More

    ನಿಮಗೂ ಮಕ್ಕಳಿದ್ದರೆ ಅವನ ದೇಹ ಬಯಸ್ತಿದ್ರಾ? ತನ್ನ ಹೆಂಡ್ತಿ, ಮಕ್ಕಳನ್ನೇ ಪಾಲಿಸದವ ನಿಮಗೇನು ಮಾಡಿಯಾನು?

    ನಿಮಗೂ ಮಕ್ಕಳಿದ್ದರೆ ಅವನ ದೇಹ ಬಯಸ್ತಿದ್ರಾ? ತನ್ನ ಹೆಂಡ್ತಿ, ಮಕ್ಕಳನ್ನೇ ಪಾಲಿಸದವ ನಿಮಗೇನು ಮಾಡಿಯಾನು?ಮೇಡಂ ನಾನು ವಿವಾಹಿತರನ್ನು ಪ್ರೀತಿಸಿಬಿಟ್ಟಿದ್ದೇನೆ. ಅವರಿಗೆ ಮಕ್ಕಳಿದ್ದು, ನಾನು ಮದುವೆಯಾಗಲೂ ಸಾಧ್ಯವಿಲ್ಲ. ಒಂದೊಂದು ಬಾರಿ ನಾವಿಬ್ಬರೂ ಸಾಯೋಣವೆಂದುಕೊಳ್ಳುತ್ತೇವೆ. ತಕ್ಷಣ ನನ್ನ ಹೆತ್ತವರ ಮುಖ ನೆನಪಿಗೆ ಬರುತ್ತದೆ. ಅವರಿಗೆ ತನ್ನ ಮಕ್ಕಳ ಮುಖ ನೆನಪಿಗೆ ಬಂದು, ಹೀಗೆ ಸಾಯಲೂ ಆಗದೇ, ಬದುಕಲೂ ಆಗದೇ ಅವರು ತೊಳಲಾಡುತ್ತಿದ್ದರೆ, ನಾನು ಅವರನ್ನು ಬಿಟ್ಟಿರಲಾಗದೇ ತೊಳಲಾಡುತ್ತಿದ್ದೇನೆ. ದಯವಿಟ್ಟು ಒಂದು ದಾರಿ ತೋರಿಸಿ ಮೇಡಂ.

    ಉತ್ತರ: ಮದುವೆಯೆನ್ನುವುದು ಬರೀ ಎರಡು ಮನುಷ್ಯರ ನಡುವಿನ ವ್ಯವಹಾರವಲ್ಲ, ಎರಡು ಕುಟುಂಬಗಳ ಜೋಡಣೆ. ಮದುವೆಯ ಜತೆಯಲ್ಲಿ ಅದರ ವಿಸ್ತರಣೆಯ, (ಮನೆ, ಮಕ್ಕಳು, ಆರ್ಥಿಕ ಸುಸ್ಥಿತಿ ಇತ್ಯಾದಿ) ಜವಾಬ್ದಾರಿಯೂ ಆ ದಂಪತಿಯದ್ದೇ ಆಗಿರುತ್ತದೆ. ದಾಂಪತ್ಯದ ಹೊಣೆಗಾರಿಕೆ ಬರೀ ಮಕ್ಕಳ ಹುಟ್ಟು ಮಾತ್ರವಲ್ಲ, ಅವರನ್ನು ಸತ್ಪ್ರಜೆಗಳಾಗಿ ರೂಪಿಸುವುದೂ ಆ ಗಂಡಹೆಂಡಿರ ಕರ್ತವ್ಯವೇ ಆಗಿರುತ್ತದೆ. ಗಂಡಾಗಲೀ ಹೆಣ್ಣಾಗಲೀ ಈ ಕರ್ತವ್ಯಗಳಿಂದ ವಿಮುಖರಾದರೆ ಅವರಿಗೆ ಸಮಾಜದಲ್ಲಿ ಗೌರವವಿರುವುದಿಲ್ಲ. ಗಂಡ ಹೆಂಡತಿಯಲ್ಲಿ ಯಾವುದೇ ಸಮಸ್ಯೆಯುಂಟಾದರೂ ಗಂಡನ ಹೆತ್ತವರು ಅಥವಾ ಹೆಂಡತಿಯ ಹೆತ್ತವರು ಸಹಾಯಕ್ಕಾಗಿ ಧಾವಿಸುತ್ತಾರೆ. ಇದು ನಮ್ಮ ಸಮಾಜದಲ್ಲಿ ಬಹಳ ಗಾಢವಾಗಿರುವುದರಿಂದ ಪ್ರಪಂಚದಲ್ಲಿಯೇ `ಭಾರತದ ಕುಟುಂಬ’ ಗಳು ಮಾದರಿಯೆನಿಸಿವೆ.

    ಈ ಎಲ್ಲ ವಿಷಯಗಳನ್ನೂ ಹಿನ್ನೆಲೆಯಲ್ಲಿಟ್ಟುಕೊಂಡು ನಿಮ್ಮ ಸಮಸ್ಯೆಯನ್ನು ವಿಶ್ಲೇಷಣೆ ಮಾಡಿ. ಆ ನಿಮ್ಮ ಗೆಳೆಯ ದಾಂಪತ್ಯದ ಜವಾಬ್ದಾರಿಯಿಂದ ಪಲಾಯನ ಮಾಡುತ್ತಿರುವುದು ಸರಿಯೇ? ಮಕ್ಕಳನ್ನು ಹೆತ್ತು ಲಾಲಿಸಿ ಪಾಲಿಸುತ್ತಿರುವ ತನ್ನ ಹೆಂಡತಿಗೆ ಆತ ಮೋಸ ಮಾಡುತ್ತಿಲ್ಲವೇ? ಒಂದು ವೇಳೆ ನಿಮಗೂ ಮದುವೆಯಾಗಿ ಮಕ್ಕಳೂ ಇದ್ದು ನೀವು ಮತ್ತೊಬ್ಬನೊಡನೆ ಅನುರಕ್ತೆಯಾಗುತ್ತಿದ್ದಿರಾ?
    . ಆತನ ಹೆಂಡತಿಯೂ `ನಾನು ಇನ್ನೊಬ್ಬನನ್ನು ಇಷ್ಟ ಪಡುತ್ತೇನೆ , ಮದುವೆಯಾಗುತ್ತೇನೆ’ ಎಂದರೆ ಈತ ಒಪ್ಪುತ್ತಾರೆಯೇ?

    ಪ್ರೌಢ ವಯಸ್ಕರಾಗಿದ್ದೀರಿ. ಮೂರು ಮಕ್ಕಳ ಅಪ್ಪ ಮದುವೆಗೆ ಯೋಗ್ಯನಲ್ಲ ಎನ್ನುವ ಸಾಮಾನ್ಯ ತಿಳಿವಳಿಕೆಯೂ ನಿಮಗೆ ಬೇಡವೇ? ಆ ಮಕ್ಕಳ ಅಪ್ಪನನ್ನು ಯಾಕೆ ಕಿತ್ತುಕೊಳ್ಳುತ್ತಿದ್ದೀರಿ? ಆ ಮಕ್ಕಳೇನು ನಿಮಗೆ ದ್ರೋಹ ಮಾಡಿವೆ? ಆ ಮಕ್ಕಳ ನಿಟ್ಟುಸಿರು ನಿಮ್ಮ ಬದುಕನ್ನು ಸುಡುವುದಿಲ್ಲವೇ? ಆತನ ಹೆಂಡತಿ ನಿಮಗೇನು ದ್ರೋಹ ಮಾಡಿದ್ದಾಳೆ? ಆಕೆಯ ಕಣ್ಣೀರು ನಿಮ್ಮ ಸುಖವನ್ನು ಕೊಚ್ಚಿಹಾಕುವುದಿಲ್ಲವೇ?

    ಜಗತ್ತು ಎಷ್ಟು ವಿಶಾಲವಾಗಿದೆ. ನಿಮಗೆ ಯೋಗ್ಯವರನೇ ಸಿಗುವುದಿಲ್ಲವೇ? ನಿಮ್ಮದು ನಿಜಕ್ಕೂ ಪ್ರೀತಿಯಲ್ಲ. ಆತನ ಲಂಪಟತನಕ್ಕೆ ನಿಮ್ಮ ಮುಗ್ಧ ಹೃದಯ ಪೆದ್ದುಪೆದ್ದಾಗಿ ಬಲಿಯಾಗುತ್ತಿದೆ ಅಷ್ಟೆ. ಈಗಲಾದರೂ ಎಚ್ಚೆತ್ತುಕೊಳ್ಳಿ. ಬರೀ ಭಾವಕೋಶವನ್ನು ಮಕ್ಕಳಂತೆ ಬಳಸಿ ಚಿಂತಿಸಬೇಡಿ. ನಿಮ್ಮಲ್ಲಿಯೇ ಬುದ್ಧಿಕೋಶವೂ ಇದೆ. ಅದನ್ನು ಬಳಸಿ ಇಂಥ ಉಪದ್ವಾಪಗಳಿಂದ ಮೊದಲು ಹೊರಬನ್ನಿ. ನಿಮ್ಮ ಹೆತ್ತವರು ತೋರಿಸಿದ ದಾರಿಯಲ್ಲಿ ತಲೆಯೆತ್ತಿ ಹೆಮ್ಮೆಯಿಂದ ನಡೆಯಿರಿ.

    ದೇಹ ಒಪ್ಪಿಸಿದ್ದೇನೆ, ಕಿಡ್ನಿ ಮಾರಿ 20 ಲಕ್ಷ ರೂ ಕೊಡುವೆ ಎಂದ್ರೂ ಕೇಳದೇ ಬೇರೆ ಮದ್ವೆಯಾಗ್ತಿದ್ದಾನೆ- ಏನು ಮಾಡಲಿ?

    ನಂಗೆ ಸಾಯಲು ಇಷ್ಟ ಇಲ್ಲ ಆಂಟಿ… ನನ್‌ ಕಷ್ಟ ಹೇಗೆ ಹೇಳಲೋ ಗೊತ್ತಾಗ್ತಿಲ್ಲ… ಪ್ಲೀಸ್‌ ಏನಾದ್ರೂ ಹೇಳಿ…

    ಹೆಣ್ಣುಮಕ್ಕಳೆಂದ್ರೆ ಏನೆಂದುಕೊಂಡಿದ್ದೀರಿ? ಅವಳಿಗೆ ಮಕ್ಕಳಾದ್ರೆ ನಿಮ್ಮನ್ನ ಅಪ್ಪ ಎನ್ನಬೇಕೊ? ಅವಳ ಪತಿಯನ್ನೊ?

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts