಖ್ ಪ್ರಾಂತ್ಯದಲ್ಲಿ ಈ ಘಟನೆ ನಡೆದಿದೆ.

ಸದ್ಯ ಅನೇಕ ನಗರಗಳನ್ನು ವಶಕ್ಕೆ ಪಡೆದುಕೊಂಡಿರುವ ತಾಲಿಬಾಲಿಗಳು ಸಮರ್‌ಕಂಡ್‌ ಗ್ರಾಮವನ್ನೂ ವಶಕ್ಕೆ ಪಡೆದಕೊಂಡಿದ್ದಾರೆ. ಈ ಗ್ರಾಮದಲ್ಲಿನ ಯುವತಿಯೊಬ್ಬಳು ಈಗ ಉಗ್ರರ ಗುಂಡಿಗೆ ಬಲಿಯಾಗಿದ್ದಾಳೆ. ಪೊಲೀಸರ ಪ್ರಕಾರ, 21 ವರ್ಷದ ಸಂತ್ರಸ್ತೆಯನ್ನು ನಜಾನಿನ್ ಎಂದು ಗುರುತಿಸಲಾಗಿದೆ.

ಯುವತಿ ಅಡಿಯಿಂದ ಮುಡಿಯವರೆಗೆ ಬುರ್ಖಾ ಧರಿಸಿದ್ದರೂ ಅದು ಟೈಟ್‌ ಆಗಿತ್ತು ಎನ್ನುವ ಕಾರಣಕ್ಕೆ ಗುಂಡು ಹಾರಿಸಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಈ ಭಾಗದಲ್ಲಿನ ಮಹಿಳೆಯರು ಹೊರಗೆ ಹೋಗುವಂತಿಲ್ಲ. ಅದರಲ್ಲಿಯೂ ಉದ್ಯೋಗ ಮಾಡುವುದಂತೂ ನಿಷೇಧ. ಆದರೆ ಯುವತಿ ಹೊರಕ್ಕೆ ಹೋಗಿದ್ದೂ ಅಲ್ಲದೇ ಟೈಟ್‌ ಡ್ರೆಸ್‌ ಧರಿಸಿದ್ದಳು ಎನ್ನುವ ಕಾರಣಕ್ಕೆ ಈ ಕೃತ್ಯ ಮಾಡಲಾಗಿದೆ ಎಂದು ಮೂಲಗಳು ಹೇಳಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net