More

    ಕುರಾನ್‌ ವಿರುದ್ಧ ಸಮರಸಾರಿದ್ದ ವಕ್ಫ್‌ ಬೋರ್ಡ್‌ ಅಧ್ಯಕ್ಷನ ಹಿನ್ನೆಲೆಯೇ ರೋಚಕ: ಹಿಂದೂಧರ್ಮ ಅಪ್ಪಿದ ಈ ರಿಜ್ವಿ ಯಾರು?

    ಲಖನೌ: ಷಿಯಾ ವಕ್ಫ್‌ ಬೋರ್ಡ್‌ನ ಅಧ್ಯಕ್ಷರಾಗಿದ್ದ ವಾಸಿಂ ರಿಜ್ವಿ ಇಸ್ಲಾಂ ಬಿಟ್ಟು ಹಿಂದೂ ಧರ್ಮವನ್ನು ಸೋಮವಾರ ಸ್ವೀಕರಿಸಿದ್ದು, ಇದು ಭಾರಿ ಸಂಚಲನವನ್ನೇ ಸೃಷ್ಟಿಸಿದೆ.

    ತಮಗೆ ಇಸ್ಲಾಂ ಬದಲು ಸನಾತನ ಧರ್ಮವೇ ಪ್ರೀತಿ ಎಂಬುದಾಗಿ ಹೇಳಿದ್ದಾರೆ. ಘಾಜಿಯಾಬಾದ್​​ನಲ್ಲಿರುವ ದಾಸ್ನಾ ದೇವಿ ದೇವಸ್ಥಾನದ ಮುಖ್ಯ ಅರ್ಚಕ ಸ್ವಾಮಿ ಯರಿ ನರ್ಸಿಂಗಾನಂದ ಅವರ ಸಮ್ಮುಖದಲ್ಲಿ ರಿಜ್ವಿ ಅವರು ಹಿಂದೂ ಧರ್ಮವನ್ನು ಸ್ವೀಕರಿಸಿದ್ದಾರೆ. ಸ್ವಾಮಿ ಯರಿ ನರ್ಸಿಂಗಾನಂದ ಅವರೇ ರಿಜ್ವಿ ಅವರಿಗೆ ಹಿಂದುತ್ವ ಬೋಧನೆ ಮಾಡಿದ್ದಾರೆ. ನಂತರ ರಿಜ್ವಿ ಅವರ ಹೆಸರನ್ನು ಜಿತೇಂದ್ರ ನಾರಾಯಣ ಸಿಂಗ್​ ತ್ಯಾಗಿ ಎಂದು ಮರುನಾಮಕರಣ ಮಾಡಲಾಗಿದೆ.

    ಅಷ್ಟಕ್ಕೂ ಈ ರಿಜ್ವಿ ಯಾರು? ಅವರು ಹಿಂದೂ ಧರ್ಮವನ್ನೇ ಆಯ್ದುಕೊಳ್ಳಲು ಕಾರಣವೇನು? ಇಸ್ಲಾಂ ವಿರುದ್ಧ ಅವರಿಗೆ ಯಾಕಿಷ್ಟು ನೋವು? ಇವರ ತಲೆ ಕಡಿದವರಿಗೆ ಒಂದು ಕೋಟಿ ರೂಪಾಯಿ ಬಹುಮಾನ ನೀಡುವುದಾಗಿ ಮುಸ್ಲಿಂ ಮುಖಂಡರು ಫತ್ವಾ ಹೊರಡಿಸಿದ್ದೇಕೆ? ಇತ್ಯಾದಿ ವಿವರಗಳು ಕೂಡ ರೋಚಕವಾಗಿದೆ.

    ಷಿಯಾ ವಕ್ಫ್‌ ಬೋರ್ಡ್‌ನ ಮುಖಂಡರಾಗಿದ್ದ ವಾಸಿ ರಿಜ್ವಿ ಅವರಿಗೆ ಮೊದಲಿನಿಂದಲೂ ಕುರಾನ್‌ನಲ್ಲಿರುವ ಕೆಲವೊಂದು ಅಂಶಗಳ ಮೇಲೆ ಭಾರಿ ಅಸಮಾಧಾನವಿತ್ತು. ಇವುಗಳಲ್ಲಿ 26 ಅಧ್ಯಾಯಗಳು ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿವೆ, ಹಿಂಸಾಚಾರವನ್ನು ಬೋಧಿಸುತ್ತವೆ, ಧರ್ಮ ಅಸಹಿಷ್ಣುತೆಗೆ ಕಾರಣವಾಗುತ್ತಿವೆ. ಮುಸ್ಲಿಂ ಅಲ್ಲದವರನ್ನು ದಾಸ್ಯರೆಂದು ಭಾವಿಸಬೇಕು ಎಂದು ಇದರ ಕೆಲವೊಂದು ಭಾಗಗಳಲ್ಲಿ ಹೇಳಲಾಗಿದೆ. ಅಂಥವರ ಶಿರಚ್ಛೇದನ ಮಾಡಿ ಎಂದು ಹೇಳುತ್ತದೆ. ಆದ್ದರಿಂದ ಈ ಅಧ್ಯಾಯಗಳನ್ನು ತೆಗೆದುಹಾಕಿ ಎನ್ನುವುದು ಅವರ ವಾದವಾಗಿತ್ತು.

    1400 ಬಂದ ಇಸ್ಲಾಂ ಧರ್ಮವೇ, ಇದು ಭಯೋತ್ಪಾದನಾ ಸಂಘಟನೆ. ಮನುಷ್ಯ ಮನುಷ್ಯನ ಮಧ್ಯೆ ದ್ವೇಷವನ್ನು ಹುಟ್ಟುಹಾಕುವ ಸಂಘಟನೆ. ಇಸ್ಲಾಂ ಧರ್ಮ ಒಪ್ಪದಿದ್ದರೆ ಶಿರಚ್ಛೇದನ ಮಾಡಿ ಎನ್ನಲಾಗುತ್ತದೆ. ಆದ್ದರಿಂದ ಈ ಭಾಗಗಳನ್ನು ತೆಗೆದುಹಾಕಬೇಕು ಎನ್ನುವುದು ಅವರ ವಾದವಾಗಿತ್ತು.

    ಆದ್ದರಿಂದ ಈ 26 ಅಧ್ಯಾಯಗಳನ್ನು ತೆಗೆದುಹಾಕುವಂತೆ ಕೋರಿ ಸುಪ್ರೀಂಕೋರ್ಟ್‌ ಮೊರೆಹೋಗಿದ್ದರು. ಆದರೆ ಅಲ್ಲಿ ಅವರ ಅರ್ಜಿ ವಜಾ ಆಗಿತ್ತು. ಧರ್ಮಕ್ಕೆ ಕುರಿತಂತೆ ಇದಾಗಲೇ ಸಾಕಷ್ಟು ತೀರ್ಪು ನೀಡಿ, ಇದರ ಮಧ್ಯೆ ಪ್ರವೇಶಿಸಿರುವ ಸುಪ್ರೀಂಕೋರ್ಟ್ ಈ ವಿಷಯದಲ್ಲಿಯೂ ತೀರ್ಪು ನೀಡಬೇಕು ಎಂಬ ರಿಜ್ವಿ ಅವರ ಮನವಿಯನ್ನು ಕೋರ್ಟ್‌ ತಿರಸ್ಕರಿಸಿತ್ತು.

    ಅಷ್ಟೊತ್ತಿಗೆ ಕೆಂಡಾಮಂಡಲವಾದ ಮುಸ್ಲಿಂ ಮುಖಂಡರು ಇವರ ಶಿರಚ್ಛೇದನಕ್ಕೆ ಫತ್ವಾ ಹೊರಡಿಸಿದ್ದರು. ಇವರ ಶಿರಚ್ಛೇದನ ಮಾಡಿದ ಮೊತ್ತವನ್ನು ಐದು ಲಕ್ಷ ರೂಪಾಯಿಯಿಂದ ಹಿಡಿದು ಒಂದು ಕೋಟಿ ರೂಪಾಯಿಗೆ ಏರಿಸಲಾಗಿತ್ತು. ಮಾತ್ರವಲ್ಲದೇ ಇವರು ಸತ್ತರೆ ಭಾರತದ ಯಾವುದೇ ಮುಸ್ಲಿಂ ಸ್ಮಶಾನದಲ್ಲಿ ಹೂಳಲು ಅವಕಾಶ ಕೊಡಬಾರದು ಎಂದು ಹೇಳಲಾಯಿತು.

    ಇದರ ನಡುವೆಯೇ ರಿಜ್ವಿ ಮೊಹಮ್ಮದ್​ ಎನ್ನುವ ಒಂದು ಪುಸ್ತಕ ಬಿಡುಗಡೆ ಮಾಡಿದ್ದರು. ಅದರಲ್ಲಿ ಪ್ರವಾದಿ ಮೊಹಮ್ಮದರ ವಿರುದ್ಧ ಆಕ್ಷೇಪಣೀಯ ಭಾಷೆ ಬಳಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್​ ಓವೈಸಿ ಕೂಡ ರಿಜ್ವಿ ವಿರುದ್ಧ ಹೈದರಾಬಾದ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಹಾಗೇ, ರಿಜ್ವಿಯ ಈ ನಡವಳಿಕೆ ಹಿಂದೆ ಇಸ್ಲಾಂ ವಿರೋಧಿ ಶಕ್ತಿಗಳಿವೆ ಎಂದೂ ಆರೋಪ ಮಾಡಿದ್ದರು.
    ಆದ್ದರಿಂದ ಇಸ್ಲಾಂ ತೊರೆದು ಹಿಂದೂ ಧರ್ಮವನ್ನು ಒಪ್ಪಿಕೊಳ್ಳಲು ರಿಜ್ವಾ ಮುಂದಾದರು. ಆದರೆ ಹಿಂದೂ ಧರ್ಮವೇ ಏಕೆ ಎನ್ನುವುದಕ್ಕೂ ಅವರಲ್ಲಿದೆ ಉತ್ತರ. ಇಸ್ಲಾಂ ಧರ್ಮವನ್ನು ತೊರೆಯಬೇಕೆಂಬ ನಿರ್ಧಾರಕ್ಕೆ ಅವರು ಬಂದಾಗ, ಘಾಜಿಯಾಬಾದ್​​ನಲ್ಲಿರುವ ದಾಸ್ನಾ ದೇವಿ ದೇವಸ್ಥಾನದ ಮುಖ್ಯ ಅರ್ಚಕ ಸ್ವಾಮಿ ಯರಿ ನರ್ಸಿಂಗಾನಂದ ಅವರ ಬಳಿ ಸಾಗಿ ಈ ಬಗ್ಗೆ ಹೇಳಿಕೊಂಡರು. ಆಗ ಸ್ವಾಮೀಜಿಯವರು ನಿಮಗೆ ಯಾವ ಧರ್ಮ ಇಷ್ಟವೋ ಅದನ್ನು ಆಯ್ಕೆ ಮಾಡಿಕೊಳ್ಳಿ ಎಂದರು.

    ಆದರೆ ಈ ಮೊದಲೇ ನಿರ್ಧರಿಸಿದಂತೆ ರಿಜ್ವಿ ಅವರು ತಮಗೆ ಹಿಂದೂ ಧರ್ಮವೇ ಇಷ್ಟ ಎಂದರು. ಅದಕ್ಕೆ ಅವರು ಕೊಟ್ಟ ಕಾರಣವೆಂದರೆ, ಮುಸ್ಲಿಮರು ಕೂಡ ಮೊದಲು ಹಿಂದೂಗಳೇ ಆಗಿದ್ದವರು. ಮೊಘಲರು ಸಾಮೂಹಿಕ ಮತಾಂತರ ಮಾಡಿ ನಮ್ಮನ್ನು ಮುಸ್ಲಿಂ ಮಾಡಿದ್ದಾರೆ. ಆದ್ದರಿಂದ ನಮ್ಮದಲ್ಲದ ಪರಂಪರೆಗೆ ಅಂತ್ಯ ಹಾಡಲೇಬೇಕಿದೆ. ಅದಕ್ಕಾಗಿ ಹಿಂದೂ ಧರ್ಮವನ್ನೇ ಆಯ್ದುಕೊಂಡಿದ್ದೇನೆ ಎಂದರು. ಆಗ ಸ್ವಾಮೀಜಿ ಅವರನ್ನು ಹಿಂದೂ ಧರ್ಮಕ್ಕೆ ಮತಾಂತರ ಮಾಡುವ ಪ್ರಕ್ರಿಯೆ ಮಾಡಿದ್ದಾರೆ.

    ಈ ನಡುವೆ, ರಿಜ್ವಿ ಹಿಂದು ಧರ್ಮಕ್ಕೆ ಮತಾಂತರಗೊಂಡ ಬಗ್ಗೆ ಮಾತನಾಡಿದ ಅಖಿಲ ಭಾರತೀಯ ಹಿಂದು ಮಹಾಸಭಾ ಅಧ್ಯಕ್ಷ ಸ್ವಾಮಿ ಚಕ್ರಪಾಣಿ ಮಹಾರಾಜ್​, ಮುಸ್ಲಿಂ ನಾಯಕರಾಗಿದ್ದ ವಾಸಿಂ ರಿಜ್ವಿ ಅವರು ಹಿಂದು ಧರ್ಮ ಸ್ವೀಕಾರ ಮಾಡಲು ಮುಂದಾಗಿದ್ದು ಸ್ವಾಗತಾರ್ಹ. ಅವರೀಗ ಹಿಂದೂ ಸನಾತನ ಧರ್ಮದ ಭಾಗವಾಗಿದ್ದಾರೆ. ಯಾವುದೇ ಮತಾಂಧರಿಗೂ ಈಗ ಅವರ ವಿರುದ್ಧ ಫತ್ವಾ ಹೊರಡಿಸಲು ಸಾಧ್ಯವಿಲ್ಲ. ಆದರೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅವರಿಗೆ ಸೂಕ್ತ ಭದ್ರತೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

    ಇಸ್ಲಾಂ ತೊರೆದು ಹಿಂದೂ ಧರ್ಮ ಸೇರಿದ ವಕ್ಫ್‌ ಬೋರ್ಡ್‌ ಮಾಜಿ ಅಧ್ಯಕ್ಷ: ರಾಜಕೀಯ ವಲಯದಲ್ಲಿ ಭಾರಿ ಕುತೂಹಲ

    ಅಪ್ಪು ಕನಸಿನ ‘ಗಂಧದ ಗುಡಿ’ ಕುರಿತು ಸಿಎಂ ಮಾಡಿರುವ ಟ್ವೀಟ್‌ಗೆ ಅಶ್ವಿನಿ ಪ್ರತಿಕ್ರಿಯೆ ಹೀಗಿದೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts