ಪರ ಪುರುಷನ ಜತೆ ಸಂಬಂಧ: ಮಹಿಳೆಯ ಬಟ್ಟೆಗಳನ್ನು ಕಿತ್ತೆಸೆದು ಬೆತ್ತಲೆ ಮೆರವಣಿಗೆ ಮಾಡಿದ ಗ್ರಾಮಸ್ಥರು!

naked
Published on

ಕೋಲ್ಕತಾ: ಪರ ಪುರುಷನ ಜತೆ ಸಂಬಂಧ ಹೊಂದಿರುವ ಕಾರಣಕ್ಕೆ ಮಹಿಳೆಯೊಬ್ಬರನ್ನು ಬೆತ್ತಲೆಗೊಳಿಸಿ ಥಳಿಸಿರುವ ಅಮಾನುಷ ಘಟನೆ ಪಶ್ಚಿಮ ಬಂಗಾಳದ ಅಲಿಪುರ್ದಾರ್‌ನಲ್ಲಿ ನಡೆದಿದೆ

ಇಲ್ಲಿಯ ಪಂಚಾಯತ್ ಮಹಿಳೆಗೆ ಇಂಥದ್ದೊಂದು ಶಿಕ್ಷೆ ನೀಡಿದೆ. ಪಂಚಾಯತ್ ಸಭೆಯಲ್ಲಿಯೇ ಆಕೆಯನ್ನು ಬೆತ್ತಲೆಯಾಗಿ ಥಳಿಸಿ ನಂತರ ಹಳ್ಳಿಗೆ ಕರೆದುಕೊಂಡು ಹೋಗಲಾಗಿದೆ. ಗ್ರಾಮಸ್ಥರು ಇದರ ವಿಡಿಯೋ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಮಾಡಿದ್ದಾರೆ!

ವಿಡಿಯೋ ನೋಡಿದ ಪೊಲೀಸರು ಸ್ಥಳಕ್ಕೆ ಧಾವಿಸಿ ಆರೋಪಿಗಳ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿಯನ್ನು ಬಂಧಿಸಲಾಗಿದೆ. ಈಕೆ ಬುಡಕಟ್ಟು ಈಕೆ ಕೆಲ ತಿಂಗಳ ಹಿಂದೆ ಪತಿಯನ್ನು ಬಿಟ್ಟು ಆ ವ್ಯಕ್ತಿಯ ಜತೆ ಗ್ರಾಮ ತೊರೆದಿದ್ದಳು. ಆದರೆ ಆತನ ಜತೆಯೂ ಜಗಳವಾಡಿ ಪುನಃ ಗ್ರಾಮಕ್ಕೆ ಬಂದಿದ್ದಳು. ಇದರಿಂದ ಸಿಟ್ಟುಗೊಂಡ ಗ್ರಾಮಸ್ಥರು ಈ ಶಿಕ್ಷೆ ನೀಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಸಭೆಯಲ್ಲಿದ್ದ ಯುವಕರು ಮಹಿಳೆಯ ಬಟ್ಟೆಗಳನ್ನು ಹರಿದುಹಾಕಿದ್ದು, ಆಕೆಯನ್ನು ಇಡೀ ಗ್ರಾಮದ ಸುತ್ತಲು ಬೆತ್ತಲೆಯಾಗಿಯೇ ತಿರುಗಿಸಲಾಗಿದೆ. ಇದರ ವಿಡಿಯೋ ಮಾಡಿ ಅಪ್‌ಲೋಡ್‌ ಮಾಡಲಾಗಿದೆ ಎಂದು ಅವರು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net