

ಮುಂಬೈ: ಬ್ಲೂಫಿಲ್ಮ್ಂ ಕೇಸ್‌ನಲ್ಲಿ ಸಿಲುಕಿಕೊಂಡ ನಂತರ ಭಾರಿ ಸಮಸ್ಯೆಯ ಸುಳಿಯಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಮತ್ತು ರಾಜ್‌ಕುಂದ್ರಾ ಅವರ ವಿವಾಹ ವಾರ್ಷಿಕೋತ್ಸವ ಇಂದು. 2009 ರ ನವೆಂಬರ್ 22 ರಂದು ವಿವಾಹವಾಗಿದ್ದ ಈ ಜೋಡಿಯ 12ನೇ ಮದುವೆಯ ದಿನವಿದು.
ಈ ಸಂದರ್ಭದಲ್ಲಿ ಶಿಲ್ಪಾ ಶೆಟ್ಟಿ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಮದುವೆಯ ಫೋಟೋ ಶೇರ್ ಮಾಡಿಕೊಂಡು ಕೆಲವೊಂದು ಭಾವನಾತ್ಮಕವಾದ ಸಾಲುಗಳನ್ನು ಬರೆದುಕೊಂಡಿದ್ದಾರೆ.
"12 ವರ್ಷಗಳ ಹಿಂದೆ ನೀಡಿದ್ದ ಭರವಸೆಯನ್ನು ನಾವಿಬ್ಬರೂ ಈಡೇರಿಸಿದ್ದೇವೆ, ಅದನ್ನು ಈಡೇರಿಸುವುದಕ್ಕೆ ಮುಂದುವರಿದಿದ್ದೇವೆ. ಒಳ್ಳೆಯ ಸಮಯವನ್ನು ಹಂಚಿಕೊಳ್ಳುವುದು ಮತ್ತು ಕಷ್ಟದ ಸಮಯಗಳನ್ನು ಸಹಿಸಿಕೊಳ್ಳುವುದು ಪ್ರೀತಿಯಲ್ಲಿ ನಂಬಿಕೆಯನ್ನು ಹೆಚ್ಚಿಸುತ್ತದೆ. ಇಂಥ ಎಲ್ಲಾ ಸಮಯಗಳಲ್ಲಿಯೂ ದೇವರು ನಮಗೆ ದಿನದಿಂದ ದಿನಕ್ಕೆ ದಾರಿ ತೋರಿಸುತ್ತಾನೆ. 12 ವರ್ಷ ಹೇಗೆ ಕಳೆದವು ಎಂದು ಎಣಿಸಲು ಆಗುವುದಿಲ್ಲ. ವಾರ್ಷಿಕೋತ್ಸವದ ಶುಭಾಶಯಗಳು, ಕುಕೀ! ಎಂದು ಬರೆದಿದ್ದಾರೆ.
ಜತೆಗೆ ನಮ್ಮ ಅಮೂಲ್ಯ ಆಸ್ತಿಗಳು ನಮ್ಮ ಮಕ್ಕಳು. ತಮ್ಮ ಕಷ್ಟದ ಸಮಯದಲ್ಲಿ ತನಗೆ ಮತ್ತು ತನ್ನ ಪತಿಗೆ ಬೆಂಬಲ ನೀಡಿದವರಿಗೆ ಕೃತಜ್ಞತೆ ಎಂದಿದ್ದಾರೆ. ಬ್ಲೂ ಫಿಲ್ಮ್‌ಂ ಕೇಸ್‌ಗೆ ಸಂಬಂಧಿಸಿದಂತೆ ಕಳೆದ ಸೆಪ್ಟೆಂಬರ್ 20 ರಂದು ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಜಾಮೀನು ನೀಡಿರುವ ಹಿನ್ನೆಲೆಯಲ್ಲಿ ರಾಜ್‌ಕುಂದ್ರಾ ಪತ್ನಿಯ ಜತೆ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದ್ದಾರೆ.