ಕುರಿಯೊಂದಕ್ಕೆ ಕೋರ್ಟ್​ ವಿಧಿಸಿತು ಮೂರು ವರ್ಷಗಳ ಜೈಲು ಶಿಕ್ಷೆ! ಇದೆಂಥ ತೀರ್ಪು ಅಂತೀರಾ?

sheep
Published on

ಸುಡಾನ್​ (ದಕ್ಷಿಣ ಆಫ್ರಿಕಾ): ಮನುಷ್ಯರು ತಪ್ಪು ಮಾಡಿದರೆ ಕೋರ್ಟ್​ಗಳು ಶಿಕ್ಷೆ ನೀಡುವುದು ಎಲ್ಲಾ ದೇಶಗಳಲ್ಲಿಯೂ ಇರುವಂಥದ್ದೇ. ಅವರವರ ಕಾನೂನಿಗೆ ಅನುಸಾರವಾಗಿ ವಿಭಿನ್ನ ರೀತಿಯ ಶಿಕ್ಷೆಗಳು ಪ್ರಕಟಗೊಳ್ಳುತ್ತವೆ. ಆದರೆ ಇಲ್ಲೊಂದು ಕುತೂಹಲ ಎನ್ನುವ ಘಟನೆಯಲ್ಲಿ ಕುರಿಯೊಂದಕ್ಕೆ ಮೂರು ವರ್ಷಗಳ ಶಿಕ್ಷೆ ವಿಧಿಸಲಾಗಿದೆ.

ಇಂಥದ್ದೊಂದು ಘಟನೆ ನಡೆದಿರುವುದು ದಕ್ಷಿಣ ಆಫ್ರಿಕಾದ ಸುಡಾನ್​ನಲ್ಲಿ. 45 ವರ್ಷದ ಮಹಿಳೆಯೊಬ್ಬರು ರಸ್ತೆಯ ಬದಿ ನಿಂತುಕೊಂಡಿದ್ದ ಸಂದರ್ಭದಲ್ಲಿ ಕುರಿಯೊಂದು ಅವರಿಗೆ ನೂಕಿದೆ. ಅವರು ಆಯತಪ್ಪಿ ಬಿದ್ದು ಕೆಲ ದಿನಗಳ ಬಳಿಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.

ಈ ಹಿನ್ನೆಲೆಯಲ್ಲಿ ಕುರಿಯ ವಿರುದ್ಧ ದೂರು ದಾಖಲಾಗಿತ್ತು. ಇದೇ ಕಾರಣಕ್ಕೆ ಕುರಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅದರ ಮೇಲಿನ ಆರೋಪ ನಿಜವೆಂದು ಸಾಬೀತಾಗಿದೆ. ಈಗ ಕುರಿ 3 ವರ್ಷ ಜೈಲಿನಲ್ಲಿ ಶಿಕ್ಷೆ ಅನುಭವಿಸಬೇಕಿದೆ.

ಕುರಿ ಮಹಿಳೆಯ ಮೇಲೆ ದಾಳಿ ಮಾಡಿದಾಗ, ಅವರ ಪಕ್ಕೆಲುಬುಗಳು ಮುರಿದವು. ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಘಟನೆಯಲ್ಲಿ ಮೃತಪಟ್ಟ ಮಹಿಳೆಯ ಕುಟುಂಬಕ್ಕೆ ಪರಿಹಾರವಾಗಿ 5 ಹಸುಗಳನ್ನು ನೀಡುವಂತೆ ಕುರಿಗಳ ಮಾಲೀಕರಿಗೆ ಆದೇಶ ನೀಡಲಾಗಿದೆ. ಎರಡೂ ಕುಟುಂಬಗಳು ನೆರೆಹೊರೆಯವರಾಗಿದ್ದು, ನ್ಯಾಯಾಲಯದ ಆದೇಶದ ಪ್ರಕಾರ 3 ವರ್ಷಗಳ ನಂತರ ಶಿಕ್ಷೆ ಅನುಭವಿಸಿದ ಕುರಿ ಹೊರಗೆ ಬಂದಾಗ ಸಂತ್ರಸ್ತ ಕುಟುಂಬಕ್ಕೆ ಅದನ್ನು ನೀಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net