More

    ಪ್ರಧಾನಿ ಮೋದಿಯವರ ಬರ್ತ್​ಡೇಗೆ ವಿಷ್​ ಮಾಡಬೇಕಾ? ಇಲ್ಲಿದೆ ನೋಡಿ ವಿವರ…

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು 70 ವಸಂತಗಳನ್ನು ಪೂರೈಸಿದ್ದು, 71ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ.

    ಇದಾಗಲೇ ಭಾರತ ಮಾತ್ರವಲ್ಲದೇ ಹಲವಾರು ದೇಶಗಳಲ್ಲಿ ಭಾರಿ ಜನಪ್ರಿಯತೆ ಗಳಿಸಿರುವ ಪ್ರಧಾನಿ ಮೋದಿಯವರು ವಿಶ್ವದ ಪ್ರಭಾವಶಾಲಿ ನಾಯಕ ಎಂದೂ ಹೆಸರು ಗಳಿಸಿದವರು. ಅವರ ಈ ಹುಟ್ಟುಹಬ್ಬಕ್ಕೆ ಇದಾಗಲೇ ಲಕ್ಷಾಂತರ ಮಂದಿ ದೇಶ-ವಿದೇಶಗಳಿಂದ ಶುಭಾಶಯಗಳ ಮಹಾಪೂರವನ್ನೇ ಹರಿಸಿದ್ದಾರೆ.

    ಟ್ವಿಟ್ಟರ್​, ಫೇಸ್​ಬುಕ್​ ಸೇರಿ ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟಿವ್​ ಆಗಿರುವ ಮೋದಿಯವರು ಇದಾಗಲೇ ಈ ಸಾಮಾಜಿಕ ಜಾಲತಾಣಗಳಲ್ಲಿ ಸಮಸ್ಯೆ ಹೇಳಿಕೊಂಡಿರುವ ಹಲವಾರು ಮಂದಿಗೆ ಪರಿಹಾರವನ್ನೂ ನೀಡಿದ್ದಾರೆ, ಜತೆಗೆ ಪ್ರಧಾನಿ ಕಾರ್ಯಾಲಯವು ಹಲವಾರು ಜನರಿಗೆ ಸ್ಪಂದಿಸಿರುವುದು ಕೂಡ ಇದೇ ಜಾಲತಾಣಗಳ ಮೂಲಕ.
    ಪ್ರಧಾನಿ ಮೋದಿಯವರಿಗೆ ಬರ್ತ್​ಡೇ ವಿಷ್​ ಮಾಡಬೇಕು ಎಂದು ನಿಮಗೂ ಅನ್ನಿಸಿರಬಹುದು, ಆದರೆ ಅದು ಹೇಗೆ? ಅವರಿಗೆ ಶುಭಾಶಯ ಸಂದೇಶ ಕಳುಹಿಸುವುದು ಹೇಗೆ ಎಂದು ನಿಮ್ಮಲ್ಲಿ ಪ್ರಶ್ನೆ ಕಾಡುತ್ತಿದ್ದರೆ ಅದಕ್ಕೆ ಉತ್ತರ ನಮೋ ಆ್ಯಪ್​.

    ಸಾಮಾಜಿಕ ಜಾಲತಾಣಗಳ ಜತೆಯಲ್ಲಿ ನಮೋ ಆ್ಯಪ್​ ಕೂಡ ಇದೀಗ ಜನಮನವನ್ನು ಗೆದ್ದಿದೆ. ಇದರ ಮೂಲಕವೇ ನೀವು ಶುಭಾಶಯ ಕಳುಹಿಸಬಹುದಾಗಿದೆ.
    ಅದಕ್ಕಾಗಿ ನೀವು ನಮೋಆ್ಯಪ್​ ಡೌನ್​ಲೋಡ್​ ಮಾಡಿಕೊಳ್ಳಬೇಕು. http://nm4.in/dnldapp ಎಂದು ಟೈಪಿಸುವ ಮೂಲಕ  ನಮೋಆ್ಯಪ್​ ಡೌನ್​ಲೋಡ್​ ಮಾಡಿಕೊಳ್ಳಬಹುದು.

    ಕೆಳಗಿನ ಬಿಜೆಪಿಯ ಟ್ವಿಟ್​ರ್​ನಲ್ಲಿ ಲಿಂಕ್​ ಜತೆ ಸಂಪೂರ್ಣ ಮಾಹಿತಿ ಇದೆ ನೋಡಿ… –

    ನನ್ನನ್ನು ಉಪಮುಖ್ಯಮಂತ್ರಿ ಮಾಡಮ್ಮಾ… ದುರ್ಗಿಗೆ ಪತ್ರ ಬರೆದರಂತೆ ಶ್ರೀರಾಮುಲು!

    ಇನ್ಮುಂದೆ 90 ನಿಮಿಷ ಕಿಮ್​ನ ಗುಣಗಾನ ಕಡ್ಡಾಯ- ಸಹೋದರಿಯಿಂದ ವಿಚಿತ್ರ ಆದೇಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts