More

    ವಿಶ್ವವೇ ದೇಗುಲ, ವೃಕ್ಷವೇ ದೇವರೆಂಬ ಅರಿವಿರಲಿ

    ಚಿಕ್ಕಮಗಳೂರು: ಶ್ರೀಗಂಧ ಸಸಿಗಳನ್ನು ನೆಡುವ ಮೂಲಕ ಜಗತ್ತನ್ನು ಹಸಿರು ಕವಚದಿಂದ ತುಂಬಿಸಿದರೆ ಮಾತ್ರ ಮುಂದಿನ ಪೀಳಿಗೆಗೆ ಆರೋಗ್ಯಭರಿತ ಸಂಪನ್ಮೂಲ ಉಳಿಸಲು ಸಾಧ್ಯ ಎಂದು ಜಿಲ್ಲಾ ಶ್ರೀಗಂಧ ಮತ್ತು ವನಕೃಷಿ ಬೆಳೆಗಾರರ ಸಂಘದ ಅಧ್ಯಕ್ಷ ಡಾ. ಕೆ.ಸುಂದರ ಗೌಡ ಹೇಳಿದರು.

    ಜಿಲ್ಲಾಧಿಕಾರಿ ಕಚೇರಿ ಗಾಂಧಿ ಪ್ರತಿಮೆ ಆವರಣದಲ್ಲಿ ಶ್ರೀಗಂಧ ಸಸಿಗಳನ್ನು ನೆಟ್ಟು ಮಾತನಾಡಿದ ಅವರು, ಉತ್ತಮ ಪರಿಸರಕ್ಕೆ ಶ್ರೀಗಂಧ ಅತ್ಯಂತ ಸಹಕಾರಿ. ಹೀಗಾಗಿ ನಾಡಿನ ರೈತರು ಹೆಚ್ಚಾಗಿ ಶ್ರೀಗಂಧವನ್ನು ಬೆಳೆಯಲು ಮುಂದಾಗುವುದು ಒಳಿತು ಎಂದರು.
    ಶ್ರೀಗಂಧ ಬೆಳೆ ಭದ್ರತೆ ದೃಷ್ಟಿಯಿಂದ ಡಿಸಿ ಕಚೇರಿಯಲ್ಲಿ ಕಳೆದೆರಡು ವರ್ಷಗಳ ಹಿಂದೆ ಸಸಿಗಳನ್ನು ನೆಡಲಾಗಿತ್ತು. ಇದೀಗ ಮತ್ತೊಮ್ಮೆ ತಲಾ ನಾಲ್ಕು ಸಸಿಗಳನ್ನು ನೆಟ್ಟು ಪೋಷಿಸುವ ಜತೆಗೆ ಸಂರಕ್ಷಣೆಗೆ ಮುಂದಾಗಿದ್ದೇವೆ. ವಿಶ್ವವೇ ದೇಗುಲ, ವೃಕ್ಷವೇ ದೇವರು ಎಂಬ ಭಾವನೆ ಪ್ರತಿಯೊಬ್ಬರಲ್ಲೂ ಮೂಡಬೇಕು ಎಂದು ಸಲಹೆ ನೀಡಿದರು.
    ಪ್ರಪಂಚದಲ್ಲಿ ಅತಿಯಾದ ತಾಪಮಾನ ಏರಿಕೆಗೆ ಮಾನವನ ಕೊಡುಗೆ ಬಹಳಷ್ಟಿದೆ. ಸ್ವಾರ್ಥಕ್ಕಾಗಿ ಪರಿಸರವನ್ನು ಬೇಕಾಬಿಟ್ಟಿ ಬಳಸಿಕೊಳ್ಳಲಾಗುತ್ತಿದೆ. ಜಲ, ಭೂಮಿ, ಗಾಳಿಯನ್ನು ಮಲಿನಗೊಳಿಸಿ ಮಾನವ ಸಂಕುಲಕ್ಕೆ ಸಂಕಷ್ಟ ತಂದೊಡ್ಡಲಾಗಿದೆ. ಪ್ರಜ್ಞಾವಂತ ನಾಗರಿಕರು ಈ ಬಗ್ಗೆ ಅರಿವು ಮೂಡಿಸಿಕೊಳ್ಳಬೇಕು. ಪರಿಸರಕ್ಕೆ ಪೂರಕವಾಗಿ ಕೆಲಸ ಮಾಡದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಎಚ್ಚರಿಸಿದರು.
    ಶ್ರೀಗಂಧ ಮತ್ತು ವನಕೃಷಿ ಬೆಳೆಗಾರರ ಸಂಘದ ಅಧ್ಯಕ್ಷ ಅಮರನಾರಾಯಣ್ ಮಾತನಾಡಿ, ಭೂಮಿ ತಾಯಿ ಮಡಿಲಲ್ಲಿ ವೃಕ್ಷಗಳೇ ದೇವರು. ವೃಕ್ಷಗಳ ರಕ್ಷಣೆಯೇ ನಮ್ಮ ಬದುಕು. ನಾಗರಿಕ ಸಮಾಜವು ಪರಿಸರದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಫಲವತ್ತಾದ ಭೂಮಿಗಾಗಿ ಪೂರಕ ಚಟುವಟಿಕೆ ನಡೆಸಿದರೆ ಸಮೃದ್ಧ ನಾಡು ನಮ್ಮದಾಗಲಿದೆ ಎಂದು ಹೇಳಿದರು.
    ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್, ಶ್ರೀಗಂಧ ಮತ್ತು ವನಕೃಷಿ ಬೆಳೆಗಾರರ ಸಂಘದ ಕಾರ್ಯದರ್ಶಿ ಶರಣಪ್ಪ, ಜಿಲ್ಲಾ ಉಪಾಧ್ಯಕ್ಷ ಶ್ರೀಗಂಧದ ಕೃಷ್ಣೇಗೌಡ, ಮುಖಂಡ ವಿಶುಕುಮಾರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts