ನದಿ ಕಮರಿಗೆ ಉರುಳಿದ ಸೇನಾ ವಾಹನ: 7 ಯೋಧರ ದುರ್ಮರಣ- 19 ಮಂದಿಗೆ ಗಂಭೀರ ಗಾಯ

river
Published on

ಲೇಹ್​: ಲಡಾಖ್​ನ ಟರ್ಟೂಕ್​ ಸೆಕ್ಟೆರ್​ನಲ್ಲಿ ಸೇನಾ ವಾಹನವೊಂದು ಶಿಯೋಕ್​ ನದಿ ಕಮರಿಗೆ ಉರುಳಿ ಬಿದ್ದ ಪರಿಣಾಮ ಏಳು ಯೋಧರು ಮೃತಪಟ್ಟಿದ್ದಾರೆ. 19 ಜನರಿಗೆ ಗಂಭೀರವಾಗಿ ಗಾಯವಾಗಿದೆ.

ಸೇನಾ ಶಿಬಿರದಿಂದ ಪ್ರರತಾಪುರ್​ಕ್ಕೆ 26 ಯೋಧರನ್ನು ಕರೆದೊಯ್ಯುತ್ತಿದ್ದ ವಾಹನ, ಥೋಯಿಸ್​ ಬಳಿಯ ಗುಡ್ಡಗಾಡು ಪ್ರದೇಶದ ತಿರುವಿನಲ್ಲಿ ಸ್ಕಿಡ್​ ಆಗಿ ಈ ಅವಡ ಸಂಭವಿಸಿದೆ. ಗಾಯಾಳುಗಳನ್ನು ಪ್ರರತಾಪುರ್​ದ ಆಸ್ಪತ್ರೆಗೆ ಸಾಗಿಸುವ ವೇಳೆ 7 ಮಂದಿ ಮೃತಪಟ್ಟರು.

ನಂತರ ತೀವ್ರವಾಗಿ ಗಾಯಗೊಂಡಿದ್ದ 19 ಮಂದಿಯನ್ನು ಚಂಡೀಗಢದ ಕಮಾಂಡೊ ಆಸ್ಪತ್ರೆಗೆ ಸಿ-17 ಗ್ಲೋಬ್​ಮಾಸ್ಟರ್​ ವಿಮಾನದ ಮೂಲಕ ಸಾಗಿಸಲಾಯಿತು ಎಂದು ಸೇನಾ ಮೂಲಗಳು ಹೇಳಿವೆ.

ಘಟನೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಆಘಾತ ವ್ಯಕ್ತಪಡಿಸಿದ್ದಾರೆ. ಮೃತರ ಯೋಧರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನಜಿರ್, ಕಾಂಗ್ರೆಸ್​ ವಕ್ತಾರ ರಣದೀಪ್​ ಸುರ್ಜೆವಾಲಾ ಸಹಿತ ಹಲವು ಪ್ರಮುಖರು ಶೋಕ ವ್ಯಕ್ತಪಡಿಸಿದ್ದಾರೆ.

ನಮ್ಮ ವೀರ ಸೈನಿಕರು ಸಾವನ್ನಪ್ಪಿರುವ ವಿಚಾರ ಕೇಳಿ ಬಹಳ ದುಃಖವಾಯಿತು. ಮೃತರ ಕುಟುಂಬಗಳಿಗೆ ನನ್ನ ಸಂತಾಪಗಳು ಮತ್ತು ಗಾಯಗೊಂಡಿರುವ ಎಲ್ಲರೂ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಆರ್ ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ ಕೂ ಮಾಡಿದ್ದಾರೆ.

Koo App
Devastated to hear about the loss of lives of our brave soldiers. My condolences to the bereaved families and praying for the speedy recovery of all those who are injured.🙏-Virat Kohli (@virat.kohli)28 May 2022
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net