

ಪುರಿ: ಟೋಕಿಯೊದಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ನಲ್ಲಿ ಬ್ಯಾಂಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡು ಭಾರತದ ಕೀರ್ತಿ ಪತಾಕೆ ಹಾರಿಸಿದ್ದಾರೆ.
ಅವರನ್ನು ವಿಶೇಷವಾಗಿ ಅಭಿನಂದಿಸಿರುವ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ಸಿಂಧು ಅವರ ಕಲಾಕೃತಿಯನ್ನು ಮರಳಿನಿಂದ ರಚಿಸಿದ್ದಾರೆ.
ಒಡಿಶಾದ ಕಡಲತೀರದಲ್ಲಿ ಮರಳಿನಲ್ಲಿ ಸಿಂಧು ಹಾಗೂ ಅವರ ಕಂಚಿನ ಪದಕವನ್ನು ಹೊಂದಿರುವ ಕಲಾಕೃತಿಯನ್ನು ಪಟ್ನಾಯಕ್ ಅವರು ರಚಿಸಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಚಿತ್ರಕ್ಕೆ ಕಲಾವಿದ ಪಟ್ನಾಯಕ್, 'ನಿಮ್ಮ ಅದ್ಭುತ ಪ್ರದರ್ಶನದಿಂದ ಇಡೀ ದೇಶವನ್ನು ಹೆಮ್ಮೆಪಡುವಂತೆ ಮಾಡಿದ್ದೀರಿ' ಎಂದು ಬರೆದಿದ್ದಾರೆ.
ಸೆಮಿ ಫೈನಲ್‌ನಲ್ಲಿ ಚಿನ್ನದ ಪದಕದ ಕನಸು ನುಚ್ಚುನೂರಾಗುತ್ತಿದ್ದಂತೆಯೇ ಸಿಂಧು ಅವರು ಕಂಚಿನ ಪದಕಕ್ಕಾಗಿ ಭಾರಿ ಸಾಹಸ ಪಟ್ಟಿದ್ದರು. ನಂತರ ಚೀನಾದ ಹೀ ಬಿಂಗ್ ಜಿಯಾವೋ ವಿರುದ್ಧ 21-13, 21-15 ನೇರ ಗೇಮ್‌ಗಳಲ್ಲಿ ಗೆಲುವು ದಾಖಲಿಸಿ ಕಂಚನ್ನು ಗೆದ್ದರು.