ಬ್ಲೂ ಫಿಲ್ಮ್ಂನಿಂದ ದಿನಕ್ಕೆ ಎಂಟು ಲಕ್ಷ ರೂ: ವಿದೇಶದೊಂದಿಗೆ ನಂಟು: ಕುಂದ್ರಾ ಕುರಿತ ಸ್ಫೋಟಕ ಮಾಹಿತಿ

RAJ
Published on

ಮುಂಬೈ: ನಟಿ ಶಿಲ್ಪಾ ಶೆಟ್ಟಿ ಗಂ ಡ, ಉದ್ಯಮಿ ರಾಜ್‌ ಕುಂದ್ರಾ ಪೋರ್ನ್‌ ವಿಡಿಯೋ ಪ್ರಕರಣದಲ್ಲಿ ಬಂಧಿಯಾಗಿದ್ದು, ಇವರ ಈ ವಿಡಿಯೋದ ಕುರಿತಾಗಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಇದರ ಬೆನ್ನಲ್ಲೇ ಭಯಾನಕ ಎನ್ನಿಸುವ ಸತ್ಯಗಳು ಒಂದೊಂದಾಗಿ ಹೊರಬರುತ್ತಿವೆ.

ರಾಜ್ ಕುಂದ್ರಾ ಅವರ ವ್ಯವಹಾರ ಮತ್ತು ಕಂಪೆನಿ ತಯಾರಿಸುತ್ತಿದ್ದ ಬ್ಲೂ ಫಿಲ್ಮ್ಂ ಕುರಿತಾಗಿ ಪತ್ರಿಕಾಗೋಷ್ಠಿಯಲ್ಲಿ ಪೊಲೀಸರು ಮಾಹಿತಿ ನೀಡಿದ್ದಾರೆ. ಬ್ರಿಟನ್ ಅಶ್ಲೀಲ ಚಿತ್ರೋದ್ಯಮದ ಜತೆ ಇವರ ನಂಟಿದೆ. ಕುಂದ್ರಾ ಈ ವ್ಯವಹಾರವನ್ನು ಕೇವಲ 18 ತಿಂಗಳ ಹಿಂದೆಯೇ ಪ್ರಾರಂಭಿಸಿದರು. ಅದು ವೇಗವಾಗಿ ಬೆಳೆಯಿತು ಮತ್ತು ಅವರು ಪ್ರತಿದಿನ 6-8 ಲಕ್ಷ ರೂ. ಗಳಿಸಲು ಪ್ರಾರಂಭಿಸಿದರು. ಲಂಡನ್‌ ಮೂಲದ ಸಂಬಂಧಿ ಪ್ರದೀಪ್ ಬಕ್ಷಿಯ ಕೆನ್ರಿನ್ ಲಿಮಿಟೆಡ್ ಜೊತೆ ಕೈ ಜೋಡಿಸಿ ಈ ಕೃತ್ಯ ಮಾಡುತ್ತಿದ್ದರು ಎಂದು ಜಂಟಿ ಪೊಲೀಸ್ ಆಯುಕ್ತ (ಅಪರಾಧ) ಮಿಲಿಂದ್ ಭರಂಬೆ ಹೇಳಿದ್ದಾರೆ.

ಇದರಿಂದ ಪ್ರತಿ ದಿನ ಕುಂದ್ರಾ ಲಕ್ಷ ರೂಪಾಯಿಗಿಂತಲೂ ಅಧಿಕ ಸಂಪಾದನೆ ಮಾಡುತ್ತಿದ್ದಾರೆ. ಮೊದಮೊದಲು ದಿನಕ್ಕೆ 2-3 ಲಕ್ಷ ಮಾತ್ರ ಆದಾಯಗಳಿಸುತ್ತಿದ್ದರು. ಆನಂತರ ಪ್ರತಿದಿನ 6 ರಿಂದ 8 ಲಕ್ಷ ರೂ. ಸಂಪಾದನೆ ಮಾಡತೊಡಗಿದರು ಎಂದಿದ್ದಾರೆ. ಭಾರತದ ಹಾಟ್‌ಶಾಟ್ ಎಂಬ ಆ್ಯಪ್‌ಗೆ ಪೋರ್ನ್‌ ವಿಡಿಯೋಗಳನ್ನು ಅಪ್‌ಲೋಡ್ ಮಾಡಲು ಸಾಧ್ಯವಾಗದ ಕಾರಣ ಅವುಗಳನ್ನು ವಿ- ಟ್ರಾನ್ಸ್‌ಫರ್ ಮೂಲಕ ವಿದೇಶಕ್ಕೆ ಕಳುಹಿಸುತ್ತಿದ್ದರು. ಏಕೆಂದರೆ ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಈ ಆ್ಯಪ್‌ಗಳನ್ನು ತೆಗೆದುಹಾಕಲಾಗಿದೆ. ವಿದೇಶಕ್ಕೆ ಕಳುಹಿಸುತ್ತಿರುವ ಮಾಹಿತಿ ಸಿಕ್ಕ ಕೂಡಲೇ ಅದರ ಬೆನ್ನತ್ತಿ ಹೋದಾಗ ರಾಜ್‌ ಕುಂದ್ರಾ ಇದರ ಕಿಂಗ್‌ಪಿನ್‌ ಎಂದು ಗೊತ್ತಾಯಿತು ಎಂದಿದ್ದಾರೆ.

ಇಲ್ಲಿಯವರೆಗೆ ನಾವು ವಿವಿಧ ಖಾತೆಗಳಲ್ಲಿ 7.5 ಕೋಟಿ ರೂಗಳನ್ನು ಸ್ಥಗಿತಗೊಳಿಸಿದ್ದೇವೆ'. ಕೆಲವು ಮಹಿಳೆಯರು ದೂರು ದಾಖಲು ಮಾಡಿದ್ದಾರೆ. ಹೆಚ್ಚು ಪ್ರಚಲಿತದಲ್ಲಿರುವ ವೆಬ್ ಶೋಗಳಲ್ಲಿ ಅವಕಾಶ ನೀಡುವ ನೆಪದಲ್ಲಿ ಸಣ್ಣ ಸಣ್ಣ ನಟಿಯರನ್ನು ಆಮಿಷಕ್ಕೆ ಒಳಪಡಿಸಲಾಗಿದೆ. ಬೋಲ್ಡ್‌ ಸೀನ್‌ಗಳಲ್ಲಿ ನಟಿಸುವಂತೆ ಕೇಳಲಾಗಿದೆ. ಅವರ ಇಚ್ಛೆಗೆ ವಿರುದ್ದವಾಗಿ ಅರೆ-ನಗ್ನ ಮತ್ತು ನಗ್ನ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net