

ನಮ್ಮ ತಾಯಿಯವರ ಹೆಸರಿನಲ್ಲಿ ಎರಡು ಸೈಟು ಮತ್ತು ಒಂದು ಮನೆ ಇತ್ತು. ಒಂದು ದೊಡ್ಡ ಸೈಟನ್ನು ಅವರು ಬದುಕಿದ್ದಾಗಲೇ, ನನ್ನ ತಮ್ಮನ ಹೆಂಡತಿಗೆ ರಿಜಿಸ್ಟರ್ ದಾನ ಪತ್ರ ಮಾಡಿದ್ದರು. ಈಗ ಇನ್ನೊಂದು ಚಿಕ್ಕ ಸೈಟನ್ನು ನನಗೆ ಕೊಡು. ಮನೆಯಲ್ಲಿ ಇಬ್ಬರೂ ಸಮಭಾಗ ಮಾಡಿಕೊಳ್ಳೋಣ ಎಂದರೆ ನನ್ನ ತಮ್ಮ ಒಪ್ಪುತ್ತಿಲ್ಲ., ಮನೆಯಲ್ಲೂ ಸೈಟಿನಲ್ಲಿಯೂ ಇಬ್ಬರಿಗೂ ಸಮಭಾಗ ಬೇಕು ಎನ್ನುತ್ತಿದ್ದಾನೆ, ಇದು ಅನ್ಯಾಯವಲ್ಲವೇ?
ಉತ್ತರ: ನಿಮ್ಮ ತಾಯಿಯವರು ಅವರು ಬದುಕಿದ್ದಾಗಲೇ ಸ್ವ ಇಚ್ಛೆಯಿಂದ ನಿಮ್ಮ ತಮ್ಮನ ಹೆಂಡತಿಗೆ ದಾನ ಪತ್ರ ಕೊಟ್ಟಿರುವುದರಿಂದ, ನೀವು ಅದನ್ನು ಈಗ ಲೆಕ್ಕಕ್ಕೆ ತೆಗೆದುಕೊಳ್ಳಲಾಗುವುದಿಲ್ಲ. ನಿಮ್ಮ ತಾಯಿ ತೀರಿಕೊಂಡಾಗ ಅವರು ಬಿಟ್ಟು ಹೋಗಿರುವ ಆಸ್ತಿಗಳು ಮಾತ್ರ ಹಂಚಿಕೆಗೆ ಬರುತ್ತದೆ. ಈಗ ಒಂದು ಸೈಟು ಮತ್ತು ಮನೆಯಲ್ಲಿ, ನಿಮ್ಮ ತಮ್ಮನಿಗೂ ಮತ್ತು ನಿಮಗೂ ಸಮಪಾಲು ಇರುತ್ತದೆ. ಕೋರ್ಟಿಗೆ ಹೋದರೂ ನಿಮಗೆ ಅರ್ಧ ಭಾಗವೇ ಸಿಗುತ್ತದೆ, ಇಬ್ಬರೂ ಕೂತು ಮಾತಾಡಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವುದು ಒಳ್ಳೆಯದು.