More

    ಇಲ್ಲಿಯ ಬಸ್​ನಲ್ಲಿ ಹೋಗೋ ಪುರುಷರೇ ಎಚ್ಚರ ಎಚ್ಚರ: ಮಹಿಳೆಯರಿಂದ ಇನ್ಮುಂದೆ ನೀವಾಗ್ಬೋದು ಅರೆಸ್ಟ್​!

    ಚೆನ್ನೈ: ಬಸ್​ಗಳಲ್ಲಿ ಪ್ರಯಾಣಿಸುವ ಮಹಿಳೆಯರಿಗೆ ಆಗುವ ಕಿರಿಕಿರಿಗಳು ಅಷ್ಟಿಷ್ಟಲ್ಲ. ಅದರಲ್ಲಿಯೂ ಬಸ್​ ರಶ್​ ಇತ್ತು ಎಂದರೆ ಸಾಕು, ಕೆಲವು ಪುರುಷರು ವಿಕೃತಿ ಮೆರೆಯಲು ಶುರುಮಾಡುತ್ತಾರೆ. ಮಹಿಳೆಯರನ್ನು ದುರುಗುಟ್ಟಿ ನೋಡುವುದು, ಅವರ ಹಿಂದೆಯೇ ನಿಂತು ಅಂಗಾಂಗಗಳನ್ನು ಮುಟ್ಟುವುದು… ಹೀಗೆ ಕೆಲವರು ಮಹಿಳೆಯರಿಗೆ ಮುಜುಗರ ತರುವ ರೀತಿಯಲ್ಲಿ ನಡೆದುಕೊಳ್ಳುವುದು ಸರ್ವೇ ಸಾಮಾನ್ಯವಾಗಿದೆ.

    ಇದಕ್ಕೆ ಬ್ರೇಕ್​ ಹಾಕಲು ತಮಿಳುನಾಡು ಸರ್ಕಾರ ನಿರ್ಧರಿಸಿದೆ. ಇದೇ ಕಾರಣಕ್ಕೆ ತಮಿಳುನಾಡಿನಲ್ಲಿ ಮೋಟಾರು ವಾಹನ ಕಾಯ್ದೆಯನ್ನು ತಿದ್ದುಪಡಿ ಮಾಡಲಾಗಿದ್ದು, ಹೊಸ ನಿಯಮ ಅಲ್ಲಿ ಜಾರಿಗೆ ಬರಲಿದೆ.

    ಈ ತಿದ್ದುಪಡಿ ಕಾಯ್ದೆಯಿಂದಾಗಿ ಕೆಟ್ಟದಾಗಿ ನಡೆದುಕೊಳ್ಳುವ ಪುರುಷರು ಇನ್ಮುಂದೆ ಕಂಬಿ ಎಣಿಸುವುದು ಖಚಿತವಾಗಿದೆ. ಬಸ್‌ನಲ್ಲಿ ಪ್ರಯಾಣಿಸುವಾಗ ಮಹಿಳೆಯರನ್ನು ದಿಟ್ಟಿಸಿ ನೋಡುವುದು, ಅಸಭ್ಯವಾಗಿ ವರ್ತಿಸುವುದು, ಮಹಿಳೆಯರನ್ನು ನೋಡಿ ಶಿಳ್ಳೆ ಹೊಡೆಯುವುದು, ಅಶ್ಲೀಲ ಸನ್ನೆಗಳನ್ನು ಮಾಡುವುದು, ಡಬಲ್ ಮೀನಿಂಗ್ ಜೋಕ್ ಹೇಳುವುದು, ಕಮೆಂಟ್ ಮಾಡುವುದು ಮತ್ತು ಲೈಂಗಿಕ ತೊಂದರೆ ನೀಡುವುದು ಇತ್ಯಾದಿಗಳನ್ನು ಅಪರಾಧದ ಪಟ್ಟಿಯಲ್ಲಿ ಸೇರಿಸಲಾಗಿದ್ದು, ಮಹಿಳೆಯರು ದೂರು ನೀಡಿದರೆ ಅಂಥವರಿಗೆ ಶಿಕ್ಷೆ ವಿಧಿಸುವ ಅವಕಾಶ ಈ ಹೊಸ ಕಾನೂನಿನಲ್ಲಿ ಜಾರಿಗೆ ತರಲಾಗಿದೆ.

    ಒಂದು ವೇಳೆ ಯಾವುದೇ ಸ್ತ್ರೀ ತನಗೆ ಹೀಗೆ ಅಸಹ್ಯವಾಗುತ್ತಿದೆ ಎಂದು ಎನಿಸಿದರೆ ಆಕೆ ಕಂಡಕ್ಟರ್​ ಗಮನಕ್ಕೆ ವಿಷಯವನ್ನು ತರಬೇಕು. ಕಂಡಕ್ಟರ್​ ಕೂಡಲೇ ಆ ಪ್ರಯಾಣಿಕನನ್ನು ಬಸ್​​ನಿಂದ ತಕ್ಷಣ ಇಳಿಸಬೇಕು. ಈ ಸಂದರ್ಭದಲ್ಲಿ ಸಹ ಪ್ರಯಾಣಿಕರೊಂದಿಗೆ ಸರಿಯಾದ ವಿಚಾರಣೆ ನಡೆಸಬೇಕು. ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿರುವುದು ನಿಜವಾದರೆ ಅಂಥವರದ್ದು ಪೊಲೀಸ್ ಠಾಣೆಗೆ ಹಸ್ತಾಂತರಿಸಬೇಕು ಎಂದು ಈ ತಿದ್ದುಪಡಿಯಲ್ಲಿ ತಿಳಿಸಲಾಗಿದೆ.

    ಒಂದೇ ವೇಳೆ ಖುದ್ದು ಕಂಡಕ್ಟರೇ ಅನುಚಿತವಾಗಿ ವರ್ತಿಸಿದರೂ ಅವರಿಗೆ ಶಿಕ್ಷೆ ನೀಡುವ ಅವಕಾಶ ಇದರಲ್ಲಿ ಇದೆ. ಬಸ್ ಹತ್ತುವ ಅಥವಾ ಇಳಿಯುವ ಮಹಿಳೆಯನ್ನು ಸ್ಪರ್ಶಿಸಿ ನಂತರ ತಾನು ಸಹಾಯ ಮಾಡುತ್ತಿದ್ದೇನೆ ಎಂಬ ನೆಪ ಹೇಳುವ ಕಂಡಕ್ಟರ್​ಗಳಿಗೂ ಅನ್ವಯಿಸುತ್ತದೆ. ಮಹಿಳೆ ಕಂಡಕ್ಟರ್​ ವಿರುದ್ಧ ದೂರು ನೀಡಿದರೆ, ಆತ ಅಪರಾಧಿಯಾಗುತ್ತಾನೆ.

    ಕಂಡಕ್ಟರ್ ನಿರ್ವಹಿಸುವ ಕರ್ತವ್ಯಗಳ ಕೊರತೆಯ ಬಗ್ಗೆ ದೂರುಗಳನ್ನು ದಾಖಲಿಸಲು ಯಾವುದೇ ಪ್ರಯಾಣಿಕರಿಗೆ ದೂರು ಪುಸ್ತಕವನ್ನು ನೀಡಬೇಕು ಹಾಗೂ ಅದನ್ನು ನಿರ್ವಹಿಸಲು ಕಂಡಕ್ಟರ್​ಗೆ ನಿರ್ದೇಶಿಸಲಾಗಿದೆ. ಅಗತ್ಯವಿದ್ದಲ್ಲಿ ಈ ದೂರು ಪುಸ್ತಕವನ್ನು ಮೋಟಾರು ವಾಹನ ಪ್ರಾಧಿಕಾರ ಅಥವಾ ಪೊಲೀಸರ ಮುಂದೆ ಹಾಜರುಪಡಿಸಬೇಕು.

    ಈ ಹೊಸ ಕಾನೂನಿಗೆ ಮಹಿಳೆಯರು ಹರ್ಷ ವ್ಯಕ್ತಪಡಿಸುತ್ತಿದ್ದಾರೆ. ಇಂಥ ಕಾನೂನು ಎಲ್ಲಾ ರಾಜ್ಯಗಳಲ್ಲಿಯೂ ಬರುವ ಅಗತ್ಯವಿದೆ ಎನ್ನುತ್ತಿದೆ ಮಹಿಳಾ ವರ್ಗ. ಆದರೆ ಪುರುಷರಿಗೆ ಇದು ತಲೆನೋವಾಗಿ ಪರಿಣಮಿಸಿದೆ. ಒಂದು ವೇಳೆ ಮಹಿಳೆಯರು ವಿನಾಕಾರಣ ತಮಗೆ ತೊಂದರೆ ಕೊಡಬಹುದು, ಸುಳ್ಳು ದೂರು ದಾಖಲಿಸಬಹುದು ಎಂದೂ ಕೆಲವು ಪುರುಷರು ಅಸಮಾಧಾನ ಹೊರಹಾಕುತ್ತಿದ್ದಾರೆ. ಇನ್ನು ಕೆಲವರು ಮಹಿಳೆಯರ ಸಹವಾಸವೇ ಬೇಡಪ್ಪ ಎನ್ನುತ್ತಿದ್ದಾರೆ (ಏಜೆನ್ಸೀಸ್​)

    ಚಿರು ಸಾವಿನ ನಂತರ 2ನೇ ಮದುವೆಯ ಬಗ್ಗೆ ನಟಿ ಮೇಘನಾ ರಾಜ್​ ಮನಬಿಚ್ಚಿ ಮಾತನಾಡಿದ್ದು ಹೀಗೆ…

    ಬಾರ್​ಗಳಿಗೆ ಅನುಮತಿ ನೀಡಿಕೆಯಲ್ಲಿ ಭಾರಿ ಅಕ್ರಮ: ದೆಹಲಿ ಡಿಸಿಎಂ ಸಿಸೋಡಿಯಾಗೆ ಲುಕ್​ಔಟ್​ ನೋಟಿಸ್​

    VEDIO: ರಾಹುಲ್​ ಕಚೇರಿಯ ಗಾಂಧಿ ಫೋಟೋ ಧ್ವಂಸ; ವಿಡಿಯೋದಿಂದ ಬಯಲಾಯ್ತು ಭಯಾನಕ ಸತ್ಯ- ಕಾಂಗ್ರೆಸ್ಸಿಗರೇ ಅರೆಸ್ಟ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts