ಬೆಂಗಳೂರಿನಲ್ಲಿ ಚೊಚ್ಚಲ ಶತಕ ಸಿಡಿಸಿದ ಆರ್‌ಸಿಬಿ ತಂಡದ ನಾಯಕಿ: ಭಾರತ ಗೆಲುವಿನ ಆರಂಭ

1 Min Read
ಬೆಂಗಳೂರಿನಲ್ಲಿ ಚೊಚ್ಚಲ ಶತಕ ಸಿಡಿಸಿದ ಆರ್‌ಸಿಬಿ ತಂಡದ ನಾಯಕಿ: ಭಾರತ ಗೆಲುವಿನ ಆರಂಭ

ಬೆಂಗಳೂರು: ಉಪನಾಯಕಿ, ಬ್ಯಾಟುಗಾರ್ತಿ ಸ್ಮತಿ ಮಂದನಾ (117 ರನ್, 127 ಎಸೆತ, 12 ಬೌಂಡರಿ, 1 ಸಿಕ್ಸರ್) ಸಿಡಿಸಿದ ಭರ್ಜರಿ ಶತಕ ಹಾಗೂ ಪದಾರ್ಪಣೆಯಲ್ಲಿ ಆಶಾ ಶೋಭನಾ (21ಕ್ಕೆ 4) ನಡೆಸಿದ ಸ್ಪಿನ್ ದಾಳಿಯ ನೆರವಿನಿಂದ ಭಾರತ ಮಹಿಳಾ ತಂಡ ಮೊದಲ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಎದುರು 143 ರನ್‌ಗಳ ಬೃಹತ್ ಗೆಲುವು ದಾಖಲಿಸಿದೆ. ಇದರೊಂದಿಗೆ ಮೂರು ಪಂದ್ಯಗಳ ಸರಣಿಯಲ್ಲಿ ಹರ್ಮಾನ್‌ಪ್ರೀತ್ ಕೌರ್ ಪಡೆ 1-0 ಮುನ್ನಡೆ ಸಾಧಿಸಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್‌ಗೆ ಇಳಿಯಿತು. ಶೆಾಲಿ ವರ್ಮ (7), ಡಿ. ಹೇಮಲತಾ (12), ನಾಯಕಿ ಹರ್ಮಾನ್‌ಪ್ರೀತ್ ಕೌರ್ (10), ಜೆಮೀಮಾ ರೋಡ್ರಿಗಸ್ (17) ಹಾಗೂ ರಿಚಾ ೋಷ್ (3) ಅಗ್ರ ಕ್ರಮಾಂಕ ಬ್ಯಾಟರ್‌ಗಳ ವೈಲ್ಯದಿಂದ 99 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಅಲ್ಪಮೊತ್ತಕ್ಕೆ ಕುಸಿಯುವ ಭೀತಿ ಎದುರಿಸಿತು. ಆಗ ಸ್ಮತಿ ಮಂದನಾ ಹಾಗೂ ದೀಪ್ತಿ ಶರ್ಮ (37 ರನ್, 48 ಎಸೆತ, 3 ಬೌಂಡರಿ) ಜೋಡಿ 6ನೇ ವಿಕೆಟ್‌ಗೆ ನಡೆಸಿದ 81 ರನ್‌ಗಳ ಜತೆಯಾಟದಿಂದ ಚೇತರಿಸಿಕೊಂಡು 8 ವಿಕೆಟ್‌ಗೆ 265 ರನ್‌ಗಳ ಸವಾಲಿನ ಮೊತ್ತ ಪೇರಿಸಿತು. ಪ್ರತಿಯಾಗಿ ನಿರಂತರ ವಿಕೆಟ್ ಕಳೆದುಕೊಂಡ ದ.ಆಫ್ರಿಕಾ, 37.4 ಓವರ್‌ಗಳಲ್ಲಿ 122 ರನ್‌ಗಳಿಗೆ ಸರ್ವಪತನ ಕಂಡಿತು.

ಭಾರತ: 8 ವಿಕೆಟ್‌ಗೆ 265 (ಶೆಾಲಿ 7, ಮಂದನಾ 117, ಡಿ. ಹೇಮಲತಾ 12, ಹರ್ಮಾನ್‌ಪ್ರೀತ್ 10, ಜೆಮೀಮಾ 17, ರಿಚಾ 3, ದೀಪ್ತಿ 37, ಪೂಜಾ 31*, ರಾಧಾ 6, ಆಶಾ 8*, ಕಾಕ 47ಕ್ಕೆ 3, ಮಸಬಟಾ ಕ್ಲಾಸ್ 51ಕ್ಕೆ 2).

See also  ಔಷಧಿಗಳ ಮೇಲೆ QR ಕೋಡ್ ಕಡ್ಡಾಯ: ಆಗಸ್ಟ್ 1 ರಿಂದ ಹೊಸ ನಿಯಮ ಜಾರಿ...

ದ.ಆಫ್ರಿಕಾ: 37.4 ಓವರ್‌ಗಳಲ್ಲಿ 122 (ವೋಲ್ವರ್ಡ್ 4, ಬ್ರಿಟ್ಸ್ 18, ಸುನ್ನೆ ಲೂಜ್ 33, ಮರಿಜಾನ್ನೆ 24, ಸಿನಲೋ ಜ್ತಾ 27*, ಆಶಾ 21ಕ್ಕೆ 4, ದೀಪ್ತಿ 10ಕ್ಕೆ 2).

1. ಸ್ಮತಿ ಮಂದನಾ ತವರಿನಲ್ಲಿ ಸಿಡಿಸಿದ ಮೊದಲ ಏಕದಿನ ಶತಕ ಇದಾಗಿದ್ದು, ದ.ಆಫ್ರಿಕಾ ವಿರುದ್ಧ 2ನೇ ಸೆಂಚುರಿ ಎನಿಸಿದೆ.

Share This Article