More

    ಸಂಚಾರಿ ವಿಜಯ್‌ ಅವರ ಅಂಗಾಂಗ ದಾನ ಹೇಗೆ? ಸಂಪೂರ್ಣ ಮಾಹಿತಿ ನೀಡಿದೆ ಆರೋಗ್ಯ ಇಲಾಖೆ

    ಬೆಂಗಳೂರು: ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ನಟ ಸಂಚಾರಿ ವಿಜಯ್‌ ಅವರ ಬ್ರೇನ್‌ ಡೆಡ್‌ ಆಗಿರುವ ಬಗ್ಗೆ ಇದಾಗಲೇ ಒಂದು ಬಾರಿ ಘೋಷಣೆ ಮಾಡಲಾಗಿದೆ. ನಿಯಮದ ಪ್ರಕಾರ, ಎರಡನೆಯ ಬಾರಿ ಪರೀಕ್ಷೆ ಮಾಡಿ ಘೋಷಣೆ ಮಾಡಬೇಕಿದೆ.

    ಈ ಹಿನ್ನೆಲೆಯಲ್ಲಿ ‘ಜೀವ ಸಾರ್ಥಕತೆ ತಂಡ’ ಆಸ್ಪತ್ರೆಗೆ ಆಗಮಿಸಲಿದೆ. ಇವರ ಅಂಗಾಂಗವನ್ನು ದಾನ ಮಾಡಲು ಕುಟುಂಬಸ್ಥರು ಒಪ್ಪಿಗೆ ನೀಡಿದ್ದ ಹಿನ್ನೆಲೆಯಲ್ಲಿ ಎರಡನೆಯ ಬಾರಿ ಬ್ರೇನ್‌ಡೆಡ್‌ ಆಗಿರುವ ಘೋಷಣೆ ಮಾಡಬೇಕಿದೆ. ಈ ಎಲ್ಲಾ ಪ್ರಕ್ರಿಯೆ ಇಂದು ರಾತ್ರಿಯೊಳಗೆ ಮುಗಿಯುವ ಸಾಧ್ಯತೆ ಇದೆ.

    ಆರೋಗ್ಯ ಇಲಾಖೆ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಜೀವ ಸಾರ್ಥಕತೆ ತಂಡ ಆಸ್ಪತ್ರೆಗೆ ಬಂದು ಬ್ರೈನ್ ಡೆಡ್ ಡಿಕ್ಲರೇಷನ್ ಮಾಡುತ್ತದೆ. ಸಂಚಾರಿ ವಿಜಯ್‌ ಅವರಿಗೆ ಮಧ್ಯಾಹ್ನ ‌12 ಗಂಟೆಗೆ ಅಪ್ನಿಯಾ ಟೆಸ್ಟ್ ಮಾಡಲಾಗಿದೆ. ಒಂದು ಪರೀಕ್ಷೆಯಿಂದ ಎರಡನೆಯ ಪರೀಕ್ಷೆಗೆ ಕನಿಷ್ಠ ಆರು ಗಂಟೆ ಅಂತರ ಇರಬೇಕಿರುವ ಕಾರಣ, ಇದೀಗ ಎರಡನೆಯ ಪರೀಕ್ಷೆ ಮಾಡಲಾಗುತ್ತದೆ.

    ಅಪ್ನಿಯಾ ಟೆಸ್ಟ್ ನಲ್ಲಿ ಮೆದುಳು ಕೆಲಸ ಮಾಡ್ತಿದೆಯಾ ಇಲ್ವಾ ಎನ್ನುವುದನ್ನು ಖಚಿತಪಡಿಸಿಕೊಳ್ಳಲಾಗತ್ತದೆ. ಈ ಪ್ರಕ್ರಿಯೆಯಲ್ಲಿ ಕಣ್ಣಿನ ಮೇಲೆ ಹತ್ತಿ ಇಂದ ಸವರುವುದು, ಕಿವಿಯಲ್ಲಿ ತಣ್ಣೀರು ಹಾಕುವುದು, ಹೀಗೆ 10 ಟೆಸ್ಟ್‌ ಮಾಡಲಾಗುವುದು. ಈ ಪರೀಕ್ಷೆಗಳಲ್ಲಿ ಮೆದುಳು ಸ್ಪಂದಿಸದೇ ಇದ್ದರೆ ಬ್ರೈನ್ ಡೆಡ್ ಎಂದು ಘೋಷಣೆ ಮಾಡಲಾಗುತ್ತದೆ. ಬಳಿಕ ವೈದ್ಯರಿಂದ ಪಾರ್ಮ್‌ 10 ಗೆ ಸಹಿ‌ಪಡೆಯಲಾಗುವುದು. ಇದಾದ ನಂತರ ಅಂಗಾಂಗ ದಾನಕ್ಕೆ ಒಪ್ಪಿಗೆ ಪತ್ರಕ್ಕೆ ಕುಟುಂಬದವರ ಸಹಿ ಪಡೆಯಲಾಗತ್ತದೆ. ಬಳಿಕ ಆಪರೇಷನ್ ಥಿಯೇಟರ್‌ನಲ್ಲಿ ಅಂಗಾಂಗ ‌ತೆಗೆಯುವ ಪ್ರಕ್ರಿಯೆ ನಡೆಯಲಿದೆ.

    ಬ್ರೈನ್ ಡೆಡ್ ಆದ ವ್ಯಕ್ತಿಯಿಂದ ಹೃದಯ, ಶ್ವಾಸಕೋಶ, ಕಿಡ್ನಿ, ಕಣ್ಣು, ಪ್ಯಾಂಕ್ರಿಯಾಸ್ ತೆಗೆಯಬಹುದು. ಜೀವ ಸಾರ್ಥಕತೆಯ ಮತ್ತೊಂದು ತಂಡ ಅಂಗಾಂಗ ಪಡೆಯುವ ರೋಗಿಗಳ ಬಗ್ಗೆ ಮಾಹಿತಿ ಕಲೆ ಹಾಕಿ ತಯಾರಿರುವಂತೆ ಆಸ್ಪತ್ರೆಗಳಿಗೆ ಸೂಚನೆ ನೀಡಿರುತ್ತದೆ. ಅಂಗಾಂಗ ‌ತೆಗೆದ ಬಳಿಕ ಅದರಲ್ಲಿನ ಬ್ಲಡ್ ಸೆಲ್‌ಗಳನ್ನು ತೆಗೆದು ಲಿಕ್ವಿಡ್ ಹಾಕಿ ಐಸ್ ಬಾಕ್ಸ್‌ನಲ್ಲಿ ಪ್ಯಾಕ್ ಮಾಡಲಾಗತ್ತೆ. ಕಿಡ್ನಿಯನ್ನ ಜಯನಗರ ಟಿಟಿಕೆ ಬ್ಲಡ್ ಬ್ಯಾಂಕ್ ಗೆ ಕಳಿಸಿಕೊಡಲಾಗತ್ತೆ. ಅಲ್ಲಿ ಡಿಎನ್‌ಎ ಮ್ಯಾಚ್‌ ಆಗುವ ರೋಗಿಗಳನ್ನ ಪತ್ತೆ ಮಾಡಿ ನಂತರ ಕಿಡ್ನಿ ಕಸಿಗೆ ಕಳಿಸಿಕೊಡಲಾಗುತ್ತೆ ಎಂದು ಜೀವ ಸಾರ್ಥಕತೆ ತಂಡ ತಿಳಿಸಿದೆ.

    ಬೈಕ್ ಅಪಘಾತದಲ್ಲಿ ನಟ ಸಂಚಾರಿ ವಿಜಯ್​ ಸ್ಥಿತಿ ಗಂಭೀರ; ಅಪೋಲೋ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ

    ಸಂಚಾರಿ ವಿಜಯ್‌ರ ಸಂಪೂರ್ಣ ಚಿಕಿತ್ಸಾ ವೆಚ್ಚ ನಾನೇ ಭರಿಸುವೆ: ಆಸ್ಪತ್ರೆಗೆ ಕರೆ ಮಾಡಿದ ಡಿಸಿಎಂ ‌ಅಶ್ವತ್ಥನಾರಾಯಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts