

ಬೆಂಗಳೂರು: ಬೈಕ್ ಅಪಘಾತದಲ್ಲಿ ಮೃತಪಟ್ಟ ನಟ ಸಂಚಾರಿ ವಿಜಯ್ ಅವರ ಅಂಗಾಂಗಗಳನ್ನು ಅಗತ್ಯ ಇರುವವರಿಗೆ ನೀಡುವ ಪ್ರಕ್ರಿಯೆಗೆ ಇದಾಗಲೇ ಚಾಲನೆ ದೊರೆತಿದೆ.
ಸಂಚಾರಿ ವಿಜಯ್ ಅವರ ಅಂಗಾಂಗಗಳನ್ನು ದಾನ ಮಾಡಲು ನಿನ್ನೆಯೇ ಅವರ ಕುಟುಂಬಸ್ಥರು ಒಪ್ಪಿಗೆ ನೀಡಿದ್ದರಿಂದ ಕಸಿ ಆಪರೇಷನ್ ಶುರು ಮಾಡಲಾಗಿದೆ. ಇದಾಗಲೇ ಇವರ ಮೂತ್ರಪಿಂಡಗಳನ್ನು ಮಹಿಳೆಯೊಬ್ಬರಿಗೆ ಚಿಕಿತ್ಸೆ ಮೂಲಕ ಜೋಡಣೆ ಮಾಡಲಾಗಿದೆ. ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿ ನಡೆದಿದೆ ಎಂದು ಬೆಂಗಳೂರಿನ ಎಂ ಎಸ್ ರಾಮಯ್ಯ ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ.
ನಗರದ ಲಗ್ಗೆರೆ ಮೂಲದ 34 ವರ್ಷದ ಮಹಿಳೆಗೆ ಕಿಡ್ನಿಯ ಅಗತ್ಯವಿತ್ತು. ವಿಜಯ್ ಅವರ ಬ್ಲಡ್ ಗ್ರೂಪ್ , ಡಿ ಎನ್ ಎ , ಕಿಡ್ನಿ ಸೈಜ್ ಎಲ್ಲವೂ ಮಹಿಳೆಗೆ ಮ್ಯಾಚ್ ಆಗಿತ್ತು. ಈ ಹಿನ್ನೆಲೆಯಲ್ಲಿ ವಿಜಯ್ ಅವರ ಒಂದು ಕಿಡ್ನಿ ಮಹಿಳೆಗೆ ಯಶಸ್ವಿಯಾಗಿ ಟ್ರಾನ್ಸ್‌ಪ್ಲಾಂಟೇಷನ್ ಮಾಡಲಾಗಿದೆ ಎಂದು ವೈದ್ಯರು ಹೇಳಿದ್ದಾರೆ.
ಅದೇ ಇನ್ನೊಂದೆಡೆ ಬೆಂಗಳೂರಿನ ಮಿಂಟೋ ಆಸ್ಪತ್ರೆಯಲ್ಲಿ ಇಬ್ಬರಿಗೆ ವಿಜಯ್ ಅವರ ಕಣ್ಣುಗಳನ್ನು ಜೋಡಿಸುವ ಕಾರ್ಯ ಸಾಗಿದ್ದು, ಒಬ್ಬರಿಗೆ ಕಣ್ಣು ಜೋಡಣೆ ಕಾರ್ಯ ಮುಕ್ತಾಯಗೊಂಡಿದೆ. ದೃಷ್ಟಿ ಕಳೆದುಕೊಂಡಿದ್ದ ಇಬ್ಬರ ಬಾಳಲ್ಲಿ ವಿಜಯ್ ಅವರು ಬೆಳಕು ನೀಡಿದ್ದಾರೆ.