'ಈ ಮೊಲವನ್ನು ನೀವೇನಾದ್ರೂ ನೋಡಿರುವಿರಾ? ಸುಳಿವು ನೀಡಿ... ಎರಡು ಲಕ್ಷ ಬಹುಮಾನ ಒಯ್ಯಿರಿ...'

rabit
Published on

ಬ್ರಿಟನ್​ : ಈ ಚಿತ್ರದಲ್ಲಿ ಕಾಣಿಸುತ್ತಿರುವುದು ಜಗತ್ತಿನ ಅತ್ಯಂತ ದೊಡ್ಡ ಮೊಲ. ಇದರ ಅಳತೆ ನಾಲ್ಕು ಅಡಿ ಮೂರು ಇಂಚು. ಇದೇ ಕಾರಣಕ್ಕೆ ಇದು ಗಿನ್ನೆಸ್​ ದಾಖಲೆಯ ಪುಟವನ್ನೂ ಸೇರಿದೆ. 2010ರಲ್ಲಿ ಇದು ವಿಶ್ವದ ಅತ್ಯಂತ ದೊಡ್ಡ ಮೊಲ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಇದರ ಹೆಸರು ಡೆರಿಯಸ್​. ಆದರೆ ದುರದೃಷ್ಟವಶಾತ್​ ಇದನ್ನೀತ ಯಾರೋ ಕಳುವು ಮಾಡಿಕೊಂಡು ಹೋಗಿದ್ದಾರೆ. ಬ್ರಿಟನ್​ದ ಶೈರ್​ ಎಂಬ ಪ್ರದೇಶದ ನಿವಾಸಿ ಆ್ಯನೇಟ್​ ಅಡ್ವರ್ಡ್​ ಎಂಬುವವರು ಇದರ ಮಾಲೀಕರು. ತಮ್ಮ ಮುದ್ದಿನ ದಾಖಲೆಯ ಮೊಲವನ್ನು ಕಳೆದುಕೊಂಡಿರುವ ಇವರು ಇದೀಗ ಅದನ್ನು ಹುಡುಕಿ ಕೊಡುವಂತೆ ಜಾಹೀರಾತು ನೀಡಿದ್ದು ಅದೀಗ ವೈರಲ್​ ಆಗಿದೆ.

ಏಕೆಂದರೆ ಈ ಮೊಲವನ್ನು ಹುಡುಕಿಕೊಟ್ಟವರಿಗೆ ಎರಡು ಲಕ್ಷ ನಗದು ಬಹುಮಾನ ನೀಡುವುದಾಗಿ ಆ್ಯನೇಟ್​ ಅಡ್ವರ್ಡ್ ಹೇಳಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿಕೊಂಡಿರುವ ಅವರು, ತಮ್ಮ ಮುದ್ದಿನ ಮೊಲವನ್ನು ಹುಡುಕಿಕೊಡಿ, ಇಲ್ಲವೇ ಸುಳಿವು ನೀಡಿ. ಅದು ಸಿಕ್ಕರೆ ಎರಡು ಲಕ್ಷ ರೂಪಾಯಿ ಬಹುಮಾನ ನೀಡುತ್ತೇವೆ ಎಂದು ಮನವಿ ಮಾಡಿಕೊಂಡಿದ್ದಾರೆ.

ನಮ್ಮ ಮೊಲವು ಗರ್ಭ ಧರಿಸಿದೆ. ಅದರ ಹೊಟ್ಟೆಯಲ್ಲಿರುವ ಪುಟ್ಟ ಕಂದನಿಗಾದರೂ ಯಾರಾದರೂ ದಯತೋರಿ. ದಯವಿಟ್ಟು ಹುಡುಕಿಕೊಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net