More

    ಪಂಜಾಬ್‌ನಲ್ಲಿ ರಾಹುಲ್‌ ಗಾಂಧಿಗೂ ಭದ್ರತಾ ಲೋಪ! ಸಿಎಂ ಕೂಡ ಪ್ರಯಾಣಿಸುತ್ತಿದ್ದ ಕಾರಿನತ್ತ ಬಾವುಟ ಎಸೆದ ವ್ಯಕ್ತಿ…

    ಲೂಧಿಯಾನ (ಪಂಜಾಬ್): ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭದ್ರತೆ ಕಲ್ಪಿಸುವಲ್ಲಿ ವಿಫಲವಾಗಿ ಭಾರಿ ಟೀಕೆಗೆ ಗುರಿಯಾಗಿದ್ದ ಪಂಜಾಬ್‌ನಲ್ಲಿ ಈಗ ಸಂಸದ ರಾಹುಲ್‌ ಗಾಂಧಿ ಮಾತ್ರವಲ್ಲದೇ ಖುದ್ದು ಪಂಜಾಬ್‌ ಮುಖ್ಯಮಂತ್ರಿ ಚರಣ್​​​​ಜಿತ್​​ ಚನ್ನಿಗೂ ಭದ್ರತಾ ಲೋಪ ಉಂಟಾಗಿದೆ.

    ಮುಂದಿನ ಪಂಜಾಬ್ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್‌ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಲು ರಾಹುಲ್ ಲೂಧಿಯಾನಕ್ಕೆ ತೆರಳುವ ಸಮಯದಲ್ಲಿ ಕಾರಿನತ್ತ ಯುವಕನೊಬ್ಬ ಬಾವುಟ ಎಸೆದಿದ್ದು, ಕೆಲ ಕಾಲ ಆತಂಕದ ಸ್ಥಿತಿ ನಿರ್ಮಾಣವಾಯಿತು. ಈ ಕಾರಿನಲ್ಲಿ ರಾಹುಲ್‌ ಗಾಂಧಿ ಜತೆಗೆ ಪಂಜಾಬ್ ಮುಖ್ಯಮಂತ್ರಿ ಚರಣ್​​​​ಜಿತ್​​ ಚನ್ನಿ ಮತ್ತು ಪಿಸಿಸಿ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಅವರು ಹಿಂದೆ ಕುಳಿತಿದ್ದರು. ಕಾಂಗ್ರೆಸ್ ಹಿರಿಯ ನಾಯಕ ಸುನೀಲ್ ಜಾಖಡ್​ ಕಾರು ಚಾಲನೆ ಮಾಡುತ್ತಿದ್ದರು.

    ಹಲ್ವಾರದಿಂದ ಲೂಧಿಯಾನದ ಹಯಾತ್ ರೀಜೆನ್ಸಿಗೆ ತೆರಳುವ ವೇಳೆ ಈ ಘಟನೆ ನಡೆದಿದೆ. ಕಾರು ಹರ್ಷಿಲಾ ರೆಸಾರ್ಟ್ ಬಳಿ ಬಂದಾಗ ರಾಹುಲ್ ಗಾಂಧಿ ಅವರು ಕಾರಿನ ಕಿಟಿಕಿಯ ಬಾಗಿಲು ತೆರೆದು ಶುಭಾಶಯಗಳನ್ನು ಸ್ವೀಕರಿಸುತ್ತಿದ್ದರು. ಆ ವೇಳೆ ಕಾರಿನತ್ತ ಯುವಕನೊಬ್ಬ ಬಾವುಟ ಎಸೆದಿದ್ದಾನೆ. ಕೂಡಲೇ ರಾಹುಲ್‌ ಗಾಂಧಿ ಕಾರಿನ ಗಾಜುಗಳನ್ನು ಮುಚ್ಚಿದ್ದಾರೆ.

    ಧ್ವಜ ಎಸೆದ ಯುವಕ ಜಮ್ಮು ಕಾಶ್ಮೀರದ ನಿವಾಸಿ ಎಂದು ಹೇಳಲಾಗಿದೆ. ಈತ ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಸಂಘದ (ಎನ್‌ಎಸ್‌ಯುಐ) ಕಾರ್ಯಕರ್ತನಾಗಿರುವುದಾಗಿ ತಿಳಿದುಬಂದಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ.

    ಉಲ್ಟಾ ಹೊಡೆದ ಪಂಜಾಬ್‌ ಸಿಎಂ- ಪ್ರಧಾನಿ ಮೋದಿ ರಕ್ಷಣೆಗೆ ನನ್ನ ಜೀವವನ್ನೇ ಬಲಿಕೊಡುತ್ತಿದ್ದೆ, ಆದ್ರೆ… ಎಂದ ಚನ್ನಿ

    ದುಬೈನಲ್ಲಿ ರಾತ್ರೋರಾತ್ರಿ 44 ಕೋಟಿ ರೂಪಾಯಿ ಒಡತಿಯಾದ ಕೇರಳದ ಯುವತಿ!

    FACTCHECK: ಲತಾ ಪಾರ್ಥಿವ ಶರೀರದ ಮೇಲೆ ಶಾರುಖ್ ಉಗುಳಿದರಾ? ಸತ್ಯಾಂಶ ಏನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts