17 ವರ್ಷಗಳ ಡೇಟಿಂಗ್- ಇಬ್ಬರು ಮಕ್ಕಳ ಸಮ್ಮುಖದಲ್ಲಿ ಮದ್ವೆಯಾದ ಬಾಲಿವುಡ್​ ನಿರ್ದೇಶಕ- ನಟನ ಪುತ್ರಿ

mehtha
Published on

ಮುಂಬೈ: ಬಾಲಿವುಡ್​ ಸಿನಿಮಾ ಹಾಗೂ ಕಿರುತೆರೆಯಲ್ಲಿ ಹಲವಾರು ಧಾರವಾಹಿಗಳನ್ನು ನಿರ್ದೇಶಿಸಿರುವ ಖ್ಯಾತ ನಿರ್ದೇಶಕ ಹನ್ಸಲ್ ಮೆಹ್ತಾ ಅವರು 17 ವರ್ಷಗಳ ಡೇಟಿಂಗ್​ ಬಳಿಕ, ಇಬ್ಬರು ಮಕ್ಕಳ ಸಮ್ಮುಖದಲ್ಲಿ ಸಫೀನಾ ಹುಸೇನ್ ಅವರನ್ನು ಮದುವೆಯಾಗಿದ್ದಾರೆ.

ಹನ್ಸಲ್ ಮೆಹ್ತಾ ಮತ್ತು ಸಫೀನಾ ಅವರ ಮದುವೆಯು ಕ್ಯಾಲಿಫೋರ್ನಿಯಾದಲ್ಲಿ ನಡೆದಿದೆ. ಆಪ್ತರಷ್ಟೇ ಈ ಮದುವೆಯಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಸಫೀನಾ ಅವರು ನಟ ಯುಸೂಫ್ ಹುಸೇನ್ ಅವರ ಮಗಳು.


ಅಜಯ್ ದೇವಗನ್ ನಟನೆ ಛಲಾಂಗ್ ಸೇರಿದಂತೆ ಇಪ್ಪತ್ತಕ್ಕೂ ಹೆಚ್ಚು ಸಿನಿಮಾಗಳನ್ನು ಮೆಹ್ತಾ ನಿರ್ದೇಶಿಸಿದ್ದಾರೆ. ಇಷ್ಟೇ ಅಲ್ಲದೇ ಹಲವಾರು ಟಿವಿ ಧಾರಾವಾಹಿಗಳಿಗೆ ನಿರ್ದೇಶನದ ಜತೆಗೆ ನಿರ್ಮಾಣವನ್ನೂ ಮಾಡಿದ್ದಾರೆ.

ಇವರಿಗೆ ಸಾಹಿದ್ ಚಿತ್ರಕ್ಕಾಗಿ ಇವರು ರಾಷ್ಟ್ರ ಪ್ರಶಸ್ತಿ ಸಂದಿದೆ. ಈ ಬಗ್ಗೆ ಮಾತನಾಡಿರುವ ಮೆಹ್ತಾ, ‘ನಾವಿಬ್ಬರೂ ಮದುವೆ ಆಗದೇ ಇದ್ದರೂ, ಪ್ರತಿಜ್ಞೆ ತಗೆದುಕೊಂಡಂತೆ ಬದುಕು ನಡೆಸಿದೆವು. ಮಕ್ಕಳು ಬೆಳೆಯುವುದನ್ನು ನೋಡುತ್ತಾ 17 ವರ್ಷಗಳು ಹೇಗೆ ಕಳೆದವು ಎನ್ನುವುದೇ ಗೊತ್ತಾಗಲಿಲ್ಲ. ಇದೀಗ ನಾವಿಬ್ಬರೂ ಮದುವೆಯಾಗುತ್ತಿದ್ದೇವೆ’ ಎಂದಿದ್ದಾರೆ.

ಅಂದಹಾಗೆ, ಹನ್ಸಲ್ ಮೆಹ್ತಾ ಅವರಿಗೆ ಇದು ಎರಡನೇ ಮದುವೆ. 20ನೇ ವಯಸ್ಸಿನಲ್ಲೇ ಸುನೀತಾ ಎನ್ನುವವರನ್ನು ಮದುವೆಯಾಗಿದ್ದು, ಈ ಜೋಡಿಗೆ ಇಬ್ಬರು ಮಕ್ಕಳು. ನಂತರ ಸಂಸಾರದಲ್ಲಿ ಬಿರುಕು ಉಂಟಾಗಿ ವಿಚ್ಛೇದನ ಪಡೆದುಕೊಂಡರು. ನಂತರ ಸಫೀನಾ ಜತೆ ಡೇಟ್‍ ಮಾಡಲು ಆರಂಭಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net