ಕೋರ್ಟ್​ ಆದೇಶಕ್ಕೆ ನೀಡದ ಕಿಮ್ಮತ್ತು: ಉದ್ಯಮಿ ವಿಜಯ್​ ಮಲ್ಯಗೆ ಜೈಲು ಶಿಕ್ಷೆ ವಿಧಿಸಿದ ಸುಪ್ರೀಂ

vijay malya
Published on

ನವದೆಹಲಿ: ಉದ್ಯಮಿ ವಿಜಯ್​ ಮಲ್ಯ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇವರಿಗೆ ಸುಪ್ರೀಂಕೋರ್ಟ್​ ನಾಲ್ಕು ತಿಂಗಳ ಶಿಕ್ಷೆ ವಿಧಿಸಿದೆ, ಜತೆಗೆ ಎರಡು ಸಾವಿರ ರೂಪಾಯಿಗಳ ದಂಡ ವಿಧಿಸಿದೆ.

2017ರ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ನಿಂದನೆ ಪ್ರಕರಣ ಇದಾಗಿದೆ. ಕೋರ್ಟ್​ ಆದೇಶಗಳನ್ನು ಉಲ್ಲಂಘಿಸಿ ತಮ್ಮ ಮಕ್ಕಳಿಗೆ 40 ಮಿಲಿಯನ್ ಡಾಲರ್ ಹಣ ವರ್ಗಾವಣೆ ಮಾಡಿದ ಆರೋಪ ಇವರ ಮೇಲೆ ಇತ್ತು. ಇದಕ್ಕೆ ಸಂಬಂಧಿಸಿದ ವಿಚಾರಣೆಗೆ ಅವರು ಖುದ್ದು ಹಾಜರಿ ಆಗಬೇಕಿತ್ತು. ಆದರೆ ಪದೇ ಪದೇ ತಪ್ಪಿಸಿಕೊಂಡ ಹಿನ್ನೆಲೆಯಲ್ಲಿ ಇದು ನ್ಯಾಯಾಂಗ ನಿಂದನೆ ಎಂದಿರುವ ಕೋರ್ಟ್​, ಶಿಕ್ಷೆ ವಿಧಿಸಿದೆ. ದಂಡವನ್ನು ನಾಲ್ಕು ವಾರಗಳಲ್ಲಿ ನೀಡುವಂತೆ ಹೇಳಿದೆ. ಸುಪ್ರೀಂಕೋರ್ಟ್​ನ ಕಾನೂನು ಸೇವಾ ಪ್ರಾಧಿಕಾರಕ್ಕೆ ಠೇವಣಿ ಇಡಬೇಕು ಎಂದು ಹೇಳಿದೆ.

ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘಿಸಿ 2017ರಲ್ಲಿ ದೇಶ ಬಿಟ್ಟು ಹೋಗಿದ್ದ ಉದ್ಯಮಿ ವಿಜಯ್ ಮಲ್ಯ ನಂತರ ತಮ್ಮ ಮಕ್ಕಳಿಗೆ 40 ಮಿಲಿಯನ್ ಡಾಲರ್ ವರ್ಗಾಯಿಸಿದ್ದರು. ಈ ಪ್ರಕರಣದ ವಿಚಾರಣೆಯನ್ನು ಕೋರ್ಟ್​ ನಡೆಸುತ್ತಿದೆ.

ಕೋರ್ಟ್​ ಆದೇಶದ ಹೊರತಾಗಿಯೂ ಹಾಜರಾಗದ ಅವರು, ತಮ್ಮ ನಡವಳಿಕೆ ಬಗ್ಗೆ ಪಶ್ಚಾತ್ತಾಪ ತೋರಿಸಲಿಲ್ಲ. ಶಿಕ್ಷೆಯ ವಿಚಾರಣೆಯ ಸಮಯದಲ್ಲಿ ಹಾಜರಾಗಲಿಲ್ಲ. ಕಾನೂನಿನ ಘನತೆ ಎತ್ತಿಹಿಡಿಯಲು ಅವರಿಗೆ ಶಿಕ್ಷೆ ವಿಧಿಸಬೇಕು' ಎಂದು ಬ್ಯಾಂಕ್ ಒಕ್ಕೂಟದ ಪರ ವಕೀಲರು ವಾದ ಮಂಡನೆ ಮಾಡಿದ್ದರು. ಬ್ಯಾಂಕ್ ಒಕ್ಕೂಟದ ವಾದ ಪುರಸ್ಕರಿಸಿ ಸುಪ್ರೀಂ ಕೋರ್ಟ್ ಈ ಆದೇಶ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net