More

    ಬಿಜೆಪಿ ಶಾಸಕನಿಂದ ಮಗುವಾಗಿದೆ ಎಂದ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌: 14 ವರ್ಷದ ಹಿಂದೆ ನಡೆದದ್ದೇನು? 2 ಕೋಟಿ ರೂ.ಗೆ ನಡೆದಿತ್ತಾ ಬ್ಲ್ಯಾಕ್‌ಮೇಲ್‌?

    ಬೆಂಗಳೂರು: ‘ನಿಮ್ಮ ಪಕ್ಷದ ಶಾಸಕರಿಂದ ಮೋಸ ಹೋದ ಮಹಿಳೆ ನಾನು. ನಮಗೆ ಮತ್ತು ನಿಮ್ಮ ಶಾಸಕರಿಗೆ ಹುಟ್ಟಿರುವ ಮಗುವಿಗೆ ನ್ಯಾಯಕ್ಕಾಗಿ ಹೋರಾಡಲು ಮುಂದೆ ಬಂದಿದ್ದೇನೆ. ನಿಮ್ಮ ಭೇಟಿ ಮಾಡಲು ಸಾಕಷ್ಟು ಬಾರಿ ಬಂದಿದ್ದು, ಅವಕಾಶ ಸಿಕ್ಕಿಲ್ಲ. ನಾನು ಮುಂದೆ ತೆಗೆದುಕೊಳ್ಳುವ ಪ್ರತಿ ಹೆಜ್ಜೆಗೂ ನಿಮ್ಮ ಸಹಕಾರ ಇರಲಿದೆ ಎಂದು ನಂಬಿದ್ದೇನೆ‘ ಎಂದು ಮಹಿಳೆಯೊಬ್ಬರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಫೇಸ್​ಬುಕ್​ ಪೇಜ್​ನಲ್ಲಿ ಬರೆದಿರುವ ಪ್ರಕರಣಕ್ಕೆ ಇದೀಗ ಭಾರಿ ಟ್ವಿಸ್ಟ್‌ ಸಿಕ್ಕಿದೆ.

    ‘ಎಲ್ಲಿದ್ದೀರಾ ಕಾಮನ್​ ಮ್ಯಾನ್​ ಸಿಎಂ ಸಾರ್​, ಓರ್ವ ಹೆಣ್ಣು ಮಗಳಿಗೆ ನಿಮ್ಮ ಪಕ್ಷದ ಶಾಸಕ ಮಾಡಿರುವ ಮೋಸ ಗಮನಿಸಿ, ನ್ಯಾಯ ಕೊಡಿಸಿ‘ ಎಂದು ಮಹಿಳೆ ಮನವಿ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಶಾಸಕರೂ ವಿಧಾನಸೌಧ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಮಹಿಳೆ ಸೇರಿದಂತೆ ನಾಲ್ವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿತ್ತು.

    ಇದೀಗ ಈ ಪ್ರಕರಣ ಕುತೂಹಲ ಘಟ್ಟಕ್ಕೆ ಬಂದು ನಿಂತಿದೆ. ಆರೋಪಿ ಸ್ಥಾನದಲ್ಲಿ ಇರುವವರು ಕಲಬುರಗಿ ಜಿಲ್ಲೆಯ ಸೇಡಂ ಕ್ಷೇತ್ರದ ಬಿಜೆಪಿ ಶಾಸಕ ರಾಜ್​ಕುಮಾರ್ ಪಾಟೀಲ್ ತೇಲ್ಕೂರು. ಇವರಿಗೂ ತಮಗೂ 14 ವರ್ಷದ ಹಿಂದೆ ಸಂಬಂಧ ಇತ್ತು ಎಂದು ವಿವಾಹಿತ ಮಹಿಳೆ ಹೇಳಿದ್ದಾರೆ.

    ’ಶಾಸಕ ರಾಜ್​ಕುಮಾರ್ ಒಬ್ಬ ದೊಡ್ಡ ಮೋಸಗಾರ. ಅವನಿಂದ ನನಗೆ ಮಗುವಾಗಿದ್ದು, ಅವನಿಗೆ ಈಗ 14 ವರ್ಷ ವಯಸ್ಸು. ಆತ ಮಗ ಅಂತ ಶಾಸಕ ಒಪ್ಪಿಕೊಳ್ಳಲಿ’ ಎಂದು ಮಹಿಳೆ ಹೇಳಿದ್ದಾರೆ. ‘ನನಗೆ ಜೀವನ ಕೊಡುವಂತೆ ನಾನು ಶಾಸಕರನ್ನು ಕೇಳಿದೆ. ರಾತ್ರಿ 9 ಗಂಟೆ ತನಕ ಪೊಲೀಸ್ ಠಾಣೆಯಲ್ಲೇ ಇದ್ದೆ. ನನ್ನನ್ನು ಪೊಲೀಸರು ಕೂಡಿ ಹಾಕಿದ್ದರು. ರಾತ್ರಿ 9 ಗಂಟೆಯಾದ ಮೇಲೆ ನನ್ನನ್ನು ಠಾಣೆಯಿಂದ ಬಿಟ್ಟಿದ್ದಾರೆ’ ಎಂದು ಮಹಿಳೆ ಆರೋಪಿಸಿದ್ದಾರೆ.

    ಮಾಧ್ಯಮಗಳ ಮುಂದೆ ನಾನು ಹೋಗದಂತೆ ತಡೆಯಲಾಗಿತ್ತು. ಸೆಟಲ್‌ಮೆಂಟ್‌ ಮಾಡಿಕೊಂಡಿಲ್ಲ ಅಂದರೆ ಸುಮ್ಮನೆ ಬಿಡಲ್ಲ. ಕಾಂಗ್ರೆಸ್​ನವರು ಹೀಗೆ ಮಾಡುವಂತೆ ಹೇಳಿದ್ದಾರೆ ಎಂದು ಬರೆದುಕೊಡು ಅಂತ ಪೊಲೀಸರು ಆವಾಜ್‌ ಹಾಕಿದರು. ಅವರು ನನ್ನ ಮೊಬೈಲ್​ನ ಕೂಡ ಕಸಿದುಕೊಂಡಿದ್ದಾರೆ’ ಎಂದು ಮಹಿಳೆ ದೂರಿದ್ದಾರೆ.

    ಇದಕ್ಕೆ ಪ್ರತಿಕ್ರಿಯೆ ನೀಡಿರುವ ಶಾಸಕ ರಾಜಕುಮಾರ್‌, ಮಹಿಳೆ 2 ಕೋಟಿ ರೂ.ಗೆ ಬ್ಲ್ಯಾಕ್‌ಮೇಲ್ ಮಾಡಿದ್ದರು. ನನಗೆ ಬ್ಲ್ಯಾಕ್‌ಮೇಲ್ ಮಾಡಿದವರ ಬಗ್ಗೆ ಈಗ ಹೇಳುವುದಿಲ್ಲ. ವಿವರವಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದೇನೆ. ಮಹಿಳೆ ಬೇಕಿದ್ದರೆ ನ್ಯಾಯಕ್ಕಾಗಿ ಹೋರಾಟ ಮಾಡಲಿ. ಸಾಮಾಜಿಕ ಜಾಲತಾಣ ಬಿಟ್ಟು ಕಾನೂನು ಪ್ರಕಾರ ಮಾಡಲಿ, ನಾನೂ ಸಿದ್ಧ ಎಂದು ಕಣ್ಣೀರಿಟ್ಟಿದ್ದಾರೆ.

    ಜಮೀನು ವಿವಾದಕ್ಕೆ ಸಂಬಂಧಿಸಿದಂತೆ 2009 ರಲ್ಲಿ ಶಾಸಕರು, ಈ ಮಹಿಳೆ ಹಾಗೂ ಅವರ ಪತಿ ಜತೆ ಪರಿಚಯವಾಗಿದೆ. ಮಹಿಳೆಯು ತಮ್ಮ ಮಗನಿಗೆ ಶಾಲಾ ದಾಖಲಾತಿಗೆ ಶಾಸಕರ ಸಹಾಯ ಪಡೆದುಕೊಂಡಿದ್ದಾರೆ, ಇಷ್ಟೆಲ್ಲಾ ಮಾಡಿದ ಮೇಲೆ 2018 ನಲ್ಲಿ ಫೇಸ್​ಬುಕ್ ಮೂಲಕ ಅವರ ಮರ್ಯಾದೆಗೆ ಧಕ್ಕೆ ತರುವ ಬೆದರಿಕೆ ಹಾಕಿದ್ದಾರೆ. ಶಾಸಕರ ವಿರುದ್ಧ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ದೂರು ಕೊಡುವುದಾಗಿ ಬೆದರಿಸಿದ್ದಾರೆ ಎಂದು ತಿಳಿದುಬಂದಿದೆ.

    ಈ ಬಗ್ಗೆ ತನಿಖೆ ನಡೆಯುತ್ತಿರುವುದಾಗಿ ಬೆಂಗಳೂರು ಪೊಲೀಸ್‌ ಆಯುಕ್ತರು ತಿಳಿಸಿದ್ದಾರೆ.

    ‌ಎಲ್ಲಿದ್ದೀರಾ ಕಾಮನ್‌ಮ್ಯಾನ್‌ ಸಿಎಂ ಸಾರ್‌.. ನಿಮ್ಮ ಪಕ್ಷದ ಶಾಸಕನಿಂದ ನನಗೆ ಮಗುವಾಗಿದೆ, ನ್ಯಾಯ ಕೊಡ್ಸಿ….

    ಯಾವುದೇ ಚಟವಿಲ್ಲದಿದ್ದರೂ ವೀರ್ಯಾಣು ‘ನಿಲ್‌’ ಆಗುವುದೇಕೆ? ಮಕ್ಕಳಾಗುವುದಕ್ಕೆ ಇದರಿಂದ ಸಮಸ್ಯೆ ಇದೆಯೆ?

    FACTCHECK: ಲತಾ ಪಾರ್ಥಿವ ಶರೀರದ ಮೇಲೆ ಶಾರುಖ್ ಉಗುಳಿದರಾ? ಸತ್ಯಾಂಶ ಏನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts