More

    ಮಹಾಭಾರತದ ಭೀಮ ಇನ್ನಿಲ್ಲ: ಹೃದಯಾಘಾತದಿಂದ ನಿಧನರಾದ ನಟ ಪ್ರವೀಣ್‌ ಕುಮಾರ್‌

    ನವದೆಹಲಿ: ದೂರದರ್ಶನ ವಾಹಿನಿಯಲ್ಲಿ 1988ರಲ್ಲಿ ಆರಂಭಗೊಂಡಿದ್ದ ಮಹಾಭಾರತ ಇಂದಿಗೂ ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದೆ. ಅದರಲ್ಲಿ ನಟಿಸಿದ್ದ ನಟರನ್ನೇ ನಿಜವಾದ ‘ದೇವರು’ ಎಂದುಕೊಂಡವರಿಗೂ ಕಮ್ಮಿಯೇನಿಲ್ಲ. ಅಂಥವರಲ್ಲಿ ಒಬ್ಬರಾಗಿದ್ದುದು ಭೀಮನ ಪಾತ್ರದ ಮೂಲಕ ಮನೋಜ್ಞ ಅಭಿನಯ ನೀಡಿದ್ದ ನಟ ಪ್ರವೀಣ್ ಕುಮಾರ್ ಸೋಬ್ತಿ.

    ದೀರ್ಘಕಾಲದ ಎದೆ ಸೋಂಕಿನ ಸಮಸ್ಯೆಯಿಂದ ಬಳಲುತ್ತಿದ್ದ ಪ್ರವೀಣ್‌ ಅವರು ಇಂದು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಅವರಿಗೆ 74 ವರ್ಷ ವಯಸ್ಸಾಗಿತ್ತು. ನವದೆಹಲಿಯ ಅಶೋಕ್ ವಿಹಾರ್ ನಿವಾಸದಲ್ಲಿ ಇವರು ಕೊನೆಯುಸಿರೆಳೆದಿದ್ದಾರೆ.

    ಇವರು ನಟ ಮಾತ್ರವಲ್ಲದೇ ಕ್ರೀಡಾಪಟುಗಳು. ಏಷ್ಯನ್ ಗೇಮ್ಸ್ ಚಿನ್ನದ ಪದಕ ಗೆದ್ದು ಖ್ಯಾತಿ ಪಡೆದಿದ್ದರು. ಸೋಮವಾರ ರಾತ್ರಿ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು. ವೈದ್ಯರನ್ನು ಮನೆಗೆ ಕರೆಸಲಾಗಿತ್ತು. ಆದರೆ ಅದೇ ವೇಳೆಗಾಗಲೇ ಅವರು ಮೃತಪಟ್ಟಿದ್ದರು.

    ಪ್ರವೀಣ್ ಅವರು, ಹ್ಯಾಮರ್ ಮತ್ತು ಡಿಸ್ಕಸ್ ಥ್ರೋನಲ್ಲಿ ವಿವಿಧ ಅಥ್ಲೆಟಿಕ್ ಈವೆಂಟ್‌ಗಳಲ್ಲಿ ದೇಶವನ್ನು ಪ್ರತಿನಿಧಿಸಿದ್ದರು. 1966 ಮತ್ತು 1970ರಲ್ಲಿ ಎರಡು ಚಿನ್ನದ ಪದಕಗಳನ್ನು ಒಳಗೊಂಡಂತೆ ಏಷ್ಯನ್ ಗೇಮ್ಸ್‌ನಲ್ಲಿ ನಾಲ್ಕು ಪದಕ ಗೆದ್ದಿದ್ದರು. ಅವರು 1966ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಅವರು ಹ್ಯಾಮರ್ ಥ್ರೋನಲ್ಲಿ ಬೆಳ್ಳಿ ಪದಕ ಗಳಿಸಿದ್ದರು. ಇವರಿಗೆ ಪತ್ನಿ, ಮಗಳು, ಇಬ್ಬರು ತಮ್ಮಂದಿರು ಮತ್ತು ಅಕ್ಕ ಇದ್ದಾರೆ.

    ಚುನಾವಣೆ ಹೊಸ್ತಿಲಲ್ಲೇ ಪಂಜಾಬ್‌ ಕಾಂಗ್ರೆಸ್‌ನಲ್ಲಿ ಅಲ್ಲೋಲ ಕಲ್ಲೋಲ: 10 ಕೋಟಿ ರೂ. ಡೀಲ್‌ ಒಪ್ಪಿಕೊಂಡ ಸಿಎಂ ಸಂಬಂಧಿ!

    ಬಿಜೆಪಿ ಶಾಸಕನಿಂದ ಮಗುವಾಗಿದೆ ಎಂದ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌: 14 ವರ್ಷದ ಹಿಂದೆ ನಡೆದದ್ದೇನು? 2 ಕೋಟಿ ರೂ.ಗೆ ನಡೆದಿತ್ತಾ ಬ್ಲ್ಯಾಕ್‌ಮೇಲ್‌?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts