More

    ಪಂಜಾಬ್‌ ಸಿಎಂ ಅಭ್ಯರ್ಥಿ ಘೋಷಿಸಿದ ರಾಹುಲ್‌ ಗಾಂಧಿ: ಖುರ್ಚಿಯ ಮೇಲೆ ಕಣ್ಣಿಟ್ಟಿದ್ದ ಸಿಧು ಕೆಂಡಾಮಂಡಲ

    ಲುಧಿಯಾನ: ಪಂಜಾಬ್ ವಿಧಾನಸಭಾ ಚುನಾವಣೆ ಇನ್ನೇನು ಹತ್ತಿರವಾಗುತ್ತಿದೆ. ಇದೇ 20ರಂದು ಚುನಾವಣೆ ನಡೆಯಲಿದ್ದು, ಈ ಹಂತದಲ್ಲಿ ಕಾಂಗ್ರೆಸ್‌ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಣೆ ಮಾಡಿದೆ. ಲುಧಿಯಾನದಲ್ಲಿ ನಡೆದ ಸಮಾವೇಶದಲ್ಲಿ ರಾಹುಲ್ ಗಾಂಧಿ ಈ ಘೋಷಣೆ ಮಾಡಿದ್ದು, ಪಂಜಾಬ್ ಮುಖ್ಯಮಂತ್ರಿ ಚರಣ್​​ಜಿತ್ ಸಿಂಗ್ ಚನ್ನಿ ಅವರೇ ಕಾಂಗ್ರೆಸ್‌ನ ಮುಖ್ಯಮಂತ್ರಿ ಅಭ್ಯರ್ಥಿ ಎಂದಿದ್ದಾರೆ.

    ಸಿಎಂ ಖುರ್ಚಿಯ ಮೇಲೆ ಭಾರಿ ಕಣ್ಣು ಇಟ್ಟಿದ್ದ ಪಂಜಾಬ್​ ಕಾಂಗ್ರೆಸ್​ ಸಮಿತಿ ಅಧ್ಯಕ್ಷ ನವಜೋತ್ ಸಿಂಗ್ ಸಿಧುಗೆ ಈ ಘೋಷಣೆಯಿಂದ ಭಾರಿ ಶಾಕ್‌ ಆಗಿದೆ. ತಾವೇ ಮುಂದಿನ ಮುಖ್ಯಮಂತ್ರಿಯಾಗಬೇಕು ಎಂದು ಕನಸು ಕಂಡು ಹಲವಾರು ರೀತಿಯಲ್ಲಿ ಪ್ರಯತ್ನಿಸಿದ್ದ ಸಿಧುಗೆ ಇದು ನುಂಗಲಾಗದ ತುತ್ತಾಗಿದ್ದು, ತೀವ್ರ ಆಕ್ರೋಶ ಹೊರಹಾಕುತ್ತಿದ್ದಾರೆ. ಪಕ್ಷವು ಪ್ರಾಮಾಣಿಕ ಮತ್ತು ಕ್ಲೀನ್ ಟ್ರ್ಯಾಕ್ ರೆಕಾರ್ಡ್ ಅನ್ನು ಆಯ್ಕೆ ಮಾಡಬೇಕು, ಯಾವುದೇ ಮುಖ್ಯಮಂತ್ರಿ ಆಯ್ಕೆಗೆ ಕನಿಷ್ಠ 60 ಶಾಸಕರ ಬೆಂಬಲ ಇರಬೇಕು ಎಂದು ಇತ್ತೀಚೆಗೆ ಅವರು ಹೇಳಿದ್ದರು.

    ಜನವರಿ 27 ರಂದು ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ್ದ ರಾಹುಲ್ ಸಾಮಾನ್ಯವಾಗಿ, ನಾವು ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸುವುದಿಲ್ಲ. ಆದರೆ ಕಾಂಗ್ರೆಸ್ ಕಾರ್ಯಕರ್ತರು ಬಯಸಿದರೆ, ನಾವು ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತೇವೆ. ನಾವು ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಸಮಾಲೋಚಿಸುತ್ತೇವೆ, ಅವರು ನಿರ್ಧರಿಸುತ್ತಾರೆ ಎಂದು ಹೇಳಿದ್ದರು.

    ಇದೀಗ ಇವರನ್ನೇ ಮುಖ್ಯಮಂತ್ರಿ ಅಭ್ಯರ್ಥಿಯಾಗುವ ನಿರ್ಧಾರದ ಕುರಿತು ಸ್ಪಷ್ಟನೆ ನೀಡಿರುವ ರಾಹುಲ್ ಗಾಂಧಿ, ‘ಇದು ನನ್ನೊಬ್ಬನ ನಿರ್ಧಾರವಲ್ಲ. ಪಂಜಾಬ್‌ನ ಜನರು, ಯುವಕರು, ಕಾರ್ಯಕಾರಿ ಸಮಿತಿಯ ಸದಸ್ಯರಿಗೆ ಈ ಬಗ್ಗೆ ಪ್ರಶ್ನಿಸಿ ಅವರಿಂದಲೂ ನಿರ್ಧಾರ ಕೇಳಿದ್ದೇನೆ. ಬಡವರನ್ನು ಅರ್ಥಮಾಡಿಕೊಳ್ಳಬಲ್ಲ ವ್ಯಕ್ತಿಯೊಬ್ಬರು ನಮಗೆ ಬೇಕು ಎಂದು ಅವರು ಹೇಳಿದ್ದರು. ಚನ್ನಿಯವರು ಬಡ ಕುಟುಂಬದವರು. ಆದ್ದರಿಂದ ಅವರೇ ಸೂಕ್ತ ವ್ಯಕ್ತಿ ಎಂದು ನಿರ್ಧರಿಸಲಾಗಿದೆ’ ಎಂದರು. ಚುನಾವಣೆಯಲ್ಲಿ ಎರಡು ಕ್ಷೇತ್ರಗಳಲ್ಲಿ ಚರಣ್​ಜಿತ್​ ಸಿಂಗ್ ಚನ್ನಿ ಸ್ಪರ್ಧಿಸಲಿದ್ದಾರೆ.

    ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಹೆಸರು ಘೋಷಣೆ ಆದ ನಂತರ ಎಎನ್ಐ ಸುದ್ದಿಸಂಸ್ಥೆ ಜತೆ ಮಾತನಾಡಿದ ಚನ್ನಿ ‘ಇದು ನಾನು ಒಬ್ಬಂಟಿಯಾಗಿ ಹೋರಾಡಲು ಸಾಧ್ಯವಾಗದ ದೊಡ್ಡ ಯುದ್ಧ. ನನ್ನಲ್ಲಿ ಹಣವಿಲ್ಲ, ಹೋರಾಡಲು ಧೈರ್ಯವಿಲ್ಲ. ಪಂಜಾಬ್‌ನ ಜನರು ಈ ಯುದ್ಧದಲ್ಲಿ ಹೋರಾಡುತ್ತಾರೆ, ಎಲ್ಲರಿಗೂ ಧನ್ಯವಾದಗಳು’ ಎಂದು ಹೇಳಿದರು.

    ಪೋಸ್ಟ್‌ಮಾರ್ಟಮ್‌ಗೆ ಕೈದಿಯ ದೇಹ ಸೀಳಲು ಸಿದ್ಧತೆ ಮಾಡುತ್ತಿದ್ದಂತೆಯೇ ವೈದ್ಯರಿಗೆ ಕೇಳಿಬಂತು ಗೊರಕೆ ಶಬ್ದ!

    ‌ಎಲ್ಲಿದ್ದೀರಾ ಕಾಮನ್‌ಮ್ಯಾನ್‌ ಸಿಎಂ ಸಾರ್‌.. ನಿಮ್ಮ ಪಕ್ಷದ ಶಾಸಕನಿಂದ ನನಗೆ ಮಗುವಾಗಿದೆ, ನ್ಯಾಯ ಕೊಡ್ಸಿ….

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts