More

    ಇಸ್ಲಾಂ ತೊರೆದು ಹಿಂದೂ ಧರ್ಮ ಸೇರಿದ ವಕ್ಫ್‌ ಬೋರ್ಡ್‌ ಮಾಜಿ ಅಧ್ಯಕ್ಷ: ರಾಜಕೀಯ ವಲಯದಲ್ಲಿ ಭಾರಿ ಕುತೂಹಲ

    ಲಖನೌ: ಉತ್ತರಪ್ರದೇಶ ಷಿಯಾ ವಕ್ಫ್​ ಮಂಡಳಿಯ ಮಾಜಿ ಅಧ್ಯಕ್ಷ ವಾಸಿಂ ರಿಜ್ವಿ ಇಸ್ಲಾಂ ತೊರೆದು ಹಿಂದೂ ಧರ್ಮವನ್ನು ಸೋಮವಾರ (ಡಿ.6) ಸೇರ್ಪಡೆಯಾಗಿದ್ದಾರೆ. ಈ ಮೂಲಕ ರಾಜಕೀಯ ವಲಯದಲ್ಲಿಯೂ ಭಾರಿ ಕೋಲಾಹಲವೇ ಸೃಷ್ಟಿಯಾಗಿದೆ.

    ಘಾಜಿಯಾಬಾದ್​​ನಲ್ಲಿರುವ ದಾಸ್ನಾ ದೇವಿ ದೇವಸ್ಥಾನದ ಮುಖ್ಯ ಅರ್ಚಕ ಸ್ವಾಮಿ ಯರಿ ನರ್ಸಿಂಗಾನಂದ ಅವರ ಸಮ್ಮುಖದಲ್ಲಿ ರಿಜ್ವಿ ಅವರು ಹಿಂದೂ ಧರ್ಮವನ್ನು ಸ್ವೀಕರಿಸಿದ್ದಾರೆ. ಸ್ವಾಮಿ ಯರಿ ನರ್ಸಿಂಗಾನಂದ ಅವರೇ ರಿಜ್ವಿ ಅವರಿಗೆ ಹಿಂದುತ್ವ ಬೋಧನೆ ಮಾಡಿದ್ದಾರೆ.

    ಹಿಂದೂ ಧರ್ಮವನ್ನು ಸ್ವೀಕರಿಸಿದ ನಂತರ ರಿಜ್ವಿ ಅವರ ಹೆಸರನ್ನು ಜಿತೇಂದ್ರ ನಾರಾಯಣ ಸಿಂಗ್​ ತ್ಯಾಗಿ ಎಂದು ಮರುನಾಮಕರಣ ಮಾಡಲಾಗಿದೆ.

    ಅಷ್ಟಕ್ಕೂ ಅವರು ಇಂಥದ್ದೊಂದು ನಿರ್ಧಾರಕ್ಕೆ ರಿಜ್ವಾ ಬರಲು ಕಾರಣವೇನೆಂದರೆ, ಇವರು ಕುರಾನ್‌ನಲ್ಲಿರುವ ಕೆಲವೊಂದು ಅಂಶಗಳ ವಿರುದ್ಧ ಸುಪ್ರೀಂಕೋರ್ಟ್‌ ಮೊರೆ ಹೋಗಿದ್ದರು. ಇದರಲ್ಲಿರುವ ಕೆಲವು ಭಾಗಗಳು ಹಿಂಸಾಚಾರವನ್ನು ಬೋಧಿಸುತ್ತವೆ. ಹಾಗಾಗಿ ಅವುಗಳನ್ನು ತೆಗೆದುಹಾಕಬೇಕು ಎಂದು ಸುಪ್ರೀಂಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಆದರೆ ಅವರ ಅರ್ಜಿಯನ್ನು ಸುಪ್ರೀಂಕೋರ್ಟ್‌ ವಜಾ ಮಾಡಿತ್ತು.

    ಇದಾದ ಮೇಲೆ ರಿಜ್ವಾ ಅವರಿಗೆ ಮುಸ್ಲಿಂ ಸಮುದಾಯದಿಂದ ಬೆದರಿಕೆ ಬರಲು ಶುರುವಾಗಿತ್ತು. ಇವರನ್ನು ಹತ್ಯೆ ಮಾಡಿದವರ 5 ಲಕ್ಷ ಬಹುಮಾನ ಘೋಷಿಸಲಾಯಿತು, ನಂತರ ಈ ಮೊತ್ತವನ್ನು 10 ಲಕ್ಷ, 20 ಲಕ್ಷಕ್ಕೇ ಏರಿಸಿ ಕೊನೆಗೆ ಒಂದು ಕೋಟಿಗೆ ಏರಿಸಲಾಯಿತು. ಇದರಿಂದ ನೊಂದು ಇಸ್ಲಾಂ ಧರ್ಮವೇ ಬೇಡ ಎಂದು ರಿಜ್ವಿ ಹಿಂದೂ ಧರ್ಮವನ್ನು ಆಯ್ಕೆ ಮಾಡಿಕೊಂಡಿದ್ದಾರೆ.

    ಉತ್ತರ ಪ್ರದೇಶದ ಚುನಾವಣೆ ಸನ್ನಿಹಿತವಾಗುತ್ತಿರುವ ಬೆನ್ನಲ್ಲೇ ವಕ್ಫ್‌ ಬೋರ್ಡ್‌ನ ಅಧ್ಯಕ್ಷರಾಗಿದ್ದವರೊಬ್ಬರು ಹಿಂದೂ ಧರ್ಮಕ್ಕೆ ಮತಾಂತರವಾಗಿರುವುದು ರಾಜಕೀಯ ವಲಯದಲ್ಲಿ ಭಾರಿ ಕೋಲಾಹಲವನ್ನೇ ಸೃಷ್ಟಿಸಿದೆ. ಇವರು ಸನಾತನ ಧರ್ಮಕ್ಕೆ ಮತಾಂತರಗೊಂಡಿರುವುದನ್ನು ಬಿಜೆಪಿ ಸ್ವಾಗತಿಸಿದೆ. ಸಚಿವ ಡಾ.ನರೋತ್ತಮ್‌ ಮಿಶ್ರಾ ಅವರು ಕೂಡ ರಿಜ್ವಿ ಅವರ ಕುರಿತಾಗಿ ಒಳ್ಳೆಯ ಮಾತುಗಳನ್ನಾಡಿ ಅವರನ್ನು ಹಿಂದೂ ಧರ್ಮಕ್ಕೆ ಸ್ವಾಗತಿಸಿದ್ದಾರೆ. ಹಿಂದೂ ಧರ್ಮದ ಬಗ್ಗೆ ರಿಜ್ವಿ ಅವರು ಹೇಳಿರುವ ಮಾತುಗಳಿಂದ ಇವರು ಬಿಜೆಪಿಯನ್ನು ಸೇರ್ಪಡೆಗೊಳ್ಳುವ ಸಾಧ್ಯತೆ ಇದೆ ಎಂದೇ ಹೇಳಲಾಗುತ್ತಿದೆ. ಇದರಿಂದ ರಾಜಕೀಯ ಚಟುವಟಿಕೆ ಇನ್ನಷ್ಟು ಗರಿಗೆದರುತ್ತಿದೆ.

    ಅಪ್ಪು ಕನಸಿನ ‘ಗಂಧದ ಗುಡಿ’ ಕುರಿತು ಸಿಎಂ ಮಾಡಿರುವ ಟ್ವೀಟ್‌ಗೆ ಅಶ್ವಿನಿ ಪ್ರತಿಕ್ರಿಯೆ ಹೀಗಿದೆ…

    VIDEO: ಅಮ್ಮಾ ನಿನ್ನನ್ನು ಮಿಸ್‌ ಮಾಡಿಕೊಳ್ತಿದ್ದೆ ಎಂದು ಮಗ ಹೂಗುಚ್ಛ ಹಿಡಿದು ಬಂದರೆ, ಚಪ್ಪಲಿಯಿಂದ ಹಿಗ್ಗಾಮುಗ್ಗ ಥಳಿಸಿದ ತಾಯಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts