More

    ಇಂದು ಎಸ್‌ಎಸ್‌ಎಲ್‌ಸಿ ಫಲಿತಾಂಶ: ಇಲ್ಲಿದೆ ನೋಡಿ ಅಧಿಕೃತ ವೆಬ್‌ಸೈಟ್‌ ಲಿಂಕ್‌

    ಬೆಂಗಳೂರು: ಕಳೆದ ಜುಲೈ 29 ಮತ್ತು 31ರಂದು ನಡೆದಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶವು ಇಂದು ಮಧ್ಯಾಹ್ನ 3.30ಕ್ಕೆ ಪ್ರಕಟಗೊಳ್ಳಲಿದೆ.

    ಫಲಿತಾಂಶದ ಕುರಿತಾಗಿ ಮೊದಲಿಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಲಿದ್ದಾರೆ. ನಂತರ ಫಲಿತಾಂಶವು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಅಧಿಕೃತ ಜಾಲತಾಣದಲ್ಲಿ ಪ್ರಕಟವಾಗಲಿದೆ.

    ಒಟ್ಟು 8.71 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಜುಲೈ 19ರಂದು ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ವಿಷಯಗಳಿಗೆ ಪರೀಕ್ಷೆಯಾಗಿತ್ತು. ಜುಲೈ 22ರಂದು ಪ್ರಥಮ, ದ್ವಿತೀಯ ಹಾಗೂ ತೃತೀಯ ಭಾಷಾ ವಿಷಯಗಳ ಪರೀಕ್ಷೆಗಳು ನಡೆದಿದ್ದವು. ಒಂದೇ ದಿನದಲ್ಲಿ ಮೂರು ವಿಷಯಗಳಿಗೆ ಪರೀಕ್ಷೆ ಇದ್ದರಿಂದ ಪ್ರತೀ ಪ್ರಶ್ನೆಪತ್ರಿಕೆಯೂ ಬಹು ಆಯ್ಕೆ ಉತ್ತರಗಳೊಂದಿಗೆ 40 ಅಂಕಗಳನ್ನ ಹೊಂದಿತ್ತು. ಪರೀಕ್ಷೆಯಲ್ಲಿ ಗ್ರೇಡ್‌ಗಳನ್ನು ನೀಡಲಾಗುವುದು, ಯಾರನ್ನೂ ಅನುತ್ತೀರ್ಣ ಮಾಡುವುದಿಲ್ಲ ಎಂದು ಇದಾಗಲೇ ಶಿಕ್ಷಣ ಇಲಾಖೆ ಹೇಳಿದೆ.

    ಇಲ್ಲಿವೆ ನೋಡಿ ಲಿಂಕ್ಸ್‌
    ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಅಧಿಕೃತ ವೆಬ್‌ಸೈಟ್  https://sslc.karnataka.gov.in/ ಅಥವಾ http://kseeb.kar.nic.in/ ಇಲ್ಲಿ ಕ್ಲಿಕ್‌ ಮಾಡುವ ಮೂಲಕ ನೋಡಬಹುದು. ವೆಬ್‌ಸೈಟ್‌ನಲ್ಲಿ ತೆರೆದುಕೊಂಡ ಪುಟದಲ್ಲಿ ವಿದ್ಯಾರ್ಥಿಗಳು ರಿಜಿಸ್ಟರ್ ಸಂಖ್ಯೆ ಹಾಗೂ ಜನ್ಮ ದಿನಾಂಕ ಮಾಹಿತಿ ಒದಗಿಸಿ ಕ್ಲಿಕ್ ಮಾಡಿದರೆ ಫಲಿತಾಂಶದ ಮಾಹಿತಿ ದೊರೆಯುತ್ತದೆ.

    ಎಸ್‌ಎಸ್‌ಎಲ್‌ಸಿಗೆ ಸಂಬಂಧಿಸಿದ ಯಾವುದೇ ದೂರು, ಮಾಹಿತಿಗಳು ಬೇಕಿದ್ದರೆ https://sslc.karnataka.gov.in/ ಈ ಲಿಂಕ್‌ ಮೇಲೆ ಕ್ಲಿಕ್ಕಿಸಿ.

    ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟ: ಓರ್ವ ವಿದ್ಯಾರ್ಥಿ ಬಿಟ್ಟು ಎಲ್ಲರೂ ಪಾಸ್​! ಯಾರಿಗೆ ಯಾವ ಗ್ರೇಡ್​? ಇಲ್ಲಿದೆ ಮಾಹಿತಿ

    ನನ್ನ ತಾಯಾಣೆ.. ಅಷ್ಟೊಂದು ಹಣವನ್ನು ಜೀವನದಲ್ಲಿ ನೋಡಿಯೇ ಇರಲಿಲ್ಲ: ಮಂಜು ಪಾವಗಡ

    28ರಿಂದ 30ರವರೆಗೆ ಸಿಇಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts