

ನ್ಯೂಯಾರ್ಕ್: ವಿಮಾನದ ತುದಿಯಲ್ಲಿ ನೇತಾಡಿಕೊಂಡು ಸ್ಕೈಡೈವರ್ ಯುವತಿಯೊಬ್ಬಳು ವರ್ಕ್ಔಟ್ಮಾಡುತ್ತಿರುವ ವಿಡಿಯೋ ಭಾರಿ ವೈರಲ್ ಆಗಿದೆ.
ಕೇಟಿ ವಸೇನಿನಾ ಎಂಬ ಸ್ಕೈಡೈವರ್ ಈ ಸಾಹಸಕ್ಕೆ ಕೈ ಹಾಕಿದವರು. ಇದೇ ಒಂದನೇ ತಾರೀಖು ಅವರು ಇನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ವರ್ಕ್ಔಟ್ ವಿಡಿಯೋ ಶೇರ್ ಮಾಡಿದ್ದಾರೆ. ವಿಮಾನದ ಹೊರಭಾಗದಲ್ಲಿ ಯಾವುದೇ ಅಳುಕು ಇಲ್ಲದೆಯೇ ಎರಡೂ ಕಾಲುಗಳನ್ನು ಮೇಲೆತ್ತುವ ಮೂಲಕ ಕಿಬ್ಬೊಟ್ಟೆಗೆ ಸಂಬಂಧಿಸಿದ ವ್ಯಾಯಾಮ ಮಾಡಿರುವುದನ್ನು ವಿಡಿಯೋದಲ್ಲಿ ಗಮನಿಸಬಹುದಾಗಿದೆ.
ಇದಾದ ಬಳಿಕ ಅವರು, ಆಕಾಶದಿಂದ ಕೆಳಕ್ಕೆ ಜಿಗಿದಿದ್ದಾರೆ. ಈ ವಿಡಿಯೋ ಭಾರಿ ವೈರಲ್ ಆಗಿದ್ದು, ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.
ಅಂದಹಾಗೆ ಕೇಟಿ ವಸೇನಿನಾ, ಈಕೆ ಯುಸಿಎಫ್ ಸ್ಕೂಲ್ ಆಫ್ ಕಿನಿಸಿಯಾಲಜಿಯಲ್ಲಿ ಪಿಎಚ್‌ಡಿ ವಿದ್ಯಾರ್ಥಿನಿ. ಇವರ ಇನ್ಸ್ಟಾಗ್ರಾಮ್ನಲ್ಲಿ 1.3 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಇದ್ದಾರೆ.
ನೀವೂ ನೋಡಿ ಈ ರೋಮಾಂಚನಕಾರಿ ವಿಡಿಯೋ