Floccinaucinihilipilification: ನೆಟ್ಟಿಗರ ತಲೆ ಚಿಟ್ಟು ಹಿಡಿಸಿದ ಸಂಸದ ಶಶಿ ತರೂರ್‌ ಟ್ವೀಟ್‌!

shashi
Published on

ನವದೆಹಲಿ: ವಿವಾದಾತ್ಮಕ ಹೇಳಿಕೆ ಸೇರಿದಂತೆ ಒಂದಿಲ್ಲೊಂದು ವಿಷಯಗಳಿಗೆ ಸಂಬಂಧಿಸಿದಂತೆ ಸದಾ ಸುದ್ದಿಯಲ್ಲಿರುವ ಕಾಂಗ್ರೆಸ್ ಸಂಸದ ಶಶಿ ತರೂರ್‌ ಇದೀಗ ಮಾಡಿದ ಟ್ವೀಟ್‌ ಒಂದು ನೆಟ್ಟಿಗರ ತಲೆಯನ್ನು ಚಿಟ್ಟು ಹಿಡಿಸಿದೆ.

ಇಂಗ್ಲಿಷ್ ಭಾಷೆಯ ಮೇಲೆ ಸಾಕಷ್ಟು ಪಾಂಡಿತ್ಯ ಹೊಂದಿರುವ ಶಶಿ ತರೂರ್‌ ಹೊಸ ಹೊಸ ಶಬ್ದಗಳನ್ನು ಬರೆಯುವ ಮೂಲಕವೂ ಸುದ್ದಿಯಲ್ಲಿ ಇರುತ್ತಾರೆ. ಇವರು ಕೆಲವೊಮ್ಮೆ ಬರೆಯುವ ಶಬ್ದಗಳನ್ನು ಡಿಕ್ಷನರಿ ನೋಡಿಯೇ ತಿಳಿದುಕೊಳ್ಳಬೇಕಾಗುತ್ತದೆ. ಇದೀಗ ತಮ್ಮ ಟ್ವೀಟ್‌ ಒಂದರಲ್ಲಿ 29 ಅಕ್ಷರದ 'floccinaucinihilipilification' ಎಂಬ ಶಬ್ದವನ್ನು ಬರೆದಿದ್ದು ಚರ್ಚೆಯಲ್ಲಿದ್ದಾರೆ.

ತೆಲಂಗಾಣ ಪುರಸಭೆ ಆಡಳಿತ ಹಾಗೂ ನಗರಾಭಿವೃದ್ಧಿ ಸಚಿವ ಕೆ.ಟಿ. ರಾಮ ರಾವ್‌ ಅವರ ಜತೆಗಿನ ಟ್ವಿಟರ್‌ ಸಂವಾದಲ್ಲಿ ಶಶಿ ತರೂರ್‌ 'floccinaucinihilipilification' ಎಂಬ ಶಬ್ದವನ್ನು ಬಳಸಿದ್ದು, ನೆಟ್ಟಿಗರು ಅದರ ಅರ್ಥ ಹುಡುಕುವುದು ದೂರದ ಮಾತು, ಉಚ್ಚಾರಣೆ ಮಾಡಲು ಸಾಧ್ಯವಾಗದೇ ತಲೆ ಚಚ್ಚಿಕೊಳ್ಳುತ್ತಿದ್ದಾರೆ!

ಕರೊನಾಗೆ ಇದಾಗಲೇ ಕಂಡುಹಿಡಿರುವ ಔಷಧಗಳಿಗೂ ಬಹುಶಃ ಶಶಿ ಅವರೇ ಹೆಸರು ಸೂಚಿಸಿರಬೇಕು ಎಂದು ಕೆ.ಟಿ ರಾಮರಾವ್‌ ಹೇಳಿದ್ದಾರೆ. ಇಂಗ್ಲಿಷ್ ಡಿಕ್ಷನರಿಯಲ್ಲಿ ಕಂಡು ಬರುವ ತಾಂತ್ರಿಕೇತರ ಪದಗಳಲ್ಲೇ ಅತ್ಯಂತ ಉದ್ದವಾದ ಪದವಿದು ಎನ್ನಲಾಗಿದ್ದು, ಇದರ ಬಗ್ಗೆ ಸದ್ಯ ಚರ್ಚೆ ಜೋರಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net