

ಥಹರೇವಾರಿ ವಿಡಿಯೋ ಮಾಡಿ ಅದನ್ನು ಜಾಲತಾಣದಲ್ಲಿ ಹರಿಬಿಡುವುದು ಎಂದು ಹಲವರಿಗೆ ಇನ್ನಿಲ್ಲದ ಖುಷಿ. ತಾವು ಜಾಲತಾಣದಲ್ಲಿ ಮಿಂಚಬೇಕು ಎಂದು ಅಂದುಕೊಳ್ಳುವವರು ಹೆಚ್ಚಿನ ಜನ. ಅದಕ್ಕಾಗಿಯೇ ಚಿತ್ರ ವಿಚಿತ್ರ ಎನಿಸುವ ರೀತಿಯಲ್ಲಿಯೂ ಕೆಲವೊಮ್ಮೆ ಕಾಣಿಸಿಕೊಳ್ಳುತ್ತಾರೆ.
ಅಂಥದ್ದೇ ವಿಡಿಯೋ ಒಂದು ಇದೀಗ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಅದೇನೆಂದರೆ ಮಹಿಳೆಯೊಬ್ಬರು ಲೇಸ್ ಚಿಪ್ಸ್ ಪ್ಯಾಕೇಟ್‌ನಿಂದ ಸೀರೆ ಮಾಡಿಕೊಂಡು ಅದನ್ನು ತೊಟ್ಟುಕೊಂಡು ವಿಡಿಯೋ ಮಾಡಿದ್ದಾರೆ. ಚಿಪ್ಸ್ ಎಂದರೆ ಬಹಳಷ್ಟು ಮಂದಿಗೆ ಅಚ್ಚುಮೆಚ್ಚು. ಈಗ ಅದೇ ಚಿಪ್ಸ್ ಪ್ಯಾಕೇಟ್‌ನಿಂದ ಸೀರೆ ತೊಟ್ಟ ನಾರಿ ಭಾರಿ ಹೊಗಳಿಗೆ ಗಳಿಸಿಕೊಳ್ಳುತ್ತಿದ್ದಾರೆ. ಇವರ ಹೊಸದೊಂದು ‘ಶೋಧನೆ’ಗೆ ಹಲವಾರು ರೀತಿಯ ಕಮೆಂಟ್‌ಗಳು ಬರುತ್ತಿವೆ.
ಲೇಸ್ ಕಂಪೆನಿ ಚಿಪ್ಸ್ ಪ್ಯಾಕೆಟ್‍ನ್ನು ಕೈಯಲ್ಲಿ ಹಿಡಿದುಕೊಂಡಿರುವ ಮಹಿಳೆ ಬೆಳ್ಳಿ ಬಣ್ಣದ ಸೀರೆಯನ್ನು ಧರಿಸಿದ್ದಾರೆ. ಇವರ ಕೈಯಲ್ಲಿ ಚಿಪ್ಸ್ ಪ್ಯಾಕೇಟ್ ಇದೆ. ಸೀರೆಗೆ ಮ್ಯಾಚಿಂಗ್ ಎನಿಸುವ ಬಳೆ, ಕಿವಿ ಒಲೆಯನ್ನು ಧರಿಸಿದ್ದು, ಸೀರೆಯ ತುಂಬ ಚಿಪ್ಸ್ ಪ್ಯಾಕೆಟ್ ಇರುವುದನ್ನು ವಿಡಿಯೋದಲ್ಲಿ ನೋಡಬಹುದು.
ಇಲ್ಲಿದೆ ನೋಡಿ ವಿಡಿಯೋ: