ಆಸ್ತಿ ವಿಭಾಗದ ವಿಷಯದಲ್ಲಿ ಅಪ್ಪ ಜೀವಿತಕಾಲದಲ್ಲಿ ಪ್ರಶ್ನೆ ಮಾಡದ್ದನ್ನು ಅವರ ಮಗ ಮಾಡುವಂತಿಲ್ಲ

nyayadevate
Published on
ನಮ್ಮ ತಂದೆಗೂ ನಮ್ಮ ಚಿಕ್ಕಪ್ಪನಿಗೂ ಭಾಗ ಆಗಿ ಮೂವತ್ತು ವರ್ಷಗಳಿಗೆ ಮೇಲಾಗಿದೆ. ನಮ್ಮ ಚಿಕ್ಕಪ್ಪ ತೀರಿಕೊಂಡು ಮೂರು ವರ್ಷಗಳಾಗಿವೆ. ಈಗ ನಮ್ಮ ಚಿಕ್ಕಪ್ಪನ ಮಗ, ಅವರ ತಂದೆ ಹಾಗೂ ನಮ್ಮ ತಂದೆಯ ಮಧ್ಯೆ ಭಾಗವೇ ಆಗಿಲ್ಲ , ಎಲ್ಲ ಆಸ್ತಿಗಳಲ್ಲೂ ಭಾಗ ಆಗಬೇಕು ಎಂದು ದಾವೆ ಹಾಕುತ್ತೇನೆ ಎಂದು ಹೆದರಿಸುತ್ತಿದ್ದಾನೆ. ಪಾಲು ಪಟ್ಟಿಗೆ ನಮ್ಮ ತಂದೆ ಸಹಿಯೇಹಾಕಿಲ್ಲ ಎಂದು ಸುಳ್ಳು ಹೇಳುತ್ತಿದ್ದಾನೆ. ದಾವೆಯಲ್ಲಿ ನಮ್ಮ ತಂದೆಯ, ಮತ್ತು ನನ್ನ ಸ್ವಯಾರ್ಜಿತ ಆಸ್ತಿಗಳನ್ನೂ ಸೇರಿಸುತ್ತೇನೆ ಎನ್ನುತ್ತಿದ್ದಾನೆ. ನಮಗೆ ತೊಂದರೆ ಆಗುತ್ತದೆಯೇ?

ಉತ್ತರ: ಮೂವತ್ತು ವರ್ಷಗಳ ಹಿಂದೆ ಆಗಿರುವ ವಿಭಾಗವನ್ನು ಈಗ ಕದಲಿಸುವಂತಿಲ್ಲ. ಅದರಲ್ಲಿ ನಿಮ್ಮ ಚಿಕ್ಕಪ್ಪನ ಸಹಿ ನಿಜವಾಗಿಯೇ ಇದ್ದರೆ ನೀವು ಹೆದರ ಬೇಕಾಗಿಲ್ಲ. ಪಾಲು ಪಟ್ಟಿಯಂತೆ ಅವರವರ ಹೆಸರಿಗೆ ಖಾತೆ ಪಹಣಿ ಬಂದಿದ್ದು, ಪಾಲು ಪಟ್ಟಿ ʼಆಕ್ಟೆಡ್‌ ಅಪಾನ್‌ʼ ಆಗಿದ್ದರೆ / ಜಾರಿಗೆ ಬಂದಿದ್ದರೆ, ನೀವು ಚಿಂತೆ ಮಾಡಬೇಡಿ.

ನಿಮ್ಮ ಚಿಕ್ಕಪ್ಪ ತಮ್ಮ ಜೀವಿತ ಕಾಲದಲ್ಲಿ ಪ್ರಶ್ನೆ ಮಾಡದ್ದನ್ನು ಈಗ ಅವರ ಮಗ ಮಾಡುವಂತಿಲ್ಲ. ಮೇಲಾಗಿ ನಿಮ್ಮ ತಂದೆಯ ಮತ್ತು ನಿಮ್ಮ ಸ್ವಯಾರ್ಜಿತ ಆಸ್ತಿಗಳಲ್ಲಿ ಅವರಿಗೆ ಯಾವ ಹಕ್ಕೂ ಇರುವುದಿಲ್ಲ. ಆದರೆ, ಯಾವ ಯಾವ ಆಸ್ತಿಗಳು ನಿಮ್ಮ ಸ್ವಯಾರ್ಜಿತ ಆಸ್ತಿಗಳು ಎನ್ನುವುದನ್ನು ಸಾಬೀತು ಮಾಡುವ ಹೊಣೆಗಾರಿಕೆ ನಿಮ್ಮ ಮೇಲೆ ಇರುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net