More

    ‘ಯುವರಾಜ’ನಿಗಾಗಿ ಮುಖ್ಯಮಂತ್ರಿಯ ಹೆಲಿಕಾಪ್ಟರನ್ನೇ ತಡೆ ಹಿಡಿದಿದ್ರು- ವಿಷಯ ಕೇಳಿದ್ರೆ ಶಾಕ್‌ ಆಗ್ತೀರಾ ಎಂದ ಪ್ರಧಾನಿ

    ಜಲಂಧರ್‌ (ಪಂಜಾಬ್‌): ಪಂಜಾಬ್‌ ಚುನಾವಣೆಗೆ ದಿನಗಳು ಸಮೀಪಿಸುತ್ತಿರುವ ಬೆನ್ನಲ್ಲೇ ಎಲ್ಲಾ ರಾಜಕೀಯ ಪಕ್ಷಗಳ ಆರೋಪ, ಪ್ರತ್ಯಾರೋಪಗಳು ನಡೆಯುತ್ತಿವೆ. ಇದೀಗ ಪ್ರಧಾನಿ ನರೇಂದ್ರ ಮೋದಿ ಪಂಜಾಬ್​​ನ ಜಲಂಧರ್​​ನಲ್ಲಿ ಚುನಾವಣಾ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡುತ್ತಾ 2014ರ ಘಟನೆಯನ್ನು ನೆನೆದು ಕಾಂಗ್ರೆಸ್‌ ವಿರುದ್ಧ ಹರಿಹಾಯ್ದಿದ್ದಾರೆ. ಕಾಂಗ್ರೆಸ್ಸಿಗರು ತಮ್ಮ ಅಧಿಕಾರವನ್ನು ಹೇಗೆ ದುರುಪಯೋಗ ಪಡಿಸಿಕೊಳ್ಳುತ್ತಾರೆ ಎಂದು ಅವರು ವಿವರಿಸಿದರು.

    2014ರಲ್ಲಿ ಮೋದಿಯವರು ಗುಜರಾತಿನ ಮುಖ್ಯಮಂತ್ರಿಯಾಗಿದ್ದರು. ಆ ಸಂದರ್ಭದಲ್ಲಿ ರಾಹುಲ್‌ ಗಾಂಧಿ ಸಂಸದರಾಗಿದ್ದರು. ಮುಖ್ಯಮಂತ್ರಿಯೊಬ್ಬರ ಹೆಲಿಕಾಪ್ಟರ್‌ ಅನ್ನು ಸಂಸದನೊಬ್ಬ ಹೇಗೆ ತಡೆಹಿಡಿದರು, ಹೇಗೆ ತಮ್ಮ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡರು ಎಂದು ಮೋದಿ ಹೇಳಿದರು.

    ‘2014ರಲ್ಲಿ ನಾನು ಗುಜರಾತ್ ಸಿಎಂ ಆಗಿದ್ದೆ, ಜೊತೆಗೆ ಬಿಜೆಪಿಯ ಪ್ರಧಾನಿ ಅಭ್ಯರ್ಥಿಯೂ ಆಘಿದ್ದೆ. ಚುನಾವಣೆ ಪ್ರಚಾರ ನಡೆಸಲು ಪಠಾಣ್​ಕೋಟ್​​ಗೆ ಹೋಗಬೇಕಾಗಿತ್ತು. ಅಲ್ಲಿಂದ ಹಿಮಾಚಲಕ್ಕೂ ಹೆಲಿಕಾಪ್ಟರ್​​ನಲ್ಲಿ ಪ್ರಯಾಣ ಮಾಡಬೇಕಿತ್ತು. ಈ ವೇಳೆ ನಡೆದ ಘಟನೆ ಹೇಳಿದರೆ ನೀವು ಶಾಕ್​ ಆಗುತ್ತೀರಿ. ನಮ್ಮ ಯುವರಾಜ (ರಾಹುಲ್ ಗಾಂಧಿ) ಆಗ ಸಂಸದರಾಗಿದ್ದರಷ್ಟೇ. ಅವರು ಅಮೃತಸರದಲ್ಲಿ ಒಂದು ಕಾರ್ಯಕ್ರಮದಲ್ಲಿ ಭಾಗಿಯಾಗಬೇಕಿತ್ತು. ಆದ್ದರಿಂದ ಮುಖ್ಯಮಂತ್ರಿಯಾಗಿದ್ದ ನನಗೆ ಹಾರಲು ಬಿಡದೆ ಹೆಲಿಕಾಪ್ಟರ್​ ತಡೆಹಿಡಿದಿದ್ದರು. ಉದ್ದೇಶಪೂರ್ವಕವಾಗಿ ಒಂದು ಗಂಟೆ ವಿಳಂಬ ಮಾಡಿದರು. ಇದರಿಂದ ನಾನು ಪಠಾಣ್​ಕೋಟ್ ತಲುಪಿದೆ. ಇದು ಕಾಂಗ್ರೆಸ್ಸಿಗರ ಅಧಿಕಾರದ ದುರುಪಯೋಗ ತೋರಿಸುತ್ತದೆ’ ಎಂದು ಹೇಳಿದರು.

    ರಾಜಕೀಯ ಅಧಿಕಾರವನ್ನು ಒಂದು ಕುಟುಂಬದವರು ಬಳಸಿಕೊಂಡಿದ್ದಾರೆ. ಇವರ ಕಾರಣದಿಂದಾಗಿ ಹಿಮಾಚಲದಲ್ಲಿನ ನನ್ನ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಬೇಕಾಯಿತು. ಇದು ಒಂದು ಉದಾಹರಣೆ ಅಷ್ಟೇ. ಇಂಥ ಅನೇಕ ಉದಾಹರಣೆಗಳು ಇವೆ ಎಂದರು.

    ಕಳ್ಳರಾಗಿದ್ರೆ ಕಾಂಗ್ರೆಸ್ ಇಷ್ಟವಾಗತ್ತೆ, ರಾಷ್ಟ್ರೀಯವಾದಿಗಳು ಬಿಜೆಪಿಗೆ ಮತ ಹಾಕ್ತಾರೆ- ವಿವಾದದಲ್ಲಿ ನಾಲ್ಕನೇ ಸೂತ್ರ!

    ಹಿಜಾಬ್‌ ಪರ ವಾದಿಸುತ್ತಿರುವ ವಕೀಲರ ಪರ ನಿಂತ ಶ್ರೀರಾಮಕೃಷ್ಣ ಆಶ್ರಮದ ಸ್ವಾಮೀಜಿ- ಅವರು ಹೇಳಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts