

ಮುಂಬೈ: ಸಾಮಾಜಿಕ ಜಾಲತಾಣದಲ್ಲಿ ಸದಾ ಬಿಜಿಯಾಗಿರುವ ನಟಿಯರ ಪೈಕಿ ನಟಿ ಶಿಲ್ಪಾ ಶೆಟ್ಟಿ ಕೂಡ ಒಬ್ಬರು. ಪತಿ ರಾಜ್ ಕುಂದ್ರಾ ಪೋರ್ನ್ ವಿಡಿಯೋ ಕೇಸ್ನಲ್ಲಿ ಸಿಲುಕಿದ ಮೇಲೆ ಆ ಕೇಸ್ನಲ್ಲಿ ಶಿಲ್ಪಾ ಹೆಸರು ಕೂಡ ಥಳಕು ಹಾಕಿಕೊಂಡಿದ್ದು, ಅದರ ವಿಚಾರಣೆ ಇನ್ನೂ ಕೋರ್ಟ್ನಲ್ಲಿ ಇದೆ. ಆಗ ಸ್ವಲ್ಪ ಕಾಲ ಜಾಲತಾಣದಿಂದ ದೂರವಿದ್ದ ಶಿಲ್ಪಾ ಪುನಃ ಕಾಣಿಸಿಕೊಂಡಿದ್ದರು.
ಆದರೆ ಇದೀಗ ಮತ್ತೆ ಜಾಲತಾಣದಿಂದ ದೂರವಾಗ್ತಿದ್ದಾರಂತೆ ನಟಿ. ಸಾಮಾಜಿಕ ಜಾಲತಾಣದಿಂದ ಹೊರಗುಳಿಯುತ್ತೇನೆ ಅಂತಾ ಪೋಸ್ಟ್ ಮಾಡಿ, ಬ್ರೇಕ್ ತಗೆದುಕೊಂಡಿದ್ದಾರೆ ಇವರು. ಇನ್ಸ್ಟಾಗ್ರಾಂ ಖಾತೆಯಲ್ಲಿ ಯಾವುದೇ ಫೋಟೋ ಹಾಕಿಕೊಳ್ಳದೇ ಖಾಲಿ ಬಿಟ್ಟಿದ್ದಾರೆ ನಟಿ.
ಈ ಕುರಿತು ಇನ್ಸ್ಟಾಗ್ರಾಂ ಖಾತೆಯಲ್ಲಿ ಹೇಳಿಕೊಂಡಿದ್ದಾರೆ, ನಾನು ಹೊಸ ಅವತಾರವನ್ನು ಕಂಡುಕೊಳ್ಳುವವರೆಗೂ ಸಾಮಾಜಿಕ ಜಾಲತಾಣದಿಂದ ದೂರ ಇರುತ್ತೇನೆ ಎಂದು ಪೋಸ್ಟ್ ಮಾಡಿದ್ದಾರೆ. ಇವೆಲ್ಲಾ ತುಂಬಾ ಬೋರ್ ಬೋರ್ ಅನಿಸುತ್ತಿದೆ, ಎಲ್ಲವೂ ಏಕತಾನಗೆ ಎನಿಸುತ್ತಿದೆ. ಆದ್ದರಿಂದ ಜಾಲತಾಣದಿಂದ ದೂರ ಉಳಿಯುತ್ತಿದ್ದೇನೆ. ಹೊಸ ಅವತಾರದಲ್ಲಿ ಬರುತ್ತೇನೆ ಎಂದಿದ್ದಾರೆ. ಅಲ್ಲಿಯವರೆಗೆ ಎಲ್ಲರಿಗೂ ಬೈ ಬೈ ಎಂದಿದ್ದಾರೆ. ಶಿಲ್ಪಾ ಅಭಿಮಾನಿಗಳಿಗೆ ಇದು ನುಂಗಲಾಗದ ತುತ್ತಾಗಿದೆ.