VIDEO: ವರ ಹಾರ ಹಾಕಲು ಮುಂದಾಗುತ್ತಿದ್ದಂತೆಯೇ ಓಡಿಬಂದು ಸಿಂಧೂರವಿಟ್ಟ ಪ್ರೇಮಿ- ವೈರಲ್‌ ವಿಡಿಯೋಗೆ ದಂಗಾದ ಜನ!

marraige
Published on

ಲಖನೌ: ವರ ಇನ್ನೇನು ತಾಳಿ ಕಟ್ಟಬೇಕು ಎನ್ನುವಷ್ಟರದಲ್ಲಿ ಪ್ರೇಮಿ ಬಂದು ‘ನಿಲ್ಲಿ...’ ಎನ್ನುವ ಮೂಲಕ ಮದುವೆಯನ್ನು ನಿಲ್ಲಿಸುವ ದೃಶ್ಯಗಳನ್ನು ಚಲನಚಿತ್ರಗಳಲ್ಲಿ ನೋಡಿರುತ್ತೇವೆ. ಆದರೆ ಅಸಲಿಗೆ ಅಂಥದ್ದೇ ಒಂದು ಘಟನೆ ಉತ್ತರಪ್ರದೇಶದ ಗೋರಖ್‍ಪುರದಲ್ಲಿ ನಡೆದಿದೆ.

ಮದುವೆ ಮಂಟಪದೊಳಗೆ ನುಗ್ಗಿದ ಪ್ರಿಯರಕನೊಬ್ಬ ತನ್ನ ಪ್ರೇಯಸಿಗೆ ಸಿಂಧೂರವನ್ನು ಇಟ್ಟಿದ್ದಾನೆ. ವರ ವಧುವಿಗೆ ಮಾಲೆ ಹಾಕುತ್ತಿದ್ದಂತೆಯೇ ಓಡೋಡಿ ಬಂದಿರುವ ಪ್ರಿಯಕರ ಜೇಬಿನಲ್ಲಿ ತಂದಿರುವ ಸಿಂಧೂರವಿಟ್ಟು ಅಲ್ಲಿಗೆ ಮದುವೆ ಕಾರ್ಯ ಮುಗಿಸಿದ್ದಾನೆ. ಮುಹೂರ್ತಕ್ಕೆ ಸರಿಯಾಗಿ ಸಿಂಧೂರವಿಟ್ಟಿದ್ದಾನೆ!

ಇದರ ವಿಡಿಯೋ ಇದೀಗ ವೈರಲ್‌ ಆಗಿದ್ದು, ಜನರು ದಂಗುಬಡಿದಿದ್ದಾರೆ.

ಅಸಲಿಗೆ ಆಗಿದ್ದೇನೆಂದರೆ ಈ ಯುವಕ, ಯುವತಿಯ ಪ್ರೇಮಿ. ಆತ ನೌಕರಿಗಾಗಿ ಬೇರೆ ನಗರಕ್ಕೆ ಹೋದ ಸಂದರ್ಭವನ್ನೇ ಕಾದು, ಯುವತಿಯನ್ನು ಬೇರೆಯವರಿಗೆ ಕೊಟ್ಟು ಮದುವೆ ಮಾಡಲು ಸಿದ್ಧತೆ ನಡೆಸಿದ್ದಾರೆ. ಯುವತಿ ಬೇಡ ಎಂದರೂ ಕೇಳದೇ ಮದುವೆ ನಡೆದಿದೆ. ಈ ಸಂದರ್ಭದಲ್ಲಿ ಯುವತಿ ವಿಷಯವನ್ನು ಪ್ರೇಮಿಗೆ ಹೇಳಿದ್ದು, ಆತ ಮುಹೂರ್ತಕ್ಕೆ ಸರಿಯಾಗಿ ಬಂದು ಸಿಂಧೂರವಿಟ್ಟಿದ್ದಾನೆ. ಅಲ್ಲಿದ್ದವರು ತಡೆಯಲು ಯತ್ನಿಸಿದರೂ ಅದು ಸಫಲವಾಗಲಿಲ್ಲ.

ಇಲ್ಲಿದೆ ನೋಡಿ ವಿಡಿಯೋ:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net