More

    ಚುನಾವಣೆ ಹೊಸ್ತಿಲಲ್ಲೇ ಪಂಜಾಬ್‌ ಕಾಂಗ್ರೆಸ್‌ನಲ್ಲಿ ಅಲ್ಲೋಲ ಕಲ್ಲೋಲ: 10 ಕೋಟಿ ರೂ. ಡೀಲ್‌ ಒಪ್ಪಿಕೊಂಡ ಸಿಎಂ ಸಂಬಂಧಿ!

    ಚಂಡೀಗಢ: ಇದೇ 20ರಿಂದ ಪಂಜಾಬ್‌ ಚುನಾವಣೆ ನಡೆಯಲಿದ್ದು, ಈ ಸಮಯ ಎಲ್ಲಾ ಪಕ್ಷದವರೂ ತಮ್ಮ ಪಕ್ಷದ ಗೆಲುವಿಗೆ ಹಗಲಿರುಳು ದುಡಿಯುತ್ತಿದ್ದಾರೆ. ಆದರೆ ಇದೇ ಸಮಯದಲ್ಲಿ ಆಡಳಿತಾತೂಢ ಕಾಂಗ್ರೆಸ್‌ ಪಕ್ಷಕ್ಕೆ ಶಾಕ್‌ ಆಗುವಂಥ ಘಟನೆ ಪಂಜಾಬ್‌ನಲ್ಲಿ ನಡೆದಿದ್ದು, ಇದು ರಾಜಕೀಯದ ಮೇಲೂ ಭಾರಿ ಪ್ರಭಾವ ಬೀರುವ ಸಾಧ್ಯತೆ ಇದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

    ಅದೇನೆಂದರೆ ಅಧಿಕಾರಿಗಳ ವರ್ಗಾವಣೆ ಮತ್ತು ಮರಳು ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್‌ ಸಿಂಗ್‌ ಚನ್ನಿ ಅವರ ಸೋದರಳಿಯ ಭೂಪಿಂದರ್‌ ಸಿಂಗ್‌ ತಮ್ಮ ಒಪ್ಪನ್ನು ಒಪ್ಪಿಕೊಂಡಿದ್ದಾರೆ. ಗಣಿಗಾರಿಕೆ ಅಧಿಕಾರಿಗಳ ವರ್ಗಾವಣೆ ಮತ್ತು ನಿಯೋಜನೆ ಮತ್ತು ಮರಳು ಮಾಫಿಯಾದಿಂದ 10 ಕೋಟಿ ರೂಪಾಯಿ ಹಣ ಪಡೆದಿರುವುದಾಗಿ ಅವರು ಹೇಳಿದ್ದಾರೆ. ಈ ಕುರಿತು ಜಾರಿ ನಿರ್ದೇಶನಾಲಯ ಮಾಹಿತಿ ನೀಡಿದೆ. ಈ ಹಿನ್ನೆಲೆಯಲ್ಲಿ ಚನ್ನಿ ಅವರಿಗೆ ಈ ಸಂದರ್ಭದಲ್ಲಿ ಮುಜುಗರ ಉಂಟಾಗಿರುವುದು ಮಾತ್ರವಲ್ಲದೇ, ಚುನಾವಣೆಗೂ ಹೊಡೆತ ಬೀಳುವ ಸಾಧ್ಯತೆ ಇದೆ.

    ಇದಾಗಲೇ ಸಂಸದ ರಾಹುಲ್‌ ಗಾಂಧಿಯವರು ಮುಖ್ಯಮಂತ್ರಿ ಚರಣ್‌ಜಿತ್‌ ಸಿಂಗ್‌ ಚನ್ನಿ ಅವರೇ ತಮ್ಮ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದ್ದಾರೆ. ಇದರ ಬೆನ್ನಲ್ಲೇ 10 ಕೋಟಿ ರೂಪಾಯಿ ಡೀಲ್‌ ಪ್ರಕರಣ ಬೆಳಕಿಗೆ ಬಂದಿದೆ.
    ಪಂಜಾಬ್‌ನಲ್ಲಿ ಮರಳು ಗಣಿಗಾರಿಕೆ ನಡೆಸಲಾಗುತ್ತಿದೆ ಎಂದು ಆರೋಪಿಸಿ ಹಣ ವರ್ಗಾವಣೆ ಪ್ರಕರಣವನ್ನು ದಾಖಲಿಸಿಕೊಂಡಿದ್ದ ಜಾರಿ ನಿರ್ದೇಶನಾಲಯ ಜಲಂಧರ್​ನಲ್ಲಿ ದಾಳಿ ನಡೆಸಿ, ಫೆಬ್ರವರಿ 3ರಂದು ಭೂಪಿಂದರ್ ಸಿಂಗ್ ಅವರನ್ನು ಬಂಧಿಸಿತ್ತು. ಇದು ಬಹುದೊಡ್ಡ ಹಗರಣ ಎಂದೇ ವಿಶ್ಲೇಷಿಸಲಾಗುತ್ತಿದ್ದು, ಇದರಲ್ಲಿ ಇನ್ನಾರು ಶಾಮೀಲಾಗಿದ್ದಾರೆ ಎಂಬ ಅಂಶವನ್ನು ಅಧಿಕಾರಿಗಳು ಹೊರತೆಗೆಯಲು ಪ್ರಯತ್ನಿಸುತ್ತಿದ್ದಾರೆ. ಇದು ಕೂಡ ಕಾಂಗ್ರೆಸ್‌ ವಲಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ.

    ಪಂಜಾಬ್‌ ಸಿಎಂ ಅಭ್ಯರ್ಥಿ ಘೋಷಿಸಿದ ರಾಹುಲ್‌ ಗಾಂಧಿ: ಖುರ್ಚಿಯ ಮೇಲೆ ಕಣ್ಣಿಟ್ಟಿದ್ದ ಸಿಧು ಕೆಂಡಾಮಂಡಲ

    FACTCHECK: ಲತಾ ಪಾರ್ಥಿವ ಶರೀರದ ಮೇಲೆ ಶಾರುಖ್ ಉಗುಳಿದರಾ? ಸತ್ಯಾಂಶ ಏನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts