

ನವದೆಹಲಿ: ಶಾಪಿಂಗ್ ಮಾಡುವಾಗ ನಗದು ತೆಗೆದುಕೊಂಡು ಹೋಗುವುದು ಮಾಮೂಲಾಗಿತ್ತು. ನಂತರದ ದಿನಗಳಲ್ಲಿ ಹಣದ ಬದಲಾಗಿ ಡಿಬಿಟ್, ಕ್ರೆಡಿಟ್ ಕಾರ್ಡ್ಗಳಿಗೆ ಬೇಡಿಕೆ ಬಂತು. ಆನಂತರ ಸ್ಮಾರ್ಟ್ಫೋನ್ ಇದ್ದರೆ ಸಾಕು, ಕೋಡ್ ಸ್ಕ್ಯಾನ್ ಮಾಡಿ ಹಣ ಪಾವತಿಸುವುದು ರೂಢಿಗೆ ಬಂತು.
ಇದಕ್ಕು ಒಂದು ಹೆಜ್ಜೆ ಮುಂದೆ ಹೋಗಿರುವ ವಾಚ್ ದೈತ್ಯ ಟೈಟಾನ್ ಕಂಪೆನಿಯು ತನ್ನ ವಾಚ್ನಲ್ಲಿಯೇ ಹಣವನ್ನು ಪಾವತಿ ಮಾಡುವ ವ್ಯವಸ್ಥೆಯನ್ನು ಕಲ್ಪಿಸಿದೆ!
ಶಾಪಿಂಗ್ ನಂತರ ಹಣ ಪಾವತಿಸಲು ಡೆಬಿಟ್ ಕಾರ್ಡ್ ಅಥವಾ ಮೊಬೈಲ್ ಫೋನ್ ಅಪ್ಲಿಕೇಶನ್ ಅಗತ್ಯವಿಲ್ಲ. ಈ ಕೆಲಸವನ್ನು ಈಗ ವಾಚ್ ಮೂಲಕ ಮಾಡಬಹುದಾಗಿದೆ.ಕಾಂಟ್ಯಾಕ್ಟ್ ಲೆಸ್ ಪೇಮೆಂಟ್ ಬೆಂಬಲಿಸುವ 5 ವಾಚ್ಗಳನ್ನು ಟೈಟನ್ ಬಿಡುಗಡೆ ಮಾಡಿದೆ. ಈ ವೈಶಿಷ್ಟ್ಯಕ್ಕಾಗಿ ಕಂಪನಿಯು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಜತೆಗೆ ಕೈಜೋಡಿಸಿದೆ.
ಶಾಪಿಂಗ್ ನಂತರ ಹಣ ಪಾವತಿಸುವ ವೇಳೆ ಪಿಒಎಸ್ ಯಂತ್ರದ ಬಳಿ ಹೋಗಿ ಟೈಟನ್ ಪೇ ಪವರ್ ವಾಚ್ ಟ್ಯಾಪ್ ಮಾಡಿದ್ರೆ ಹಣ ಪಾವತಿಯಾಗುತ್ತದೆ. ಇದಕ್ಕೆ ಯಾವುದೇ ಪಿನ್ ಅಗತ್ಯವಿರುವುದಿಲ್ಲ.
ಪುರುಷರಿಗಾಗಿ ಮೂರು ಹಾಗೂ ಮಹಿಳೆಯರಿಗಾಗಿ ಎರಡು ಡಿಸೈನ್ ನ ವಾಚನ್ನು ಕಂಪನಿ ಬಿಡುಗಡೆ ಮಾಡಿದೆ.
ಆದರೆ ಇದರಲ್ಲಿ ಎರಡೇ ಎರಡು ಷರತ್ತುಗಳಿವೆ. ಅದೇನೆಂದರೆ ನೀವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಗ್ರಾಹಕರಾಗಿರಬೇಕು ಇನ್ನೊಂದೆಂದರೆ ಕೇವಲ 2 ಸಾವಿರ ರೂಪಾಯಿವರೆಗಿನ ಶಾಪಿಂಗ್ಗೆ ಪಿನ್ ಅಗತ್ಯವಿಲ್ಲ. ಆದರೆ ಸುರಕ್ಷತೆಯ ದೃಷ್ಟಿಯಿಂದ ಎರಡು ಸಾವಿರ ರೂಪಾಯಿ ಮೇಲಿನ ಶಾಪಿಂಗ್ ಮಾಡಿದರೆ ಪಿನ್ ಅಗತ್ಯವಿದೆ. ಸಾಮಾನ್ಯವಾಗಿ ವೈ-ಫೈ ಸೌಲಭ್ಯದ ಡೆಬಿಟ್ ಕಾರ್ಡ್ ಪಾವತಿ ರೀತಿಯಲ್ಲಿ ಇದು ಕೂಡ ಇರಲಿದೆ.
ಅಂದಹಾಗೆ ವಾಚ್ನ ಆರಂಭಿಕ ಬೆಲೆ 2,995 ರೂಪಾಯಿ. ಇನ್ನೂ ಹೆಚ್ಚು ದುಡ್ಡಿದ್ದರೆ 3,995 ರೂ, 5,995 ರೂ ಬೆಲೆಯ ವಾಚ್ಗಳು ಪುರುಷರಿಗಅಗಿ ಹಾಗೂ 3,895 ರೂಪಾಯಿ ಮತ್ತು 4,395 ರೂಪಾಯಿ ಬೆಲೆಯ ವಾಚ್ಗಳು ಮಹಿಳೆಯರಿಗಾಗಿ ಸಿದ್ಧಗೊಂಡಿವೆ.
ಈ ಗಡಿಯಾರಗಳು ಟೈಟಾನ್‌ನ ವೆಬ್‌ಸೈಟ್‌ನಲ್ಲಿ ಮಾರಾಟಕ್ಕಿವೆ.