ದಾಂಪತ್ಯ ಸುಖವಾಗಿರಬೇಕೆ? ಈ ನಿಯಮ ಪಾಲಿಸಿ ಎಂದು ಪತಿಯ ಜತೆ ಡಾನ್ಸ್‌ ಮಾಡ್ತಾ ಸನ್ನಿ ಲಿಯೋನ್‌ ಕೊಟ್ರು ಟಿಪ್ಸ್‌...

sunny
Published on

ಮುಂಬೈ: ನೀಲಿ ತಾರೆ ಎಂದೆ ಪ್ರಸಿದ್ಧಿ ಪಡೆದಿರುವ ಸನ್ನಿ ಲಿಯೋನ್‌ 10ನೇ ಮದುವೆ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ಡೇನಿಯಲ್ ವೇಬರ್ ಜತೆ ಮದುವೆಯಾಗಿ ಇದೀಗ ದಶಕ ಪೂರೈಸಿರುವ ಸನ್ನಿ ಅವರದ್ದು ಸುಖಿ ದಾಂಪತ್ಯ.

ಆದ್ದರಿಂದ ತಮ್ಮಂತೆಯೇ ಸುಖಿ ದಾಂಪತ್ಯ ಹೊಂದಲು ಏನು ಮಾಡಬೇಕು ಎಂದು ಸನ್ನಿಲಿಯೋನ್‌ ಹೇಳಿದ್ದಾರೆ. ಆದರೆ ಸ್ವಲ್ಪ ಡಿಫರೆಂಟ್‌ ಆಗಿ ಈ ವಿಷಯ ಹೇಳಿರುವ ಅವರು, ತಮ್ಮ ಪತಿಯ ಜತೆ ನೃತ್ಯ ಮಾಡುತ್ತಾ ಇದನ್ನು ತೋರಿಸಿಕೊಟ್ಟಿದ್ದಾರೆ.

ಈ ದಂಪತಿ ನೃತ್ಯ ಸಿಕ್ಕಾಪಟ್ಟೆ ವೈರಲ್ ಆಗಿದೆ. ವಿಡಿಯೋದಲ್ಲಿ ತಮ್ಮ ಸುಖಿ ದಾಂಪತ್ಯದ ಗುಟ್ಟನ್ನು ಅಭಿಮಾನಿಗಳ ಜತೆ ಶೇರ್ ಮಾಡಿಕೊಂಡು, ನೀವು ಪಾಲಿಸಿ ಅಂತ ಅಭಿಮಾನಿಗಳಿಗೆ ಸಲಹೆ ನೀಡಿದ್ದಾರೆ.

ವಿಡಿಯೋ ಮೂಲಕ ಅವರು ಹೇಳಿರುವ ಐದು ಸೂತ್ರಗಳು ಎಂದರೆ:

1. ದಂಪತಿ ನಡುವೆ ಒಳ್ಳೆಯ ಮಾತುಕತೆ ಆಗುತ್ತಿರಬೇಕು .

2. ಇಬ್ಬರೂ ಜತೆಯಾಗಿ ಡೇಟ್ ನೈಟ್ ಪ್ಲ್ಯಾನ್ ಮಾಡಬೇಕು.

3. ಇಬ್ಬರೂ ಒಟ್ಟಿಗೆ ಅಡುಗೆ ಮಾಡಿ.

4. ಒಬ್ಬರಿಗೊಬ್ಬರು ನಗಿಸುತ್ತಿರಬೇಕು.

5. ಒಬ್ಬರು ಮತ್ತೊಬ್ಬರನ್ನು ಹೊಗಳುತ್ತಿರಬೇಕು.

ಅಂದಹಾಗೆ ಈ ದಂಪತಿಗೆ ಮೂವರು ಮಕ್ಕಳು. 2011ರಲ್ಲಿ ಡೇನಿಯಲ್‌ ಜತೆ ಇವರ ವಿವಾಹವಾಗಿದೆ. ಸಿನಿಮಾದಲ್ಲಿ ನೀಲಿ ತಾರೆ ಎನಿಸಿಕೊಂಡರೂ ನಿಜ ಜೀವನದಲ್ಲಿ ಸನ್ನಿ ಲಿಯೋನ್‌ ಹಲವಾರು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡು ಶ್ಲಾಘನಾರ್ಹ ಕಾರ್ಯ ಮಾಡುತ್ತಿದ್ದಾರೆ.

ಸನ್ನಿ ದಂಪತಿ ಮಾಡಿರುವ ಡಾನ್ಸ್ ಇಲ್ಲಿದೆ ನೋಡಿ...

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net