More

    ಅರ್ಚಕರ, ಪುರೋಹಿತರ ಒಕ್ಕೂಟ ಅಸ್ತಿತ್ವಕ್ಕೆ

    ಕಲಬುರಗಿ: ರಾಜ್ಯದಲ್ಲಿ ಹಿಂದೂ ದೇವಾಲಯಗಳ ಅರ್ಚಕರ ಮತ್ತು ಪುರೋಹಿತರ ಶ್ರೇಯೋಭಿವೃದ್ಧಿ ಮತ್ತು ಸಂಘಟನೆಯ ಹಿತ ದೃಷ್ಟಿಯಿಂದ ಹಿಂದೂ ದೇವಾಲಯಗಳ ಅರ್ಚಕರ ಮತ್ತು ಪುರೋಹಿತರ ಒಕ್ಕೂಟ ಅಸ್ತಿತ್ವಕ್ಕೆ ತರಲಾಗಿದೆ ಎಂದು ಒಕ್ಕೂಟದ ರಾಜ್ಯ ಅಧ್ಯಕ್ಷ ಡಾ.ಎಂ.ಎಸ್.ವಿಶ್ವನಾಥ ದೀಕ್ಷಿತ್ ಹೇಳಿದರು.
    ಈ ಕುರಿತು ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೂ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಅರ್ಚಕರ ಸ್ಥಿತಿ ಚಿಂತಾಜನಕವಾಗಿದೆ. ಅವರ ಸಂಕಷ್ಟಗಳಿಗೆ ಸ್ಪಂದಿಸುವ ಉದ್ದೇಶದಿಂದ ಒಕ್ಕೂಟ ರಚಿಸಲಾಗಿದೆ. ಸದಸ್ಯತ್ವ ಅಭಿಯಾನ ಆರಂಭವಾಗಿದ್ದು, ಆಸಕ್ತರು ಸದಸ್ಯರಾಗಬಹುದು ಎಂದು ತಿಳಿಸಿದರು.
    ಪುರೋಹಿತರು ಹಾಗೂ ಅರ್ಚಕರ ಮನೋವಿಕಾಸ ಮತ್ತು ಬೌದ್ಧಿಕ ಬೆಳವಣಿಗೆಗಾಗಿ ಸಂಸ್ಕೃತ ಶಿಕ್ಷಣ ನೀಡುವುದು, ವೇದ ತರಬೇತಿ ಆಯೋಜನೆ ಮತ್ತು ಸನಾತನ ಪುರಾಣ ಗ್ರಂಥಗಳ ಅವಲೋಕನ ಮಾಡಿಸುವುದು, ಹಿಂದೂ ಧರ್ಮ ರಕ್ಷಣೆಗಾಗಿ ಧಾರ್ಮಿಕ ಶಿಕ್ಷಣ ನೀಡುವುದು, ದೇವಸ್ಥಾನಗಳಲ್ಲಿ ಧಾರ್ಮಿಕ ಸಭೆ ಆಯೋಜನೆ, ಸಂಕಷ್ಟದಲ್ಲಿರುವ ಅರ್ಚಕರ, ಪುರೋಹಿತರ ನೆರವಿಗೆ ಸ್ಪಂದನೆ, ಆರೋಗ್ಯಕರ ಸಮಾಜ ನಿರ್ಮಾಣ ಒಕ್ಕೂಟದ ಹಿಂದಿನ ಉದ್ದೇಶ ಎಂದು ವಿವರಿಸಿದರು.
    ಈ ಒಕ್ಕೂಟದ ಕಲಬುರಗಿ ಜಿಲ್ಲಾಧ್ಯಕ್ಷರಾಗಿ ಶಿವರುದ್ರ ಮಠಪತಿ ಅವರನ್ನು ನೇಮಕ ಮಾಡಲಾಗಿದ್ದು, ಹಿಂದೂ ದೇಗುಲಗಳ ಎಲ್ಲ ಅರ್ಚಕರು, ಪುರೋಹಿತರು ಮಠಪತಿ ಅವರ ಮೊ.ನಂ- ೭೮೯೯೬೭೦೩೭೧ ಸಂಪರ್ಕಿಸಿ ಸದಸ್ಯರಾಗಬೇಕು ಎಂದು ಮನವಿ ಮಾಡಿದರು.
    ಹಿಂದೂಧರ್ಮ ರಕ್ಷಣೆಗೆ ಪ್ರತಿಯೊಬ್ಬರೂ ಶ್ರಮಿಸಬೇಕಿದೆ. ಸಂದಿಗ್ಧ ಸ್ಥಿತಿಯಲ್ಲಿರುವ ಗೋ ಮಾತೆ ಸಂರಕ್ಷಿಸುವ ಹೊಣೆ ಎಲ್ಲರ ಮೇಲಿದೆ ಎಂದರು.
    ಒಕ್ಕೂಟದ ಜಿಲ್ಲಾಧ್ಯಕ್ಷ ಶಿವರುದ್ರ ಮಠಪತಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts